• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲ್ವೆ ಸಚಿವರ ಸಮ್ಮುಖದಲ್ಲಿ ಸಬರ್ಬನ್ ರೈಲ್ವೆ ಯೋಜನೆಗೆ ಒಪ್ಪಿಗೆ ಕೊಟ್ಟ ಕುಮಾರಸ್ವಾಮಿ

|

ಬೆಂಗಳೂರು, ಫೆಬ್ರವರಿ 22 : ರೈಲ್ವೆ ಸಚಿವ ಪಿಯುಷ್ ಗೋಯೆಲ್ ಸಮ್ಮುಖದಲ್ಲಿ ಷರತ್ತು ರಹಿತ ಸಬರ್ಬನ್ ರೈಲ್ವೆ ಯೋಜನೆಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದಾರೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಗೃಹ ಕಚೇರಿಯಲ್ಲಿ ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ಶುಕ್ರವಾರ ಭೇಟಿ ಮಾಡಿದರು.

ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌! ಪ್ರಯಾಣಿಕರಿಂದ ಸಬರ್ಬನ್ ರೈಲು ಮಾಹಿತಿಗೆ ನೂತನ ಆ್ಯಪ್‌!

ರಾಜ್ಯದಲ್ಲಿ ಕಲ್ಲಿದ್ದಿಲು ಪೂರೈಕೆ ಹಾಗೂ ಉಪನಗರ ರೈಲು ಯೋಜನೆ ಕುರಿತು ಚರ್ಚೆ ನಡೆಸಿದರು. ಅದರಲ್ಲಿ 23 ಸಾವಿರ ಕೋಟಿ ಮೊತ್ತದ ಸಬರ್ಬನ್ ರೈಲ್ವೆ ಯೋಜನೆಗೆ ಸಮ್ಮತಿ ನೀಡಿದರು.

ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ವಿಧಿಸಿತ್ತು. ಸಚಿವ ಸಂಪುಟದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ಕರಡು ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ ನಂತರದಲ್ಲಿ ಯೋಜನೆ ಅನುಷ್ಠಾನಕ್ಕೆ ನೈಋತ್ಯ ರೈಲ್ವೆಗೆ 19 ಷರತ್ತುಗಳನ್ನು ವಿಧಿಸಿತ್ತು.

ಬಿನ್ನಿಮಿಲ್ ಪ್ರದೇಶದಲ್ಲಿ 3 ಎಕರೆ ಖಾಸಗಿ ಭೂಮಿ ಭೋಗ್ಯಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆಯ ಕೈಬಿಡುವಂತೆ ನೈಋತ್ಯ ರೈಲ್ವೆಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಬದಲಾಗಿ ನಗರದ ಹೊರ ವಲಯದಲ್ಲಿ ಕಾಸ್ಟಿಂಗ್ ಯಾರ್ಡ್‌ಗೆ ಭೂಮಿ ಪಡೆದುಕೊಳ್ಳಲು ಇಲಾಖೆಗೆ ತಿಳಿಸಿತ್ತು.

ಎಲಿವೇಟೆಡ್ ಮಾರ್ಗಕ್ಕಾಗಿ ಬಿನ್ನಿಮಿಲ್ ಪ್ರದೇಶದಲ್ಲಿ ಕಾಸ್ಟಿಂಗ್ ಯಾರ್ಡ್‌ ನಿರ್ಮಾಣಕ್ಕೆ 72 ಕೋಟಿ ರೂ ನೀಡಿ 3 ಎಕರೆ ಖಾಸಗಿ ಭೂಮಿ ಭೋಗ್ಯಕ್ಕೆ ಪಡೆದುಕೊಳ್ಳುವ ಪ್ರಸ್ತಾವನೆ ಇದೆ.

ಸಂದರ್ಭದಲ್ಲಿ ಸಂಸದ ಪಿಸಿ ಮೋಹನ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಅರವಿಂದ ಲಿಂಬಾವಳಿ, ಲೇಹರ್ ಸಿಂಗ್ ಸಿರೋಯು, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯಭಾಸ್ಕರ್, ಕೇಂದ್ರ ಹಾಗೂ ರಾಜ್ಯದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

English summary
Cheif minister HD Kumaraswamy and Railway minister Piyush Goyal hold key meeting and took dicission to withdraw all conditions for Suburban railway plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X