ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಬೃಹತ್ ಬಜೆಟ್‌ಗೆ ಕತ್ತರಿ ಹಾಕಿದ ಮೈತ್ರಿ ಸರ್ಕಾರ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಹನ್ನೆರಡು ಸಾವಿರ ಕೋಟಿ ಬೃಹತ್ ಬಜೆಟ್ ಮಂಡಿಸಿ ಬೀಗಿದ್ದ ಬಿಬಿಎಂಪಿಗೆ ತೀವ್ರ ಮುಖಭಂಗವಾಗಿದೆ.

ಬಿಬಿಎಂಪಿಯ ಬೃಹತ್ ಗಾತ್ರದ ಬಜೆಟ್‌ಗೆ ಒಪ್ಪಿಗೆ ನೀಡಲು ಸರ್ಕಾರವು ನಿರಾಕರಿಸಿದ್ದು, ಬಜೆಟ್ ಅನ್ನು 9000 ಕೋಟಿ ಬಜೆಟ್‌ಗೆ ಇಳಿಸಲು ಸೂಚಿಸಿದೆ. ಪ್ರಸ್ತುತ ಮಂಡಿಸುವ ಬಜೆಟ್‌ ಆರ್ಥಿಕ ದೃಷ್ಟಿಯಿಂದ ಅವೈಜ್ಞಾನಿಕ ಎಂದು ಸರ್ಕಾರವು ಅಭಿಪ್ರಾಯವ್ಯಕ್ತಪಡಿಸಿದೆ.

ಬಿಬಿಎಂಪಿ ಬಜೆಟ್ 2019 : ಮಹಿಳೆಯರಿಗೇ ಮೇಲುಗೈಬಿಬಿಎಂಪಿ ಬಜೆಟ್ 2019 : ಮಹಿಳೆಯರಿಗೇ ಮೇಲುಗೈ

ಈ ಬಗ್ಗೆ ಒನ್‌ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಮಾಜಿ ಮೇಯರ್ ಪದ್ಮಾವತಿ ಅವರು, 'ಸರ್ಕಾರವು ಬಿಬಿಎಂಪಿ ಬಜೆಟ್ ಅನ್ನು ತಿರಸ್ಕರಿಸಿದೆ ಎಂಬುದು ಸುಳ್ಳು, ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಜೆಟ್ ಅನ್ನು ತಿದ್ದುಪಡಿ ಮಾಡಲು ಸಲಹೆ ನೀಡಿದೆ ಅಷ್ಟೆ' ಎಂದು ಹೇಳಿದರು.

State government insructed to BBMP to minimize its budget size

'ಬಿಬಿಎಂಪಿ ಬಜೆಟ್, ಈಗಾಗಲೇ ಕೌನ್ಸಿಲ್‌ನಲ್ಲಿ ಅನುಮೋದನೆ ಆಗಿದೆ, ಹಾಗಾಗಿ ಸರ್ಕಾರ ಅದನ್ನು ತಿರಸ್ಕರಿಸುವಂತಿಲ್ಲ, ಬದಲಾಗಿ ಸೂಕ್ತ ಬದಲಾವಣೆಗಳನ್ನು ಸೂಚಿಸಿದೆ. ಲೋಷದೋಷಗಳನ್ನು ಸರಿಪಡಿಸಿಕೊಂಡು ಬರಲು ಹೇಳಿದೆ' ಎಂದು ಅವರು ಸ್ಪಷ್ಟಪಡಿಸಿದರು.

ಬಿಬಿಎಂಪಿ ಬಜೆಟ್ 2019: ಮಹಿಳೆಯರು, ಜನಸಾಮಾನ್ಯರಿಗೆ ಸಿಕ್ಕಿದ್ದೇನು? ಬಿಬಿಎಂಪಿ ಬಜೆಟ್ 2019: ಮಹಿಳೆಯರು, ಜನಸಾಮಾನ್ಯರಿಗೆ ಸಿಕ್ಕಿದ್ದೇನು?

'ಬಿಬಿಎಂಪಿಯು ಹತ್ತು ಸಾವಿರಕೋಟಿಗಿಂತಲೂ ಹೆಚ್ಚಿನ ಮೊತ್ತದ ಬಜೆಟ್ ಮಂಡಿಸುವುದು ಸೂಕ್ತವಲ್ಲವೆಂದು ಈ ಮೊದಲು ಸಹ ಆರ್ಥಿಕ ಇಲಾಖೆಯು ಬಿಬಿಎಂಪಿ ಕಮಿಷನರ್ ಅವರಿಗೆ ಪತ್ರ ಮುಖೇನ ಸಲಹೆ ನೀಡಿದ್ದರು, ಕಮಿಷನರ್‌ ಅವರು ಬಜೆಟ್‌ಗೆ ಮುನ್ನಾ ಮೇಯರ್‌ಗೆ ಮತ್ತು ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಯಾವ ರೀತಿಯ ಸಲಹೆಯನ್ನು ನೀಡಿದ್ದಾರೆಂಬ ಮಾಹಿತಿ ನನಗೆ ಇಲ್ಲ' ಎಂದು ಅವರು ಮಾಹಿತಿ ನೀಡಿದರು.

ಬಿಬಿಎಂಪಿಯ ಬಜೆಟ್ ಮೊಟಕುಗೊಳಿಸುವ ಬಗ್ಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದು, ಬಜೆಟ್‌ಗೆ ಅನುಮೋದನೆ ಪಡೆಯದ ಮೇಯರ್‌ ಅವರು ಕೂಡಲೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

English summary
State government refuse to approve BBMP budget, it instructed BBMP to minimize budget size to 9000 crore. BBMP presented 12000 crore budget this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X