ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸರ್ಕಾರದಿಂದ ನಮ್ಮ ಮೆಟ್ರೋಗೆ 273 ಕೋಟಿ ರೂ ಅನುದಾನ

|
Google Oneindia Kannada News

ಬೆಂಗಳೂರು, ಜೂನ್ 21: ರಾಜ್ಯ ಸರ್ಕಾರವು ಬಿಎಂಆರ್‌ಸಿಎಲ್‌ಗೆ 273 ಕೋಟಿ ರೂ ಅನುದಾನವನ್ನು ನೀಡಿದೆ.

ಈ ಆರ್ಥಿಕ ವರ್ಷದಲ್ಲಿ ಮೆಟ್ರೋ ಎರಡನೇ ಹಂತದ ಯೋಜನೆಗೆ ಬಳಸಿಕೊಳ್ಳಲು ರಾಜ್ಯ ಸರ್ಕಾರ 1,094 ಕೋಟಿ ರೂ ಅನುದಾನ ನೀಡಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನದಲ್ಲಿ 273 ಕೋಟಿ ರೂ ಹಾಗೂ ಸಾಲ ತೀರಿಸಲು 575 ಕೋಟಿ ರೂವನ್ನು ಬಿಡುಗಡೆ ಮಾಡಿದೆ.

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಈ 1,094 ಕೋಟಿ ರೂನಲ್ಲಿ 364.67 ಕೋಟಿ ರೂ ಮಾತ್ರ ಬಿಡುಗಡೆಗೊಳಿಸುವಂತೆ ಬಿಎಂಆರ್‌ಸಿಎಲ್ ಕೋರಿತ್ತು. ಆದರೆ ಕೇಳಿರುವಷ್ಟು ಮೊತ್ತದ ಬದಲಿಗೆ ಮೊದಲನೆಯ ಕಂತಾಗಿ 273.50 ಕೋಟಿ ರೂವನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಿದೆ.

State government releases 273 crore rupees For Namma metro

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಮೆಟ್ರೋಗೆ ಸಂಬಂಧಿಸಿದ ಕಾರ್ಯಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುತ್ತದೆ.

ಈ ಸಮಿತಿಯನ್ನು ಎರಡನೇ ಹಂತ ಮಾತ್ರವಲ್ಲದೆ ಏರ್‌ಪೋರ್ಟ್‌ ಹಾಗೂ ಕೆಆರ್ ಪುರ, ಸಿಲ್ಕ್ ಬೋರ್ಡ್ ಮಾರ್ಗದ ಯೋಜನೆಯಲ್ಲೇ ಮುಂದುವರೆಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಮಿತಿಯನ್ನು ರಚಿಸಲಾಗಿತ್ತು.

English summary
Karnataka government released 273 crore rupees to bmrcl for Namma metro lane project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X