ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡ್ರಗ್ ಮಾಫಿಯಾ ಮಟ್ಟ ಹಾಕಲು ಬಿಗಿ ಕಾನೂನು: ಬಸವರಾಜ್ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಸೆ. 10: ಡ್ರಗ್ಸ್ ಮಾಫಿಯಾದ ವಿರುದ್ಧ ರಾಜ್ಯ ಸರ್ಕಾರ ನಿರ್ಣಾಯಕ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಪ್ರಭಾವಿಗಳ ಬಂಧನವೂ ಆಗಿದ್ದು, ಇನ್ನು ಹಲವು ಪ್ರಭಾವಿಗಳ ಹೆಸರು ಕೇಳಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಡ್ರಗ್ ಮಾಫಿಯಾ ಮಟ್ಟ ಹಾಕಲು ರಾಜ್ಯದಲ್ಲಿ ಮತ್ತಷ್ಟು ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅದಕ್ಕಾಗಿ ರಾಷ್ಟ್ರೀಯ ಕಾನೂನು ಶಾಲೆಯ ಪ್ರೊಫೆಸರ್ ಗಳ ಸಲಹೆ ಪಡೆಯುತ್ತಿದ್ದೇವೆ. ರಾಷ್ಟ್ರೀಯ ಕಾನೂನು ಶಾಲೆ ಮುಖ್ಯಸ್ಥರ ಜೊತೆ ಮಾತಾಡಿದ್ದೇನೆ. ನಾನು ನಮ್ಮ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿಕೆ ಕೊಟ್ಟಿದ್ದಾರೆ.

ಡ್ರಗ್ಸ್‌ ಪ್ರಕರಣ; ಆರೋಪಿಗಳಿಗೆ ರಕ್ತ ಪರೀಕ್ಷೆಗೆ ಒಪ್ಪಿಗೆಡ್ರಗ್ಸ್‌ ಪ್ರಕರಣ; ಆರೋಪಿಗಳಿಗೆ ರಕ್ತ ಪರೀಕ್ಷೆಗೆ ಒಪ್ಪಿಗೆ

ರಾಜ್ಯದಲ್ಲಿ ಕಾನೂನು ಇನ್ನಷ್ಟು ಬಿಗಿ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕಾನೂನು ಸಚಿವರ ಜೊತೆಗೂ ಚರ್ಚೆ ಮಾಡುತ್ತೇನೆ. ನಮ್ಮ ಸಿಸಿಬಿ ಪೊಲೀಸರು ವೃತ್ತಿಪರವಾಗಿ ಕ್ರಮಬದ್ಧವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯ ಜಾಡು ಹಿಡಿದು ಎಷ್ಟೆ ದೊಡ್ಡವರಿರಲಿ ವಿಚಾರಣೆಗೆ ಒಳಪಡಿಸುವುದು ಶತಃ ಸಿದ್ಧ. ಕಾನೂನಿನ ಅನ್ವಯವೇ ಕಾರ್ಯಾಚರಣೆ ನಡೆಯುತ್ತಿದೆ.

state government is taking decisive action against the drug mafia: basavaraj bommai

Recommended Video

ಸುಮ್ಮನಾಗಿಲ್ಲ China, ಚೀನಾನ ನಂಬುವಂತಿಲ್ಲ ಭಾರತ | Oneindia Kannada

ವ್ಯವಸ್ಥಿತವಾಗಿ ಸಾಕ್ಷಿಗಳ ಆಧಾರಗಳ ಮೇಲೆ ಕ್ರಮ ಬದ್ಧವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೂ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಡಿ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾನೂನು ಬಿಗಿಗೊಳಿಸುವ ಕುರಿತು ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕರೊಂದಿಗೆ ಚರ್ಚೆ ಮಾಡಿದ್ದೇವೆ ಎಂದು ಬಸವರಾಜ್ ಬೊಮ್ಮಾಯಿ ಅವರು ಆರ್‌ಟಿ ನಗರದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

English summary
The Karnataka state government is taking decisive action against the drug mafia. The arrest of the influencers is already being heard by many influential people. Home Minister Basavaraj Bommai, on the other hand, provided vital information. Know more about home ministers statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X