ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುದ್ದೇನಹಳ್ಳಿಯಲ್ಲಿ 20 ದೇಶಗಳ ವಿಶ್ವ ಯುವಜನ ಮೇಳ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ನವೆಂಬರ್, 18: ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆ ಮತ್ತು ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಜಂಟಿಯಾಗಿ ಚಿಕ್ಕಬಳ್ಳಾಪುರ ಸಮೀಪದ ಮುದ್ದೇನಹಳ್ಳಿಯಲ್ಲಿ ನವೆಂಬರ್ 19 ರಿಂದ 23 ರವರೆಗೆ ವಿಶ್ವ ಯುವಜನ ಮೇಳ ಆಯೋಜಿಸಲಾಗಿದೆ.

ಈ ಐದು ದಿನಗಳ ಯುವಜನ ಸಭೆಯು ವಿಶ್ವದ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಪ್ರತಿನಿಧಿಗಳಿಗೆ ಅರಿವನ್ನು ನೀಡಲಿದ್ದು ವಿವಿಧತೆಯಲ್ಲಿ ಏಕತೆ ತತ್ವ ಸಾರಲಿದೆ. ಯುವಜನರಲ್ಲಿ ಸತ್ಯ, ಶಾಂತಿ, ಪ್ರೀತಿ ಮತ್ತು ಅಹಿಂಸೆ ಕುರಿತಾಗಿ ಸಕಾರಾತ್ಮಕ ಬದಲಾವಣೆ ತರುವ, ಸ್ವಾರ್ಥರಹಿತವಾಗಿ ಪ್ರೀತಿಸಿ, ಸೇವಾ ಮನೋಭಾವ ಬೆಳೆಸಿಕೊಳ್ಳಿ' ಎಂಬ ಮೌಲ್ಯಗಳನ್ನು ಸಾರುವ ಉದ್ದೇಶ ಹೊಂದಿದೆ.['ಸಾಯಿಬಾಬಾ, ರಾಘವೇಂದ್ರ ಶ್ರೀಗಳು ದೇವರಲ್ಲ']

Sri Satya saibaba trust organize World Youth Festival at Muddenahalli, Bengaluru

ಈ ಯುವಜನ ಮೇಳದಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್, ದಿ ಇಂಟರ್ ನ್ಯಾಷನಲ್ ಸೂಫಿ ಸ್ಕೂಲ್-ಸೆನೆಗಲ್, ದಿ ಮಿಷನರೀಸ್ ಆಫ್ ಚಾರಿಟಿ, ರಾಮಕೃಷ್ಣ ಮಠ ಮತ್ತು ಮಿಷನ್, ದಿ ಚಿನ್ಮಯ ಮಿಷನ್, ದಿ ಚರ್ಚ್ ಆಫ್ ಅಸ್ಸಿಸಿ-ಇಟಲಿ ಮತ್ತು ಹಿಮಾಲಯನ್ ಇನ್ಸ್ ಟಿಟ್ಯೂಟ್ ನ ನಾನಾ ಗಣ್ಯರು ಆಗಮಿಸಲಿದ್ದಾರೆ. ಅಲ್ಲದೇ ಪಂಡಿತ್ ಶಿವಕುಮಾರ್ ಶರ್ಮಾ, ಸೋನು ನಿಗಂ, ಮ್ಯಾಂಡೊಲಿನ್ ಯು ರಾಜೇಶ್, ಹರಿಹರನ್, ಕುನಾಲ್ ಗಂಜಾವಾಲಾ, ಸುಮೀತ್ ಟಪ್ಪೂ ಮತ್ತಿತರರು ತಮ್ಮ ಸಂಗೀತದಿಂದ ಮನ ಸೆಳೆಯಲಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ದೀಪಿಕಾ ಅಮಿರಪು 09000 999082 ಅಥವಾ ರಾಜಶೇಖರ್ 09343 850866. 18-40 ವರ್ಷಗಳ ವಯೋಮಾನದ ಭಾಗವಹಿಸುವವರು ಈ ನೋಂದಣಿ ಮಾಡಿಕೊಳ್ಳಬಹುದು. ಈ ಮೇಳದಲ್ಲಿ ಭಾರತ ಸೇರಿದಂತೆ ವಿಶ್ವದ ಇತರ 20 ದೇಶಗಳ ಸುಮಾರು 2000 ಯುವ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.[ಅತ್ತೆ ಹೆಸರಿನಲ್ಲಿ ಶಿರಡಿ ಸಾಯಿಬಾಬಾ ಹುಂಡಿಗೆ 40 ಲಕ್ಷ!]

ಲೋಕಸೇವಾ ಶಿಕ್ಷಣ ಸಂಸ್ಥೆಗಳ ಕುರಿತು:

ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಗಳು ಅಳಿಕೆ ಮತ್ತು ಮುದ್ದೇನಹಳ್ಳಿಗಳಲ್ಲಿದ್ದು ಕ್ರಮವಾಗಿ 1963 ಮತ್ತು 1973ರಲ್ಲಿ ಶ್ರೀ ಮದಿಯಾಲ ನಾರಾಯಣ ಭಟ್ ಅವರ ದೂರದೃಷ್ಟಿಯ ಫಲವಾಗಿ ಶ್ರೀ ಸತ್ಯಸಾಯಿ ಬಾಬಾ ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದವು.

ಶ್ರೀ ಮದಿಯಾಲ ನಾರಾಯಣ ಭಟ್ ಅವರು ಅಳಿಕೆ ಮತ್ತು ಮುದ್ದೇನಹಳ್ಳಿಯ ಶಾಲೆಗಳ ಸಂಸ್ಥಾಪಕರು ಮತ್ತು ಪೋಷಕರಾಗಿದ್ದು, ಲೋಕಸೇವಾ ವೃಂದ ಟ್ರಸ್ಟ್ ಅಡಿಯಲ್ಲಿ ಪ್ರಾರಂಭಿಸಲಾಯಿತು. ನಂತರ 1977ರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ವಾಧೀನಕ್ಕೆ ಪಡೆದುಕೊಂಡು ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು ಎಂದು
ಮರುನಾಮಕರಣ ಮಾಡಿದರು.[ಶಿರಡಿ ಹುಂಡಿಗೆ ಬೆಂಗಳೂರು ಭಕ್ತನ ಭರ್ಜರಿ ದಾನ]

ಈ ಶಿಕ್ಷಣ ಸಂಸ್ಥೆಗಳು ಭಾರತೀಯ ಪರಂಪರೆಯ ಮಹತ್ತರ ಮೌಲ್ಯಗಳನ್ನು ಭಕ್ತಿ, ಶಿಸ್ತು, ಪ್ರೀತಿ ಮತ್ತು ಪರಸ್ಪರ ಸಹಕಾರದಲ್ಲಿ ನೀಡುತ್ತದೆ. ಪ್ರಸ್ತುತ ಕರ್ನಾಟಕದಾದ್ಯಂತ 19 ಸಂಸ್ಥೆಗಳು ಒಂಬತ್ತು ಕ್ಯಾಂಪಸ್ ಗಳಲ್ಲಿ ಹೊಂದಿದೆ. ಈ ಕ್ಯಾಂಪಸ್ ಗಳನ್ನು ಶ್ರೀ ಸತ್ಯಸಾಯಿ ಸರಸ್ವತಿ ಎಜುಕೇಷನ್ ಟ್ರಸ್ಟ್ ನಿರ್ವಹಿಸುತ್ತದೆ

English summary
Sri Satya saibaba trust organize World Youth Festival at Bengaluru, on November 19 to 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X