ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯಲ್ಲಿ ಏನಿದು ಆರೋಗ್ಯ ಸಚಿವ ಶ್ರೀರಾಮುಲು ಮುನಿಸು?

|
Google Oneindia Kannada News

ಬೆಂಗಳೂರು, ಡಿ. 14: ಡಿಸಿಎಂ ಸ್ಥಾನದ ವಿಚಾರದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ವತಃ ಅವರೆ ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಅವರ ಸಮುದಾಯದವರೆ ಆಗಿರುವ ನೂತನ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ಕೊಡುವುದಕ್ಕೆ ರಾಮುಲು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಶ್ರೀರಾಮುಲು ಅವೆಲ್ಲ ನಿಜವಲ್ಲ ಎಂದಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ವೈಯಕ್ತಿಕ ಕೆಲಸ ಇದ್ದುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅನುಮತಿ ಪಡೆದುಕೊಂಡೆ ಸಂಪುಟ ಸಭೆಗೆ ಬಂದಿರಲಿಲ್ಲ. ಆದರೆ ಇದೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಆಗಿದೆ. ನಾನು ಮುಖ್ಯಮಂತ್ರಿಯವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ಮುಂದೆ ವಿಧಾನಸೌಧ ಪ್ರವೇಶಕ್ಕೆ ಪಾಸ್ ಬೇಡ; ಆಧಾರ್ ಕಾರ್ಡ್‌ ಸಾಕು ಇನ್ಮುಂದೆ ವಿಧಾನಸೌಧ ಪ್ರವೇಶಕ್ಕೆ ಪಾಸ್ ಬೇಡ; ಆಧಾರ್ ಕಾರ್ಡ್‌ ಸಾಕು

ನಾನು ಮುನಿಸಿಕೊಂಡಿದ್ದೇನೆ ಎನ್ನುವ ಸುದ್ದಿಗಳು ಸುಳ್ಳು. ಮೂರು ದಿನಗಳ ಕಾಲ ವೈಯಕ್ತಿಕ ಕೆಲಸದಲ್ಲಿದ್ದೆ. ಡಿಸಿಎಂ ಸ್ಥಾನ ಬೇಕೇ ಬೇಕೆಂದು ನಾನು ಪಟ್ಟು ಹಿಡಿದಿಲ್ಲ ಎಂದಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Sriramulu reaction about deputy chief minister post

ಯಾವುದು ಅಸಹ್ಯ ರಾಜಕಾರಣ; ಹೆಚ್ ಡಿಕೆಗೆ ಶ್ರೀರಾಮುಲು ಟ್ವೀಟ್ ಏಟು ಯಾವುದು ಅಸಹ್ಯ ರಾಜಕಾರಣ; ಹೆಚ್ ಡಿಕೆಗೆ ಶ್ರೀರಾಮುಲು ಟ್ವೀಟ್ ಏಟು

ರಮೇಶ್‌ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ; ಹೈಕಮಾಂಡ್ ತೀರ್ಮಾನ

ನೂತನ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ಕೊಡುವುದು ಹೈಕಮಾಂಡ್'ಗೆ ಬಿಟ್ಟ ವಿಚಾರ. ನಾನು ಪಕ್ಷಕ್ಕಾಗಿ ರಾಜಕೀಯ ಮಾಡಿದ್ದೇನೆ. ಸ್ವಂತಕ್ಕಾಗಿ ರಾಜಕೀಯ ಮಾಡಿಲ್ಲ. ನಾನೇ ಡಿಸಿಎಂ ಆಗಬೇಕು ಅಂತಿಲ್ಲ.

Sriramulu reaction about deputy chief minister post

ಆದರೆ ಶ್ರೀರಾಮುಲು ಡಿಸಿಎಂ ಆಗಬೇಕು ಎಂಬುದು ಸಮುದಾಯದ ಆಸೆ ಎಂದಿದ್ದಾರೆ. ಯಾರಿಗೆ ಡಿಸಿಎಂ ಆಗುವ ಆಸೆ ಇರುವುದಿಲ್ಲ ಹೇಳಿ? ಹೈಕಮಾಂಡ್ ಡಿಸಿಎಂ ಸ್ಥಾನ ನೀಡಿದ್ರೆ ನಿರ್ವಹಿಸಲು ಸಿದ್ದನಿದ್ದೇನೆ. ಆದರೆ ಪಕ್ಷಕ್ಕೆ ಮುಜುಗುರ ಆಗುವುದಾದರೆ ಡಿಸಿಎಂ ಸ್ಥಾನ ಬೇಡ ಅಂತಾನೂ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

English summary
Sriramulu reaction about dcm,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X