ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೀಸೆಲ್‌ ತೆರಿಗೆ ಹೆಚ್ಚಳಕ್ಕೆ ಬಿಎಂಟಿಸಿ ಮತ್ತಷ್ಟು ತತ್ತರ

By Nayana
|
Google Oneindia Kannada News

Recommended Video

ಡೀಸೆಲ್‌ ತೆರಿಗೆ ಹೆಚ್ಚಳಕ್ಕೆ ಬಿಎಂಟಿಸಿ ಮತ್ತಷ್ಟು ತತ್ತರ | Oneindia Kannada

ಬೆಂಗಳೂರು, ಜು.16: ಡೀಸೆಲ್‌ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಏರಿಸಿದ್ದರಿಂದ ಬಿಎಂಟಿಸಿಗೆ ನಿತ್ಯ ಸುಮಾರು 4 ಲಕ್ಷ ಹೆಚ್ಚುವರಿ ಹೊರೆಯಾಗಿದೆ. ರಾಜ್ಯ ಸರ್ಕಾರವು ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.19ರಿಂದ ಶೇ.21ಕ್ಕೆ ಏರಿಸಿದ್ದರಿಂದ ಬಿಎಂಟಿಸಿಗೆ ಹೊರೆಯಾಗಿದೆ.

ತೈಲ ಕಂಪನಿಗಳು ಪ್ರತಿ 15 ದಿನಕ್ಕೊಮ್ಮೆ ಸಗಟು ಡೀಸೆಲ್‌ ದರ ಪರಿಷ್ಕರಣೆ ಮಾಡುತ್ತವೆ. ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ತೆರಿಗೆ ಏರಿಸುವ ಮೊಸಲು ಬಿಎಂಟಿಸಿಗೆ ಲೀಟರ್‌ ಡೀಸೆಲ್‌ 64.24 ರೂ ಸಿಗುತ್ತಿತ್ತು.

ಬಿಎಂಟಿಸಿ ಬಸ್‌ಗಳು ತಾಸಿಗೆ ಹದಿನೈದೇ ಕಿಮೀ ಓಡುತ್ತಂತೆಬಿಎಂಟಿಸಿ ಬಸ್‌ಗಳು ತಾಸಿಗೆ ಹದಿನೈದೇ ಕಿಮೀ ಓಡುತ್ತಂತೆ

ಈಗಾಗಲೇ ಬಿಎಂಟಿಸಿ ನಷ್ಟದಲ್ಲಿದ್ದು ಬಿಎಂಟಿಸಿ ಜಾಗವನ್ನು ಮಾರಾಟಮಾಡಿ ನಷ್ಟವನ್ನು ಭರಿಸಬೇಕಾದ ಪರಿಸ್ಥಿತಿ ಇದೆ, ಇದೀಗ ಡೀಸೆಲ್‌ ತೆರಿಗೆ ಏರಿಕೆಯೂ ಭಾರಿ ಹೊಡೆತ ನೀಡಿದೆ. 6,823 ಬಸ್‌ಗಳನ್ನು ಹೊಂದಿರುವ ಬಿಎಂಟಿಸಿ, ನಿತ್ಯ 3.24 ಲಕ್ಷ ಲೀಟರ್‌ನಂತೆ ಮಾಸಿಕ 97.20 ಲೀಟರ್‌ ಡೀಸೆಲ್‌ ಬಳಸುತ್ತಿದೆ. ನೇರವಾಗಿ ತೈಲ ಕಂಪನಿಗಳಿಂದ ಸಗಟು ಡೀಸೆಲ್‌ ಖರೀದಿಸುವುದರಿಂದ ದರದಲ್ಲಿ ಸ್ವಲ್ಪ ರಿಯಾಯಿತಿ ದೊರೆಯುತ್ತದೆ.

State budget tax hike proposal hits BMTC

ಇದೀಗ ತೆರಿಗೆ ಹೆಚ್ಚಳದಿಂದ ಪ್ರತಿ ಲೀಟರ್‌ಗೆ 1.31 ರೂ ಏರಿಕೆಯಾಗಿರುವುದರಿಂದ ಸಗಟು ಖರೀದಿ ದರವೂ ಅಧಿಕವಾಗಿದೆ. ಇದರಿಂದ ನಿಗಮಕ್ಕೆ ನಿತ್ಯ 4 ಲಕ್ಷ ಹೆಚ್ಚುವರಿ ಹೊರೆಯಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಟಿಸಿಗೆ ಟಿಕೆಟ್‌ ಹಣ, ವಾಣಿಜ್ಯ ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ಮೂಲಗಳಿಂದ ಮಾಸಿಕ 170.52 ಕೋಟಿ ಆದಾಯ ಬರುತ್ತದೆ. ಇದರಲ್ಲಿ ವೇತನಕ್ಕೆ 66 ಕೋಟಿ ಸೇರಿದಂತೆ ಖರ್ಚು ಮಾಡಿಕ 200 ಕೋಟಿ ರೂ. ದಾಟುತ್ತಿದೆ.

English summary
Tax increment on petrol and diesel proposed by the state government in its budget has hit BMTC as the corporation is already running under the loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X