ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಐಎಸ್‌ಸಿ ಆವರಣದಲ್ಲಿ 'ಪಿಕ್‌ ಎ ರಿಕ್' ಎಲೆಕ್ಟ್ರಿಕ್ ಆಟೋ ಓಡಾಟ

|
Google Oneindia Kannada News

ಬೆಂಗಳೂರು, ಮಾರ್ಚ್ 14: ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣದಲ್ಲಿ 'ಪಿಕ್ ಎ ರಿಕ್' ಎಲೆಕ್ಟ್ರಿಕ್ ಆಟೋ ಓಡಾಟ ಆರಂಭವಾಗಲಿದೆ.

ಕಳೆದ ವರ್ಷ ಮೂರು ದಿನಗಳ ಕಾಲ ಟ್ರಯಲ್ ರನ್ ನಡೆದಿತ್ತು, ಇದೀಗ ಹೊಸದಾಗಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಪರಿಚಯಿಸಲಾಗಿದೆ. ಐಐಎಸ್‌ಸಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಭೇಟಿ ನೀಡುವವರ ಅನುಕೂಲಕ್ಕಾಗಿ ಇ ಆಟೋ ರಿಕ್ಷಾ ಆರಂಭಿಸಲಾಗುತ್ತಿದೆ.

ಎಲೆಕ್ಟ್ರಿಕ್ ಆಟೋಗಳಿಗೆ 1ಲಕ್ಷ ರೂ. ಸಬ್ಸಿಡಿ ಎಲೆಕ್ಟ್ರಿಕ್ ಆಟೋಗಳಿಗೆ 1ಲಕ್ಷ ರೂ. ಸಬ್ಸಿಡಿ

ಫೀಡ್ ಬ್ಯಾಕ್ ಪಡೆದು ದಿನನಿತ್ಯವೂ ಇ ಆಟೋ ಸಂಚರಿಸುವಂತೆ ಮಾಡಲಾಗಿದೆ. ಮಾರ್ಚ್ 16ರಂದು ಕಿಕ್ ಎ ರಿಕ್ ಆಟೋಗೆ ಚಾಲನೆ ನೀಡಲಾಗುತ್ತಿದೆ.ಟ್ರಾನ್ಸ್‌ವಾಹನ್ ಟೆಕ್ನಾಲಜೀಸ್ ಅವರು ಆಟೋವನ್ನು ಅಭಿವೃದ್ಧಿಪಡಿಸಿದ್ದಾರೆ.

Start of Regular E-Rickshaw service in IISc Campus named Pick-E-Rick

ಮೊದಲಿಗೆ ಒಟ್ಟು 10 ಆಟೋಗಳು ಸಂಚರಿಸಲಿವೆ. ವಾರದಲ್ಲಿ ಭಾನುವಾರ ಹೊರತುಪಡಿಸಿ ಆರು ದಿನಗಳು ಸಂಚರಿಸಲಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 7.30ರವರೆಗೆ ಓಡಾಟ ಇರಲಿದೆ. ಒಂದು ಬದಿ ಓಡಾಟಕ್ಕೆ 5 ರೂ ನೀಡಬೇಕಾಗುತ್ತದೆ. ಯುಪಿಐ ಅಪ್ಲಿಕೇಷನ್, ಪೇಟಿಎಂ ಮೂಲಕವೂ ಹಣ ನೀಡಬಹುದು.

English summary
As it may be recalled, institute had a 3-day E-Rickshaw trial run last year around the Open Day, to explore and understand the possibility of running a regular E-Rickshaw service inside IISc campus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X