ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸಚಿವರ ಪ್ರಯಾಣದ ಮೊತ್ತ ಎಷ್ಟು ಗೊತ್ತೆ?

By Vanitha
|
Google Oneindia Kannada News

ಬೆಂಗಳೂರು, ಜುಲೈ, 30 : ನಮ್ಮ ರಾಜಕಾರಣಿಗಳ ಪ್ರಯಾಣದರ ವರ್ಷಕ್ಕೆ ಎಷ್ಟಾಗಬಹುದೆಂದು ನೀವು ಯಾರಾದರೂ ಬಲ್ಲೀರಾ? ಗೊತ್ತಿಲ್ವಾ....ಊಹಿಸಲಿಕ್ಕೆ ಹೋಗಿಲ್ವಾ? ಹಾಗಾದರೆ ಇದನ್ನು ಓದಿ....

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಸಚಿವರು ನಿತ್ಯ ಯಾವುದಾದರೂ ಕಾರ್ಯಕ್ರಮಕ್ಕೆ ಹಾಜರಾಗಲು ಊರಿಂದ ಊರಿಗೆ ಹೋಗ್ತಾನೇ ಇರ್ತಾರೆ. ಇವರಿಗೆ ಹೋಗೋದಕ್ಕೆ ಬರೋದಕ್ಕೆ ಪ್ರಯಾಣ ದರ ಎಂಬ ಹೆಸರಿನಲ್ಲಿ ಸರ್ಕಾರ 2 ವರ್ಷಗಳಿಂದ ಬರೋಬ್ಬರಿ 7.89 ಕೋಟಿ ಹಣವನ್ನು ಖರ್ಚು ಮಾಡಿದೆ.[ರೊಚ್ಚಿಗೆದ್ದು ಬಜೆಟ್ ಪುಸ್ತಕ ಎಸೆದ ಸಿದ್ದರಾಮಯ್ಯ!]

State govt spent Rs 7.89 crore on ministers' travel

ಯಾರಿಗುಂಟು ಯಾರಿಗಿಲ್ಲ...ಪುಕ್ಕಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡಾ ಅನ್ನೋ ಹಾಗೆ ಸಚಿವರು ಜನರ ಹಣವನ್ನು ಇತಿಮಿತಿಯಿಲ್ಲದೇ 2 ವರ್ಷದಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿರುವುದನ್ನು ಆರ್‌ಟಿಐ (Right to Information) ಅಧಿಕಾರಿಗಳು Department of Personnel and Administrative Reforms (DPAR) ಈ ಸಂಸ್ಥೆಯಿಂದ ಮಾಹಿತಿ ಕಲೆಹಾಕಿದ್ದಾರೆ.

ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಳಿದ ಎಲ್ಲಾ ಸಚಿವರನ್ನೊಳಗೊಂಡಂತೆ, ಪ್ರಯಾಣದರ ಹೊರತು ಪಡಿಸಿ ವೇತನಕ್ಕಾಗಿ ಸುಮಾರು 13.8 ಕೋಟಿ ಹಣವನ್ನು ಖರ್ಚು ಮಾಡುತ್ತದೆ.

ಆರ್‌ಟಿಐ ಅಧಿಕಾರಿ ಭೀಮಪ್ಪ ಗುಂಡಪ್ಪ ಗದಗ ಅವರು ಮಾಹಿತಿ ಸಂಗ್ರಹಿಸಿರುವ ಪ್ರಕಾರ ಕೆಲವು ಸಚಿವರು ತಮ್ಮ ಪ್ರತಿಷ್ಠೆಯ ನಿಮಿತ್ತ ಬಳಸುವ ಹೈಫೈ ಕಾರಿನಿಂದಾಗಿ ಕಿಲೋಮೀಟರ್‌ಗೆ 15ರೂ ಕೊಡುವ ಬದಲು 20ರಿಂದ 30 ರೂಗಳನ್ನು ಒಂದು ಕಿ.ಮೀಗೆ ಕೊಡಲಾಗುತ್ತಿದೆ.

ಪ್ರಯಾಣಕ್ಕಾಗಿ ಯಾರು ಎಷ್ಟು ಖರ್ಚು ಮಾಡಿದರು?

ನಗರಾಭಿವೃದ್ಧಿ ಸಚಿವ ವಿನಯ ಸೊರಕೆ ಕಳೆದ ಎರಡು ವರ್ಷಗಳಿಂದ ಪ್ರಯಾಣದರ 56.62 ಲಕ್ಷ ಸೇರಿದಂತೆ ಒಟ್ಟು 79.42 ಲಕ್ಷ ಖರ್ಚು ಮಾಡಿದ್ದಾರೆ. ನಂತರ ಟೆಕ್ಸ್ ಟೈಲ್ಸ್ ಸಚಿವ ಬಾಬುರಾವ್ ಚಿಂಚನ್ಸರ್ 44.63 ಪ್ರಯಾಣ ದರ ಒಳಗೊಂಡಂತೆ 76.29 ಲಕ್ಷ, ಆರೋಗ್ಯ ಸಚಿವ ಯು.ಟಿ ಖಾದರ್ ಪ್ರಯಾಣದರ 54.42 ಸೇರಿದಂತೆ 74.09 ಲಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ 36 ಲಕ್ಷ ಹಾಗೂ ಕಂದಾಯ ಸಚಿವ ವಿ ಶ್ರೀನಿವಾಸ್ ಪ್ರಸಾದ್ 22.96 ಲಕ್ಷ ಪಡೆದುಕೊಂಡಿದ್ದಾರೆ.

English summary
Chief Minister Siddaramaiah and his colleagues have spent 7.89crore their travel expense in the two years. One kilometer travel expense is only 15rs. But The Government have giving 20 to 30rs per kilometer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X