ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ನೀತಿ ಸಂಹಿತೆ: ರಾಜ್ಯೋತ್ಸವ ಪ್ರಶಸ್ತಿ ನ.3ನಂತರ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಐದು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತತೆ ಇರುವುದರಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 3ರ ಬಳಿಕ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರತಿ ವರ್ಷ ನವೆಂಬರ್ 1ರಂದು ನೀಡುವ ರಾಜ್ಯೋತ್ಸವ ಪ್ರಶಸ್ತಿ ಕುರಿತು ಕೇವಲ ಒಂದು ದಿನ ಬಾಕಿ ಇದ್ದರೂ ಇದುವರೆಗೂ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರನ್ನು ಪ್ರಕಟಿಸಿಲ್ಲ ಅಷ್ಟೇ ಅಲ್ಲದೆ ಇದುವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಬುಧವಾರ ಈ ಕುರಿತು ಸಭೆ ರದ್ದುಗೊಳಿಸಿರುವ ಕುಮಾರಸ್ವಾಮಿ ಚುನಾವಣೆ ಮುಗಿದ ಬಳಿಕ ಹೆಸರು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಯಾರ್ಯಾರ ಮುಡಿಗೆ: ಇಂದು ಹೊರಬೀಳಲಿದೆ ಪಟ್ಟಿ ರಾಜ್ಯೋತ್ಸವ ಪ್ರಶಸ್ತಿ ಯಾರ್ಯಾರ ಮುಡಿಗೆ: ಇಂದು ಹೊರಬೀಳಲಿದೆ ಪಟ್ಟಿ

ರಾಜ್ಯೋತ್ಸವ ಆಯ್ಕೆ ಸಮಿತಿ ಉನ್ನತ ಮಟ್ಟದ ಸಭೆ ರದ್ದಾಗಿದೆ, ಕೊನೆಯ ಕ್ಷಣದಲ್ಲಿ ಸಭೆಯನ್ನು ರದ್ದುಗೊಳಿಸಿದ್ದಾರೆ. 2018 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಇಂದು ಪ್ರಕಟವಾಗಬೇಕಿತ್ತು. ಮಂಡ್ಯ, ರಾಮನಗರ, ಬಳ್ಳಾರಿ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ಒಟ್ಟು ಐದು ಕಡೆ ಉಪ ಚುನಾವಣೆಗಳು ನಡೆಯಲಿದೆ.

State govt likely to announce Rajyotsava award after by poll

ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ

ಈ ಹಿಂದೆ ರಾಜ್ಯೋತ್ಸವಕ್ಕೆ ಅರ್ಹರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸಾಹಿತಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ಒಂದು ಸಭೆ ಮಾಡಲಾಗುತ್ತಿತ್ತು ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅಂತಿಮ ಸಭೆ ನಡೆಯುತ್ತಿತ್ತು ಆದರೆ ಈ ಬಾರಿ ಯಾವುದೇ ಸಭೆ ಇದುವರೆಗೆ ನಡೆದಿಲ್ಲ. ಇದೀಗ ಚುನಾವಣೆ ಮುಗಿದ ಬಳಿಕವೇ ಹೆಸರನ್ನು ಘೋಷಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

English summary
Following model code of conduct in five constituencies, Rajyotsava awards likely to announce after November 3, sources revealed in the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X