ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲಿನ ತಾಪಕ್ಕೆ ಕೊರೋನಾ ವೈರಸ್ ಹರಡುವುದಿಲ್ಲ: ಶ್ರೀರಾಮುಲು

|
Google Oneindia Kannada News

ಬೆಂಗಳೂರು, ಮಾ. 10: ನಮ್ಮಲಿನ ಬಿಸಿಲಿನ ತಾಪಕ್ಕೆ ಕೊರೋನಾ ವೈರಸ್ ಹರಡುವುದಿಲ್ಲ, ಹೀಗಾಗಿ ಕೊವಿಡ್-19 ವೈರಸ್ ಬಗ್ಗೆ ಭಯಬೇಡ ಎಂದು ಆರೋಗ್ಯ ಸಿವ ಶ್ರೀರಾಮುಲು ಹೇಳಿದ್ದಾರೆ. ವಿಧಾನಸೌಧದಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ ಕೊರೋನ ಬಗ್ಗೆ ಬಯಭೀತರಾಗೋದು ಬೇಡ. ಸರ್ಕಾರ ಈ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಅಮೇರಿಕಾದಿಂದ ಬಂದಿರುವ ವ್ಯಕ್ತಿಗೆ ವೈರಸ್ ದೃಢಪಟ್ಟಿದೆ. ಅವರ ಕುಟುಂಬಸ್ಥರು, ಟ್ಯಾಕ್ಸಿ ಚಾಲಕರು ಎಲ್ಲರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ. ಇಲಾಖೆಯಲ್ಲಿ ಹಣಕಾಸಿನ ಕೊರತೆ ಇಲ್ಲ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಎಲ್ಲ ಕಡೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ.

ಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆಕರ್ನಾಟಕದಲ್ಲಿ ಮೊದಲ ಕೊರೊನಾವೈರಸ್ ಕೇಸ್ ಪತ್ತೆ

ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದವರನ್ನ ಆಸ್ಪತ್ರಗೆ ಕರೆತರಲಾಗಿದೆ, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಅಧಿಕ ಮೌಲ್ಯಕ್ಕೆ ಮಾಸ್ಕ್ ಮಾರದಂತೆ ಎಚ್ಚರಿಸಲಾಗಿದೆ. ಈ ಕುರಿತು ಡಿಹೆಚ್‌ಓ ಹಾಗೂ ನೋಡಲ್ ಆಫೀಸರ್‌ಗೆ ಸಹ ನಿಗವಹಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

Health Minister Sriramulu said the coronavirus was not spreading to the hotter temperatures in our state

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿ: ಇದಕ್ಕೂ ಮೊದಲು ಆರೋಗ್ಯ ಸಚಿವ ಶ್ರೀರಾಮುಲು ಅವರು ಬೆಂಗಳೂರು ಅಂತಾರಾಷ್ಷ್ರೀಯ ವಿಮಾನ ನಿಲ್ದಾಣಕ್ಕೆ ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಕೊರೋನಾ ವೈರಸ್ ಬಗ್ಗೆ ಆರೋಗ್ಯ ಇಲಾಖೆ ಕೈಗೊಂಡಿರುವ ತಪಾಸಣೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವಿವರ ಪಡೆದುಕೊಂಡರು.

English summary
Health Minister Sriramulu said the coronavirus was not spreading to the hotter temperatures in our state. The people of the state should not be afraid of Kovid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X