ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಬಿಡಲು ಇದ್ದ ಕಾರಣಗಳನ್ನು ಬಿಚ್ಚಿಟ್ಟ ಎಸ್‌ಟಿ ಸೋಮಶೇಖರ್

|
Google Oneindia Kannada News

ಬೆಂಗಳೂರು, ನವೆಂಬರ್ 20: ಯಡಿಯೂರಪ್ಪನವರ ನಡೆ ನುಡಿ ನೋಡಿ,ಅವರು ಸಿಎಂ ಆಗಬೇಕು ಎಂಬ ಕಾರಣಕ್ಕೆ ನಾವು 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆವು ಎಂದು ಎಸ್‌ಟಿ ಸೋಮಶೇಖರ್ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ನನಗೆ ಒಬ್ಬನೇ ಒಬ್ಬ ಅಧಿಕಾರಿಯನ್ನೂ ಟ್ರಾನ್ಸ್‌ಫರ್ ಮಾಡಲು ಆಗಿರಲಿಲ್ಲ. ಸುಪ್ರಿಂ ಕೋರ್ಟ್‌ನಲ್ಲಿ ನಮ್ಮ ಶಾಸಕ ಸ್ಥಾನ‌ ಉಳಿದಿದ್ದರೆ ನಾವು ನಮ್ಮ ರಾಜೀನಾಮೆ ವಾಪಸ್ ಪಡೆದು ಯಡಿಯೂರಪ್ಪನವರನ್ನು ಬೆಂಬಲಿಸಬೇಕು ಎಂದು ನಿರ್ಧರಿಸಿದ್ದೆವು.

ಮತದಾರರನ್ನು ಸೆಳೆಯಲು ಎಸ್‌ಟಿ ಸೋಮಶೇಖರ್ ಜಾತಿ ಅಸ್ತ್ರಮತದಾರರನ್ನು ಸೆಳೆಯಲು ಎಸ್‌ಟಿ ಸೋಮಶೇಖರ್ ಜಾತಿ ಅಸ್ತ್ರ

ಆದರೆ ಸುಪ್ರಿಂಕೋರ್ಟ್ ನಮ್ಮ ಶಾಸಕ ಸ್ಥಾನ ಉಳಿಸಲಿಲ್ಲ ಹಾಗಾಗಿ ನಾವು ಬಿಜೆಪಿ ಸೇರಿ ಚುನಾವಣೆ ಎದುರಿಸಬೇಕಾಯ್ತು ಎಂದರು.ನಾನು ಹಾಗೂ ಬೈರತಿ ಬಸವರಾಜು ಅವರು ಕುಮಾರಸ್ವಾಮಿಯವರನ್ನು ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಭೇಟಿಯಾಗಿ ಬಿಡಿಎ ಆಯುಕ್ತರನ್ನು ಬದಲಾವಣೆ ಮಾಡಿ ಎಂದು ಮನವಿ ಮಾಡಿದೆ.ಅವರು ಮಾಡಲಿಲ್ಲ.

ಯಾವಾಗ ಸಿಕ್ಕರೂ ಮುಖ್ಯಮಂತ್ರಿಗಳು ಸೋಮಣ್ಣ ಬನ್ನಿ ಏಯ್ ಸೋಮಣ್ಣನ ಕೆಲಸ ಮಾಡಿಕೊಡ್ರೋ ಎನ್ನುತ್ತಿದ್ದರು. ಆದರೆ ನಾವು ಕೊಟ್ಟ ಮನವಿಗಳು ಏನಾಗುತ್ತಿದ್ದವೋ ಗೊತ್ತಿಲ್ಲ,ಆದರೆ ನಮ್ಮ‌ಕೆಲಸ ಮಾತ್ರ ಆಗುತ್ತಿರಲಿಲ್ಲ.ಹಾಗಾಗಿ ನಾವು ಕಾಂಗ್ರೆಸ್ ಬಿಟ್ಟು ಮೈತ್ರಿ ಸರ್ಕಾರ ಪತನಗೊಳಿಸುವ ನಿರ್ಧಾರ ಮಾಡಿದೆವು.

ಅದೇ ಈಗ ಯಡಿಯೂರಪ್ಪನವರು ನೋಡಿ 780 ಕೋಟಿ ರೂ.ಅನುದಾನ ಕೊಟ್ಟಿದ್ದಾರೆ. ಒಂದೊಂದು ಪಂಚಾಯ್ತಿಗೂ ಹತ್ತು ಕೋಟಿ ರೂ.ವರಗೆ ಸಿಗುತ್ತದೆ. ಪಿಡಬ್ಲ್ಯೂಡಿ ಇಲಾಖೆಯಿಂದ ಎಸ್ ಸಿ ಎಸ್ ಟಿ ಕಾಲೋನಿಗಳಿಗೆ ಎಂಟು ಕೋಟಿ ಉಳಿದವಕ್ಕೆ ಐದು ಕೋಟಿ ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂದು ವಿವರಿಸಿದರು.

ಮೈತ್ರಿ ಸರ್ಕಾರದ ರಚನೆಯಲ್ಲಿ ನಾನೂ ಕೂಡ ಭಾಗಿಯಾಗಿದ್ದೆ

ಮೈತ್ರಿ ಸರ್ಕಾರದ ರಚನೆಯಲ್ಲಿ ನಾನೂ ಕೂಡ ಭಾಗಿಯಾಗಿದ್ದೆ

ಮೈತ್ರಿ ಸರ್ಕಾರ ರಚನೆಯಲ್ಲಿ ನಾನೂ ಕೂಡ ಸಕ್ರೀಯವಾಗಿ ಭಾಗಿಯಾಗಿದ್ದೆ.ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿದ್ದ ಯಾವುದೇ ಕಾರ್ಯಗಳನ್ನು ಮುಂದುವರಿಸಲಿಲ್ಲ ಅದಕ್ಕೆ ಬೇಸರವಾಗಿತ್ತು.

