ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀ ರವಿಶಂಕರ ಗುರೂಜಿ ಜೀವನ ಚರಿತ್ರೆ ಬಿಡುಗಡೆ

|
Google Oneindia Kannada News

ಬೆಂಗಳೂರು, ಜನವರಿ 11: ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದ ವಿಶಾಲಾಕ್ಷಿ ಮಂಟಪದಲ್ಲಿ ಇಂದು (ಗುರುವಾರ) ಶ್ರೀ ರವಿಶಂಕರ ಗುರೂಜಿ ಅವರ ಜೀವನಾಧಾರಿತ ಪುಸ್ತಕ "ಗುರುದೇವ್ ಆಫ್ ದಿ ಪ್ಲೇಟು ಆಫ್ ದಿ ಪೀಕ್' ಬಿಡುಗಡೆಗೊಂಡಿತು.

ವಿಶೇಷವೆಂದರೆ ರವಿಶಂಕರ್ ಗುರೂಜಿ ಅವರ ಸಹೋದರಿ ಭಾನುಮತಿ ನರಸಿಂಹನ್ ಅವರು ಈ ಪುಸ್ತಕವನ್ನು ಬರೆದಿದ್ದು, ಇಂದು ತಮ್ಮ ಹುಟ್ಟುಹಬ್ಬದ ದಿನದಂದು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, "ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಜೀವನ ಮತ್ತು ಸಾಧನೆಯನ್ನು ಸೆರೆ ಹಿಡಿಯುವುದು ಎಂದರೇ ಟೀ ಕಪ್ ನಲ್ಲಿ ಸಮುದ್ರದ ನೀರನ್ನು ಸೆರೆ ಹಿಡಿದಂತೆ ಎಂದು ತಾವು ಬರೆದ ಪುಸ್ತಕದ ಬಗ್ಗೆ ಅನುಭವವನ್ನು ಹಂಚಿಕೊಂಡರು.

ರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಮಯ ಪ್ರಶಸ್ತ : ಶ್ರೀಶ್ರೀ

ಆಧ್ಯಾತ್ಮ ಕ್ಷೇತ್ರದಲ್ಲಿ ಮಹಾನ್ ತಪಸ್ಸು ಮಾಡಿ, ವಿಶ್ವಕ್ಕೆ ಸಹೋದರತ್ವ, ಶಾಂತಿ ಮಂತ್ರ ಬೋಧಿಸುತ್ತಿರುವ ಶ್ರೀಗಳನ್ನು ಒಂದು ಪುಸ್ತಕದಲ್ಲಿ ಸೆರೆ ಹಿಡಿಯುವುದು ಸುಲಭದ ಮಾತಲ್ಲ. ದೇಶ-ವಿದೇಶದ ಸ್ನೇಹಿತರು ಶ್ರೀಗಳ ಸಾಧನೆ ಹಾಗೂ ಪೂರ್ವಾಶ್ರಮದ ಕುತೂಹಲಕಾರಿ ಸಂಗತಿಗಳನ್ನು ತಿಳಿಸುವಂತೆ ಕೇಳುತ್ತಿದ್ದರು. ಆದ್ದರಿಂದ ಇದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಪುಸ್ತಕ ಹೊರತರುವ ಕಾರ್ಯಕ್ಕೆ ಸನ್ನದನಾದೆ.

ಶ್ರೀಗಳ ಶಿಷ್ಯವರ್ಗ ಹಾಗೂ ಆಪ್ತರೊಂದಿಗಿನ ಒಡನಾಟ, ವಿದೇಶದಲ್ಲಿನ ಘಟನೆಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ. ಈ ಪುಸ್ತಕ ಜೀವನಸಂದೇಶ ಸಾರುವ ಜತೆಗೆ ಆಧ್ಯಾತ್ಮಿಕ ಸಾಧನೆಗೆ ಪ್ರೇರಣೆಯಾಗಲಿದೆ. ಓದುಗರ ಪ್ರತಿಕ್ರಿಯೆ ಆದರಿಸಿ ಮುಂದಿನ ಭಾಗ ತರುವ ವಿಚಾರ ಚಿಂತಿಸುವೆ ಎಂದು ಹೇಳಿದರು.

