ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗನವಾಡಿ ಕಾರ್ಯಕರ್ತೆಯರಿಗೆ ಹಬ್ಬದ ಉಡುಗೊರೆ ನೀಡಿದ ಸರ್ಕಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ. 2018ರ ಅಕ್ಟೋಬರ್ ತಿಂಗಳಿನಿಂದಲೇ ಅನ್ವಯವಾಗುವಂತೆ ಅವರ ಗೌರವ ಧನದಲ್ಲಿ ಹೆಚ್ಚಳ ಮಾಡಲಾಗಿದೆ.

ಪ್ರಸ್ತುತ ಮಾಸಿಕ ಎಂಟು ಸಾವಿರ ರೂ ಪಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2,000 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಅವರ ಗೌರವಧನ ತಿಂಗಳಿಗೆ 10,000 ರೂ.ಗೆ ಏರಿಕೆಯಾಗಲಿದೆ. ಸಹಾಯಕಿಯರಿಗೆ ನೀಡಲಾಗುತ್ತಿರುವ ಗೌರವಧನವನ್ನು 1,000 ರೂ.ಹೆಚ್ಚಳ ಮಾಡಲಾಗಿದೆ. 4,000 ರೂ.ನಿಂದ 5,000 ರೂ.ಗೆ ಹೆಚ್ಚಿಸಲಾಗಿದೆ.

ಮಂಡ್ಯದ ಅಂಗನವಾಡಿಯಲ್ಲಿ 130 ಸಹಾಯಕರಿಗೆ ಉದ್ಯೋಗಾವಕಾಶ ಮಂಡ್ಯದ ಅಂಗನವಾಡಿಯಲ್ಲಿ 130 ಸಹಾಯಕರಿಗೆ ಉದ್ಯೋಗಾವಕಾಶ

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ 3,310 ಮಿನಿ ಅಂಗನವಾಡಿ ಕಾರ್ಯಕರ್ತೆಯರು, 62,600 ಸಹಾಯಕಿಯರು ಸೇರಿದಂತೆ 1.28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನದಲ್ಲಿ 1,250 ರೂ. ಹೆಚ್ಚಿಸಲಾಗಿದ್ದು, ಅವರು ಇನ್ನು 4,750 ರೂ ಬದಲು 6,000 ರೂ. ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಎಲ್ಲ ಘೋಷಣೆಗಳು ಒಟ್ಟಿಗೆ ಜಾರಿ

ಎಲ್ಲ ಘೋಷಣೆಗಳು ಒಟ್ಟಿಗೆ ಜಾರಿ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಪರಿಷ್ಕರಣೆ ಮಾಡಿ 2018ರ ಅಕ್ಟೋಬರ್ ತಿಂಗಳಿನಲ್ಲಿಯೇ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿತ್ತು. ಆದರೆ ಅದು ರಾಜ್ಯದಲ್ಲಿ ಜಾರಿಗೆ ಬಂದಿರಲಿಲ್ಲ. ಅಲ್ಲದೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಕೂಡ 500 ರೂ.ಹೆಚ್ಚಳ ಮಾಡಲಾಗಿತ್ತು. ಅದೂ ಕೂಡ ಜಾರಿಯಾಗಿರಲಿಲ್ಲ. ಈಗ ಈ ಎಲ್ಲ ತೀರ್ಮಾನಗಳನ್ನು ಸೇರಿಸಿ ಗೌರವ ಧನ ಹೆಚ್ಚಳ ಮಾಡಿ ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ಕೊಡಗು ಎಸ್ ಪಿ ಡಾ.ಸುಮನ್ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ಕೊಡಗು ಎಸ್ ಪಿ ಡಾ.ಸುಮನ್

ಕಂತುಗಳಲ್ಲಿ ಹೆಚ್ಚುವರಿ ಹಣ

ಕಂತುಗಳಲ್ಲಿ ಹೆಚ್ಚುವರಿ ಹಣ

ಅಕ್ಟೋಬರ್ 2018ರಿಂದಲೇ ಈ ಗೌರವಧನವು ಅನ್ವಯವಾಗುವುದರಿಂದ ಒಂದು ವರ್ಷದ ಹೆಚ್ಚುವರಿ ಹಣವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಬಿಡುಗಡೆ ಮಾಡಬೇಕಿದೆ. ಈ ಮೊತ್ತವನ್ನು ಒಂದೇ ಕಂತಿನಲ್ಲಿ ಕೊಡಬೇಕೇ ಅಥವಾ ಹಂತಹಂತವಾಗಿ ಬಿಡುಗಡೆ ಮಾಡಬೇಕೇ ಎಂಬ ಬಗ್ಗೆ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಅಂಗನವಾಡಿಗಳ ದುರಸ್ತಿಗೆ 10 ಕೋಟಿ

ಅಂಗನವಾಡಿಗಳ ದುರಸ್ತಿಗೆ 10 ಕೋಟಿ

ರಾಜ್ಯದಲ್ಲಿ ಮಳೆಯಿಂದ ಅನೇಕ ಕಡೆ ಅಂಗನವಾಡಿ ಕಟ್ಟಡಗಳು ಕುಸಿದುಬಿದ್ದಿವೆ. ಇನ್ನು ಹಲವೆಡೆ ಕಟ್ಟಡಗಳು ಶಿಥಿಲಗೊಂಡಿವೆ. ಸುಮಾರು 1 ಸಾವಿರ ಕಟ್ಟಡಗಳ ದುರಸ್ತಿಗೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಎರಡನೆಯ ಹಂತದಲ್ಲಿ ಇನ್ನಷ್ಟು ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಅಧಿಕಾರಿಗಳಿಗೆ ಸ್ಥಳ ನಿಯೋಜನೆ

ಅಧಿಕಾರಿಗಳಿಗೆ ಸ್ಥಳ ನಿಯೋಜನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗೆ ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಿಕೊಂಡು ತರಬೇತಿ ನೀಡಿದ್ದರೂ ಅವರನ್ನು ಹುದ್ದೆಗೆ ನಿಯೋಜನೆ ಮಾಡಿರಲಿಲ್ಲ. ಈಗ 48 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಲಾಗಿದೆ. 33 ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಹುದ್ದೆ ನಿಯೋಜನೆ ಮಾಡಲಾಗುತ್ತಿದೆ. ಉಜಿರೆಯಲ್ಲಿ ತರಬೇತಿ ಪಡೆಯುತ್ತಿರುವ 628 ಮೇಲ್ವಿಚಾರಕಿಯರನ್ನು ಕೂಡ ಶೀಘ್ರದಲ್ಲಿಯೇ ಕಚೇರಿಗಳಿಗೆ ನಿಯೋಜನೆ ಮಾಡಲಾಗುವುದು. ಇನ್ನೂ 324 ಮೇಲ್ವಿಚಾರಕಿಯರು ತರಬೇತಿ ಹಂತದಲ್ಲಿದ್ದಾರೆ ಎಂದು ಹೇಳಿದರು.

English summary
State government on Friday announced the implement of salary hike for Anganwadi workers and helpers which will be applicable from October 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X