ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬೀದಿ ನಾಯಿಗಳಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ!

|
Google Oneindia Kannada News

ಬೆಂಗಳೂರು, ಜುಲೈ 30: ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಮನೆಗಳಿಗೆ ಸ್ಥಳಾಂತರಿಸದಿರುವುದಕ್ಕೆ ಕರ್ನಾಟಕದ ಪಶುಸಂಗೋಪನಾ ಇಲಾಖೆಯು ನಿರ್ಧರಿಸಿದೆ. ನಗರದ ನಿವಾಸಿಗಳು ಬೀದಿ ನಾಯಿಗಳನ್ನು ಹಿಡಿಯದಂತೆ ಅಭಿಪ್ರಾಯವನ್ನು ಹಂಚಿಕೊಂಡ ಬೆನ್ನಲ್ಲೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ಪಶುಸಂಗೋಪನಾ ಇಲಾಖೆ ತನ್ನ ಹಿಂದಿನ ಆದೇಶವನ್ನು ಸ್ಪಷ್ಟಪಡಿಸಿದ್ದು, ಬೆಂಗಳೂರಿನ ಬೀದಿಗಳಲ್ಲಿ ಬೀದಿ ನಾಯಿಗಳು ಉಳಿಯಲಿವೆ ಎಂದು ಹೇಳಿದೆ. ಬೆಂಗಳೂರಿನಿಂದ ನಾಯಿಗಳನ್ನು ಸ್ಥಳಾಂತರಿಸದಿರಲು ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!

ಬೆಂಗಳೂರಿನ ನಿವಾಸಿಗಳು ದೂರು ನೀಡಿದ್ದಲ್ಲಿ ಮಾತ್ರ ಅಂಥ ಪ್ರದೇಶಗಳಲ್ಲಿ ಶ್ವಾನಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುವುದು ಎಂದು ಪಶು ಸಂಗೋಪನಾ ಇಲಾಖೆೆ ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸರ್ಕಾರದ ನಿರ್ಧಾರಕ್ಕೂ ಮೊದಲು ಸಚಿವರ ಮಹತ್ವದ ಸಭೆ

ಸರ್ಕಾರದ ನಿರ್ಧಾರಕ್ಕೂ ಮೊದಲು ಸಚಿವರ ಮಹತ್ವದ ಸಭೆ

ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಸ್ಪರ ಸಮಾಲೋಚನೆ ನಡೆಸಿದ ನಂತರದಲ್ಲಿ ಸೂಕ್ತ ಕ್ರಮ ತೆೆಗೆದುಕೊಳ್ಳಲಾಗುವುದು. ನಂತರ ನಗರದ ಬೀದಿಗಳಲ್ಲಿ ಶ್ವಾನಗಳನ್ನು ಹಿಡಿಯುವುದರ ಬದಲಿಗೆ ಬೇರೆ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಸಚಿವ ಪ್ರಭು ಬಿ ಚವ್ಹಾಣ್ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ನಾಯಿಗಳನ್ನು ಗುರುತಿಸಿ ಅವುಗಳಿಗೆ "ಲಸಿಕೆ" ಹಾಕಲು ನಿರ್ಧರಿಸಲಾಗಿ ಎಂದು ಹೇಳಿದ್ದಾರೆ.

ಬೆಂಗಳೂರಿನ ಶ್ವಾನಗಳಿಗೆ ಬಂಜೆತನದ ಲಸಿಕೆ

ಬೆಂಗಳೂರಿನ ಶ್ವಾನಗಳಿಗೆ ಬಂಜೆತನದ ಲಸಿಕೆ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಹಿಂದೆಯೂ ಸರ್ಕಾರದ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಅದೇ ರೀತಿ ಈ ಸಂಬಂಧ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಬಿ ಚೌಹಾಣ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಶುಸಂಗೋಪನಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆಗೂ ಚರ್ಚಿಸಿದರು. ಈ ವೇಳೆ ಶ್ವಾನಗಳಿಗೆ "ಬಂಜೆತನ ಮತ್ತು ರೇಬಿಸ್ ವಿರುದ್ಧ" ಲಸಿಕೆ ಹಾಕಲು ನಿರ್ಧರಿಸಲಾಗಿದೆ.

ಪ್ರತಿನಿತ್ಯ 400 ಶ್ವಾನಗಳಿಗೆ ಲಸಿಕೆ ವಿತರಣೆ

ಪ್ರತಿನಿತ್ಯ 400 ಶ್ವಾನಗಳಿಗೆ ಲಸಿಕೆ ವಿತರಣೆ

ಬೀದಿ ನಾಯಿಗಳಲ್ಲಿ ಬಂಜೆತನದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿ, ಪಶುಪಾಲನೆ ಮತ್ತು ಬಿಬಿಎಂಪಿ ಪ್ರತಿದಿನ 400ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ಹಾಕಲು ನಿರ್ಧರಿಸಿದೆ. ಲಸಿಕೆ, ಚಿಕಿತ್ಸೆ, ಆ್ಯಂಟಿಬಯೋಟಿಕ್ ಲಸಿಕೆಗಳನ್ನು ನೀಡಲು ಮತ್ತು ಅವರ ಪ್ರದೇಶಗಳಲ್ಲಿ ಅವರಿಗೆ ಆಶ್ರಯ ನೀಡಲು ಬಿಬಿಎಂಪಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಲಾಗುವುದು ಎಂದು ಸಚಿವ ಚೌಹಾಣ್ ತಿಳಿಸಿದ್ದಾರೆ.

ನಾಯಿಗಳ ಸ್ಥಳಾಂತರ ಮತ್ತು ಹಿಡಿಯಲು ನಿರ್ದೇಶನ ನೀಡಿಲ್ಲ

ನಾಯಿಗಳ ಸ್ಥಳಾಂತರ ಮತ್ತು ಹಿಡಿಯಲು ನಿರ್ದೇಶನ ನೀಡಿಲ್ಲ

ಬೆಂಗಳೂರಿನ ಬೀದಿ ನಾಯಿಗಳನ್ನು ಹಿಡಿಯುವುದಕ್ಕೆ ಅಥವಾ ನಾಯಿಗಳನ್ನು ಸ್ಥಳಾಂತರಿಸಲು ಯಾವುದೇ ನಿರ್ದೇಶನವನ್ನು ನೀಡಲಾಗುವುದಿಲ್ಲ. ಬೆಂಗಳೂರಿನ ಬೀದಿಗಳಲ್ಲಿ ಬೀದಿ ನಾಯಿಗಳನ್ನು ಓಡಿಸಬಾರದು ಎಂದು ಪಶುಸಂಗೋಪನಾ ಇಲಾಖೆ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

Recommended Video

Dinesh Karthik ಭಾರತ ಕಂಡ ಶ್ರೇಷ್ಠ 360° ಆಟಗಾರ | *Cricket | OneIndia Kannada

English summary
State animal husbandry dept decides not to shift street dogs to shelter houses in Bengaluru. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X