ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್.ಆರ್.ಹಿರೇಮಠ್ ವಿರುದ್ಧ ಹಣ ದುರ್ಬಳಕೆ ಆರೋಪ

|
Google Oneindia Kannada News

Tapal Ganesh
ಬೆಂಗಳೂರು, ಅ, 24 : ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ವಿರುದ್ಧ ಅನುದಾನ ದುರ್ಬಳಕೆ ಆರೋಪ ಕೇಳಿಬಂದಿದೆ. ಸುಮಾರು ಎರಡು ಕೋಟಿ ರೂ.ಗೂ ಅಧಿಕ ಅನುದಾನವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟಪಾಲ್ ಗಣೇಶ್ ದೂರಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಗಣಿ ಉದ್ಯಮಿ ಟಪಾಲ್ ಗಣೇಶ್, ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುವ ಹೆಸರಿನಲ್ಲಿ ಹಿರೇಮಠ್, ವಿದೇಶದಿಂದ ಕೋಟ್ಯಾಂತರ ರೂ. ದೇಣಿಗೆ ಪಡೆದಿದ್ದಾರೆ. ಅದನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವಿದೇಶಗಳಿಂದ ಬಡಜನರಿಗೆ ಸಹಕರಿಸುವುದಾಗಿ ಹಿರೇಮಠ್ ಕೋಟಿ-ಕೋಟಿ ಹಣವನ್ನು ತರುತ್ತಾರೆ. ಅದನ್ನು ಬಡವರಿಗೆ, ಹಿಂದುಳಿದವರಿಗೆ ಸಹಾಯ ಮಾಡಲು ವಿನೊಯೋಗಿಸುವ ಬದಲು ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ. ಹಿರೇಮಠ್ ಅವರಿಗೆ ವಿದೇಶದಿಂದ ಬಂದಿರುವ ಹಣದ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಚಿವ ಸಂತೋಷ್ ಲಾಡ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ನೈತಿಕತೆ ಇಲ್ಲ. ಹಿಂದೆ ಬಿಜೆಪಿ ಸರ್ಕಾರ ಅಕ್ರಮ ಗಣಿಗಾರಿಕೆ ತಡೆಯಲು ವಿಫಲವಾಗಿತ್ತು. ಗಣಿಧಣಿಗಳ ಹಣದಲ್ಲೇ ಅಧಿಕಾರ ಪಡೆಯಿತು. ಆದ್ದರಿಂದ ಅವರು ಪ್ರತಿಭಟನೆ ನಡೆಸುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟಪಾಲ್ ಗಣೇಶ್ ಆರೋಪಿಸಿದರು.

ಎಸ್.ಆರ್.ಹಿರೇಮಠ್ ಸಚಿವ ಸಂತೋಷ್ ಲಾಡ್ ವಿರುದ್ಧ ದಾಖಲೆಗಳನ್ನು ನೀಡಿ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಹಿರೇಮಠ್ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಅವರು ಹೇಗೆ? ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

English summary
Bellary mine owner Tapal Ganesh alleged that Samaj Parivartana Samudaya chief S.R.Hiremath misused the more than two core public funds for illegal mining protest. On October 24, Thursday, he addressed media at Bangalore and said, S.R.Hiremath collects funds from NRIs and misused it for his own use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X