ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಸಿಕ್‌ನ ದೀಕ್ಷಾ ಭೂಮಿಗೆ ರಾಜ್ಯ ಸರ್ಕಾರದಿಂದ 23 ಬಸ್‌ಗಳ ಸೌಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17: ಭಾರತರತ್ನ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ದೀಕ್ಷಾ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುವ ಯಾತ್ರಾರ್ಥಿಗಳಿಗೆ ರಾಜ್ಯದಿಂದ 23 ವಾಹನಗಳ ವ್ಯವಸ್ಥೆ ಮಾಡಲಾಗಿದ್ದು ಅದಕ್ಕೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹಸಿರು ನಿಶಾನೆ ತೋರಿದರು.

ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು ಗಣೇಶ ಚತುರ್ಥಿ: ಸರ್ಕಾರಿ ಬಸ್‌ ಫುಲ್, ಖಾಸಗಿ ಪ್ರಯಾಣ ದರ ದುಪ್ಪಟ್ಟು

ಬಳಿಕ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ನಾಸಿಕ್‌ನಲ್ಲಿ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ಈ ದಿನವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಲಕ್ಷಾಂತರ ಯಾತ್ರಾರ್ಥಿಗಳು ಈ ಪುಣ್ಯ ಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ನಾಸಿಕ್‌ಗೆ ತೆರಳುತ್ತಾರೆ.

ದಸರಾ ರಶ್: ಬಸ್ಸಿನಲ್ಲಿ ಸೀಟಿದೆ ಹತ್ತಿ, ಆದರೆ ದುಡ್ಡು ಎಷ್ಟು ಅಂತ ಕೇಳ್ಬೇಡಿ ದಸರಾ ರಶ್: ಬಸ್ಸಿನಲ್ಲಿ ಸೀಟಿದೆ ಹತ್ತಿ, ಆದರೆ ದುಡ್ಡು ಎಷ್ಟು ಅಂತ ಕೇಳ್ಬೇಡಿ

ಬೆಂಗಳೂರು ಹಾಗೂ ಕಲಬುರ್ಗಿಯಿಂದಲೂ ಸಾವಿರಾರು ಯಾತ್ರಾರ್ಥಿಗಳು ತೆರಳುತ್ತಾರೆ.ಇವರಿಗಾಗಿ ಒಟ್ಟು 23 ಐರಾವತ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ ಮೂರು ಬಸ್‌ಗಳು ಕಲಬುರ್ಗಿಯಿಂದ ತೆರಳಲಿವೆ ಎಂದರು.

State govt provides 23 buses to visit Deeksha Bhoomi

ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಈ ದಿನವನ್ನು ಆಚರಿಸಲು ಒಂದು ವಾರದಲ್ಲಿಯೇ ಒಂದು ಕೋಟಿಗೂ ಹೆಚ್ಚು ಜನ ತೆರಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಹಜ್‌ ಮಾದರಿಯಲ್ಲೇ ಈ ಪುಣ್ಯಸ್ಥಳವು ಪ್ರಸಿದ್ಧಿ ಪಡೆದುಕೊಳ್ಳಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಉಪಸ್ಥಿತರಿದ್ದರು.

English summary
State government has provided 23 buses to visit Deeksha Bhoomi of Nasik in Maharashtra where Dr.B.R.Ambedkar had took oath of Buddhism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X