ಈಗ ಬಿಜೆಪಿಯ ಯಾವ ಕಾರ್ಯಕರ್ತರಿಗೂ ನಾನು ನೋವು ಕೊಡುವ ಜಾಯಮಾನದವನಲ್ಲ.ಸದಾನಂದಗೌಡ ಮತ್ತು ಶೋಭಾ ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇನೆ ಎಂದು ಮಾತುಕೊಟ್ಟಿದ್ದೇನೆ.ಯಾವ ಕಾರ್ಯಕರ್ತರಿಗೂ ಅನ್ಯಾಯವಾಗಲ್ಲ.ಹೊಸಬ ಹಳಬ ಅಂತಾ ಬೇದಭಾವ ಮಾಡಲ್ಲ. ಅಲ್ಲೊಂದು ಹೆಜ್ಜೆ ಇಲ್ಲೊಂದು ಹೆಜ್ಜೆ ಇಟ್ಟುಕೊಂಡವರಿಗೆ ಮಾತ್ರ ತೊಂದರೆ ಆಗಬಹುದು.

ಕುಮಾರಸ್ವಾಮಿ ಸಾಲಮನ್ನಾ ನೆಪ ಹೇಳುತ್ತಿದ್ದರು

ಕುಮಾರಸ್ವಾಮಿ ಸಾಲಮನ್ನಾ ನೆಪ ಹೇಳುತ್ತಿದ್ದರು

ಯಾವಾಗ ಕೇಳಿದ್ರು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸಾಲ ಮನ್ನಾ ನೆಪ ಹೇಳುತ್ತಿದ್ದರು.ಕ್ಷೇತ್ರದ ಅಭಿವೃದ್ದಿಗೆ ಹಣ ಕೊಡಲಿಲ್ಲ.ಬೆಳಗಾವಿ ಅಧಿವೇಶನದಲ್ಲೂ ನಾನು ಪ್ರಸ್ತಾಪ ಮಾಡಿದೆ. ಒಂಭತ್ತು ತಿಂಗಳಾದರೂ ಹಣ ಬಿಡುಗಡೆಯಾಗಲಿಲ್ಲ ಎಂದರು.

ರಸ್ತೆಗೆ ಡಾಂಬರೀಕರಣ

ರಸ್ತೆಗೆ ಡಾಂಬರೀಕರಣ

ಒಮ್ಮೆ ಸಿದ್ದರಾಮಯ್ಯ ಹೆಮ್ಮಿಗೆಪುರಕ್ಕೆ ಬಂದಾಗ ಅಲ್ಲಿನ ರಸ್ತೆಗೆ ಯಾಕೆ ಡಾಂಬರೀಕರಣ ಮಾಡಿಲ್ಲ ಎಂದು ಕೇಳಿದ್ರು.ಆದರೆ ಅನುದಾನ ಕೊಟ್ಟಿಲ್ಲ.ಅದಕ್ಕೆ ಡಾಂಬರೀಕರಣ ಮಾಡಿಲ್ಲ ಎಂದೆ ನಾನು ಯಾವ ತಪ್ಪು ಮಾತೂ ಆಡಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ಇಳಿದ್ರು

ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿಯಿಂದ ಇಳಿದ್ರು

ಆದರೆ ಅರ್ದ ಗಂಟೆಯಲ್ಲೇ ಕುಮಾರಸ್ವಾಮಿ ನಾನು ಮುಖ್ಯಮಂತ್ರಿ ಪದವಿಯಿಂದ ಇಳಿಯುತ್ತೇನೆ.ಕಾಂಗ್ರೆಸ್ ಶಾಸಕರು ನನಗೆ ಅವಮಾನ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ರು.ಅದಕ್ಕೆ ಕಾಂಗ್ರೆಸ್ ಪಕ್ಷದಿಂದ ನನಗೆ ನೊಟೀಸ್ ಕೊಟ್ಟರು.
ನಾನು ಅಂದೇ ಸುದ್ದಿಗೋಷ್ಠಿಯಲ್ಲೇ ಪಕ್ಷ ಬಿಡುವ ಸುಳಿವು ನೀಡಿದೆ. ನಂತರ ಬಿಡಿಎ ಅಧ್ಯಕ್ಷನನ್ನಾಗಿ ಮಾಡಿದ್ರು.ಆದರೆ ಒಂದೇ ಒಂದು ಫೈಲ್ ಕ್ಲಿಯರ್ ಮಾಡಲು ಅವಕಾಶ ಕೊಡಲಿಲ್ಲ.

83 ಕೋಟಿ ರೂ.ಬಾಕಿ ಇರುವ ಹಣ ಬಿಡುಗಡೆ ಮಾಡಿಸಿ ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆ ಅಭಿವೃದ್ದಿಗೆ ಪ್ರಯತ್ನಿಸಿದೆ. ಆದರೆ ರಾಕೇಶ್ ಸಿಂಗ್ ಅವಕಾಶವೇ ಕೊಡಲಿಲ್ಲ. ಹಾಗಾಗಿ ನಾನು ಬಿಡಿಎ ಅಧ್ಯಕ್ಷನನ್ನಾಗಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎನಿಸಿತು.

English summary
ST Somashekar Unleashed His Reasons For Leaving CongressST Somashekar Unleashed His Reasons For Leaving Congress, and also said that we are liked Yediyurappa's Behavior we have resigned from the MLA Post Joined Hands with them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X