ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ನಾಯಿ ಸಾಕಲು ಇನ್ನು ಲೈಸೆನ್ಸ್‌ ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಜೂನ್ 1: ಜನರು ಮನೆಗಳಲ್ಲಿ ನಾಯಿ ಸಾಕಬೇಕಾದರೆ ಬಿಬಿಎಂಪಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎನ್ನುವ ಪ್ರಸ್ತಾವನೆಗೆ ರಾಜ್ಯಸರ್ಕಾರ ಸಮ್ಮತಿ ನೀಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನುಮುಂದೆ ಮನೆಯ ಭದ್ರತೆ ಹಾಗೂ ನಾಯಿ ಮೇಲಿನ ಪ್ರೀತಿಯಿಂದ ನಾಯಿಯನ್ನು ಸಾಕುವುದು ಕಾನೂನು ಬಾಹಿರವಾಗಲಿದೆ. ಬಿಬಿಎಂಪಿ ಪರವಾನಗಿ ಇಲ್ಲದೆ ನಾಯಿಯನ್ನು ಸಾಕುವಂತಿಲ್ಲ. ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವಣೆಗೆ ಸರ್ಕಾರ ಅನುಮತಿ ಸೂಚಿಸಿದೆ.

ನಿಮ್ಮ ಮುದ್ದಿನ ನಾಯಿ ನಿಮ್ಮೊಂದಿಗಿರಬೇಕೆ? ಮೊದಲು ಲೈಸೆನ್ಸ್ ಮಾಡಿಸಿ ನಿಮ್ಮ ಮುದ್ದಿನ ನಾಯಿ ನಿಮ್ಮೊಂದಿಗಿರಬೇಕೆ? ಮೊದಲು ಲೈಸೆನ್ಸ್ ಮಾಡಿಸಿ

ಸರ್ಕಾರದಿಂದ ಅನುಮೋದನೆಗೊಂಡು ಬಂದ ನಿಯಮವನ್ನು ಬಿಬಿಎಂಪಿ ಆಯುಕ್ತರಿಗೆ ಪಶುಪಾಲನಾ ವಿಭಾಗ ಸಲ್ಲಿಸಿದೆ. ನಿಯಮ ಜಾರಿ ನಂತರ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯವಾಗುತ್ತದೆ ಅದಲ್ಲದೆ ಪರವಾನಗಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

State Govt approves BBMP policy on puppy raising

ಸಾಕು ನಾಯಿಗಳನ್ನು ಗುರುತಿಸುವ ಸಲುವಾಗಿ ಪರವಾನಗಿ ನೀಡುವ ವೇಳೆ ಜಿಪಿಎಸ್ ಆಧಾರಿತ ಕಾಲರ್ ಐಡಿ ಅಳವಡಿಸಲಾಗುತ್ತದೆ. ಅದರಿಂದ ನಾಯಿಯ ಹೆಸರು, ವಯಸ್ಸು, ಜಾತಿ, ಮಾಲೀಕರ ವಿಬರ ಮತ್ತು ನಾಯಿಯ ಹೆಸರು, ವಯಸ್ಸು, ವ್ಯಾಕ್ಸಿನೇಷನ್ ಮಾಡಿಸಿದ್ದರ ವಿವರಗಳು ಬಿಬಿಎಂಪಿಗೆ ದೊರೆಯಲಿದೆ.

ನಾಯಿ ಸಾಕಲು ಪರವಾನಗಿ ಪಡೆಯುವ ವೇಳೆ ಶುಲ್ಕ ಪಾವತಿಸಬೇಕು. ಈ ಹಿಂದೆ ಬಿಬಿಎಂಪಿ ರೂಪಿಸಿದ್ದ ನಿಯಮದಲ್ಲಿ 1 ನಾಯಿಗೆ 250 ರೂ. ಎರಡಕ್ಕೆ 500 ರೂ. 3 ನಾಯಿಗೆ 1 ಸಾವಿರ ರೂ ಶುಲ್ಕ ಎಂದು ನಮೂದಿಸಿತ್ತು.ಆದರೆ ಶುಲ್ಕ ಹೆಚ್ಚಳವಾಯಿತು ಎಂಬ ಕಾರಣಕ್ಕೆ ಸರ್ಕಾರ ತಿರಸ್ಕರಿಸಿತ್ತು. ಕೊನೆಗೆ ನಿಯಮ ತಿದ್ದುಪಡಿ ಮಾಡಿ ಶುಲ್ಕವನ್ನು 110ರೂ.ಗೆ ಇಳಿಸಿ ಮರು ಸಲ್ಲಿಕೆ ಮಾಡಲಾಗಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

English summary
State government has approved policy of BBMP about mandatory of license to raising puppies in Bengaluru. The policy has also restrict three puppies in a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X