ಈ ಪುಸ್ತಕದಲ್ಲಿ ಕುತೂಹಲ ಸಂಗತಿಗಳು ಅಡಗಿವೆ

ಈ ಪುಸ್ತಕದಲ್ಲಿ ಕುತೂಹಲ ಸಂಗತಿಗಳು ಅಡಗಿವೆ

ಸಹೋದರ ರವಿ ಸನ್ಯಾಸತ್ವ ಸ್ವೀಕರಿಸುವ ಪೂರ್ವದಲ್ಲಿ ಧ್ಯಾನದಲ್ಲಿ ಏಕಾಗ್ರತೆ ಮೂಡಬೇಕೆಂಬ ಕಾರಣಕ್ಕೆಮನೆಯ ಕೊಠಡಿಯೊಳಗೆ ಸೇರಿ, ಬಾಗಿಲು ಹಾಕಿಕೊಳ್ಳುತ್ತಿದ್ದ. ಅಷ್ಟಕ್ಕು ಆತ ಬಾಗಿಲು ಹಾಕಿಕೊಂಡು ಏನು ಮಾಡುತ್ತಿದ್ದ ಎಂಬ ಕುತೂಹಲದಿಂದ ಬಾಗಿನಿನ ಕಿಂಡಿಯಲ್ಲಿ ಇಣುಕಿ ನೋಡುತ್ತಿದ್ದೆ. ಇನ್ನು ಕಾಲೇಜಿಗೆ ಹೋಗುತ್ತಿದ್ದಾಗ ಅತೀಂದ್ರಿಯ ಜಾಹೀರಾತು ಆತನ ಕಣ್ಣಿಗೆ ಬಿದ್ದಿತು. ಇದರ ಆಯೋಜಕರನ್ನು ಭೇಟಿ ಮಾಡಿ, ನಿಮಮಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ. ನನಗೆ ಕೂಡ ಧ್ಯಾನ ಮಾಡುವಂತೆ ಪ್ರೇರೆಪಿಸುತಿದ್ದ. ಆತನ ಮಾತುಗಳು ಹಾಗೂ ಅವನೊಂದಿಗಿನ ಒಡನಾಟವನ್ನು ಮರೆಯಲೇ ಸಾಧ್ಯವಿಲ್ಲ. ನನ್ನ ಸಹೋದರ ಮತ್ತು ಗುರು ಎರಡೂ ರವಿ ಎಂದು ಸಹೋದರಿ ಭಾನುಮತಿ ಹರ್ಷ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿನ ಸರಗಳ್ಳ ವೇದಾವತಿ ನದಿ ಪುನಶ್ಚೇತನದ ರೂವಾರಿಚಿಕ್ಕಮಗಳೂರಿನ ಸರಗಳ್ಳ ವೇದಾವತಿ ನದಿ ಪುನಶ್ಚೇತನದ ರೂವಾರಿ

ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದೇನು?

ಉದ್ಯಮಿ ಮೋಹನ್ ದಾಸ್ ಪೈ ಹೇಳಿದ್ದೇನು?

ಈಡೀ ವಿಶ್ವವೇ ತನ್ನ ಕುಟುಂಬ ಎಂದು ತಿಳಿದುಕೊಂಡು, ಕಾರ್ಯನಿರ್ವಹಿಸುತ್ತಿರುವರು ರವಿಶಂಕರ ಗುರೂಜಿ. ಇದರಿಂದಾಗಿ 150ಕ್ಕೂ ಹೆಚ್ಚು ದೇಶಗಳಲ್ಲಿ ಅವರಿಗೆ ಭಕ್ತರಿದ್ದಾರೆ. ವಿಶ್ವ ಭ್ರಾತೃತ್ವ ತರಬೇಕೆಂಬ ಅವರ ಕನಸಿನ ಜತೆಗೆ ಅವರು ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳು ಪುಸ್ತಕದಲ್ಲಿ ಉಲ್ಲೇಖವಾಗಿದೆ ಎಂದರು.

1ಲಕ್ಷ ಪ್ರತಿ ಮಾರಾಟ:

1ಲಕ್ಷ ಪ್ರತಿ ಮಾರಾಟ:

ಆನ್ಲೈನ್ ಶಾಪಿಂಗ್ ಮಾರಾಟ ತಾಣ ಅಮೆಜಾನ್ನಲ್ಲಿ ಕಳೆದ ಡಿಸೆಂಬರ್ನಲ್ಲಿ ಮುಂಗಡ ಬುಕ್ಕಿಂಗ್ಅವಕಾಶ ಕಲ್ಪಿಸಲಾಗಿತ್ತು. ಗುರುದೇವ್ ಆಫ್ ದಿ ಪ್ಲೇಟು ಆಫ್ ದಿ ಪೀಕ್' ಪುಸ್ತಕ ಬಿಡುಗಡೆ ಮುನ್ನವೇ ಬರೋಬ್ಬರಿ 1ಲಕ್ಷ ಪ್ರತಿ ಪುಸ್ತಕ ಮಾರಾಟವಾಗಿರುವುದು ಶ್ರೀಗಳ ಜನಪ್ರಿಯೆಗೆ ಸಾಕ್ಷಿಯಾಗಿದೆ. ಪುಸ್ತಕ 18 ಸಂಪುಟ ಹೊಂದಿದೆ.

ಹಲವು ಗಣ್ಣರು ಭಾಗಿ

ಹಲವು ಗಣ್ಣರು ಭಾಗಿ

ಗುರೂಜಿ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ನಿವೃತ ನ್ಯಾಯಮೂರ್ತಿ ಎಂ.ವೆಂಕಟಾಚಲಯ್ಯ, ಉದ್ಯಮಿ ಮೋಹನ್ ದಾಸ್ ಪೈ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಆಟ್ ಆಫ್ ಲಿವಿಂಗ್ ಟ್ರಸ್ಟಿ ಅಜಯ್ ಬಗ್ಗೆ ಸೇರಿದಂತೆ ಹಲವು ಇದ್ದರು.

English summary
The first-ever official biography of the spiritual leader and founder of The Art of Living Sri Ravi Shankar Guruji was launched on January 11, 2017. Justice Venkatachaliah, Rekha Hebbar and Mohandas Pai witnessed the event. 'Gurudev : On The Plateau Of The Peak, The Life of Gurudev Sri Sri Ravi Shankar' is written by his own sister Bhanumathi Narasimhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X