ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಪುಟ್ನಿಕ್ V ಕೊರೊನಾ ಲಸಿಕೆ ಶೀಘ್ರ ಬೆಂಗಳೂರಿನಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಜೂನ್ 17: ಸ್ಪುಟ್ನಿಕ್ V ಕೊರೊನಾ ಲಸಿಕೆ ಶೀಘ್ರ ಬೆಂಗಳೂರಿನಲ್ಲಿ ಲಬ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Recommended Video

Sputnik ಲಸಿಕೆಗೆ ಕಾಯುತ್ತಿದ್ದರೆ, ನಿಮಿಗಿದೆ good news !! | Oneindia Kannada

ಕೋವಿಡ್ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ V ಲಸಿಕೆಯ ಪ್ರಯೋಗ ಭಾರತದಲ್ಲಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ, ಶೀಘ್ರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಹೇಳಿದೆ.

ಕೋವಿಡ್ 19: ಗರ್ಭಿಣಿ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳಕೋವಿಡ್ 19: ಗರ್ಭಿಣಿ, ಪ್ರಸವಾನಂತರದಲ್ಲಿ ಸೋಂಕು ಪ್ರಮಾಣ ಹೆಚ್ಚಳ

ಲಸಿಕೆಯ ಸಾಫ್ಟ್ ಲಾಂಚ್ ಭಾಗವಾಗಿ ಅದನ್ನು ಪ್ರಸ್ತುತ 9 ನಗರಗಳಲ್ಲಿ ನೀಡಲಾಗುತ್ತಿದೆ ಮತ್ತು ಬೇರೆ ನಗರಗಳಿಗೂ ವಿಸ್ತರಿಸುವ ಇರಾದೆ ಸಂಸ್ಥೆಗಿದೆ. ವಿಶಾಖಪಟ್ಟಣಂ, ಬೆಂಗಳೂರು. ಮುಂಬೈ, ಕೋಲ್ಕತಾ, ದೆಹಲಿ, ಬಡ್ಡಿ, ಮಿರ್ಯಾಲಗುಡ, ಚೆನೈ, ಮತ್ತು ಕೊಲ್ಹಾಪುರ ನಗರಗಳಲ್ಲಿ ಅದನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಡಿಜಿಟಲ್ ವ್ಯಾಕ್ಸಿನ್ ಡೆಲಿವರಿ ಪ್ಲಾಟ್​ಫಾರ್ಮ್ ಕೊವಿನ್​ನಲ್ಲಿ ಸ್ಪುಟ್ನಿಕ್ V ಲಸಿಕೆಗೆ ಇನ್ನೂ ಸ್ಲಾಟ್​ಗಳು ದೊರೆತಿಲ್ಲ.

ಭಾರತದಲ್ಲಿ ಸ್ಪುಟ್ನಿಕ್ V ಲಸಿಕೆ ಸೀಮಿತ ಪೈಲಟ್​ ಲಾಂಚ್ ಅನ್ನು ಮೇ 14 ರಂದು ಹೈದರಾಬಾದಿನ ಡಾ ರೆಡ್ಡೀಸ್ ಆರಂಭಿಸಿದ್ದು, ಅದರ ಅಂತಿಮ ಹಂತದ ಪರೀಕ್ಷೆಗಳು ಜಾರಿಯಲ್ಲಿದೆ. ಲಸಿಕೆಯನ್ನು ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲು ಸಂಸ್ಥೆಯು ಸಿದ್ಧವಾಗುತ್ತಿದೆ ಎಂದು ಡಾ ರೆಡ್ಡೀಸ್ ಲ್ಯಾಬೊರೇಟೊರೀಸ್ ಹೇಳಿಕೆ ಬಿಡುಗಡೆ ಮಾಡಿದೆ.

 ಲಸಿಕೆಗೆ ಶೈತ್ಯಾಗಾರ ವ್ಯವಸ್ಥೆ

ಲಸಿಕೆಗೆ ಶೈತ್ಯಾಗಾರ ವ್ಯವಸ್ಥೆ

ಪೈಲಟ್ ಹಂತವು ನಮ್ಮ ಶೈತ್ಯಾಗಾರದ ವ್ಯವಸ್ಥೆಯನ್ನು ಈ ನಗರಗಳಲ್ಲಿ ಟೆಸ್ಟ್ ಮಾಡುವ ಅವಕಾಶವನ್ನು ಕಲ್ಪಿಸಿದೆ, ಸ್ಪುಟ್ನಿಕ್ ಲಸಿಕೆಯನ್ನು -18 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸ್ಟೋರ್ ಮಾಡಬೇಕಾಗುತ್ತದೆ, ಮಾರುಕಟ್ಟೆಗಳಿಗೆ ಬಿಡುಗಡೆ ಮಾಡುವುದಕ್ಕೂ ಮುನ್ನ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಿಕೊಳ್ಳುತ್ತಿದ್ದೇವೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

 ನೋಂದಣಿ ಇನ್ನೂ ಶುರುವಾಗಿಲ್ಲ

ನೋಂದಣಿ ಇನ್ನೂ ಶುರುವಾಗಿಲ್ಲ

ಲಸಿಕೆ ಪೈಲಟ್​ ಹಂತದಲ್ಲಿರುವುದರಿಂದ ಸಾರ್ವಜನಿಕರಿಗೆ ಕೊವಿನ್ ಪ್ಲಾಟ್​ಫಾರ್ಮ್​ನಲ್ಲಿ ಸ್ಪುಟ್ನಿಕ್​ ಲಸಿಕೆಗಾಗಿ ನೋಂದಣಿ ಇನ್ನೂ ಪ್ರಾರಂಭವಾಗಿಲ್ಲ. ಲಸಿಕೆಯ ವಾಣಿಜ್ಯ ಲಾಂಚ್​ ಸಂದರ್ಭದಲ್ಲಿ ಅದು ತೆರೆಯಲಿದೆ ಎಂದು ಕಂಪನಿ ಹೇಳಿದೆ.

 ಲಸಿಕೆ ಶೇ.91.6ರಷ್ಟು ಪರಿಣಾಮಕಾರಿ

ಲಸಿಕೆ ಶೇ.91.6ರಷ್ಟು ಪರಿಣಾಮಕಾರಿ

ರಷ್ಯನ್ ಸಾವರೀನ್ ವೆಲ್ತ್ ಫಂಡ್ (ಆರ್​ಡಿಐಎಫ್) ನೆರವಿನಿಂದ ಸ್ಪುಟ್ನಿಕ್ V ಲಸಿಕೆಯನ್ನು ರಷ್ಯಾದ ಗಮಾಲೆಯಾ ಇನ್​ಸ್ಟಿಟ್ಯೂಟ್​ ಅಭಿವೃದ್ಧಿಪಡಿಸಿದ್ದು, ಜಾಗತಿವಾಗಿ ಆದರ ಮಾರ್ಕೆಟಿಂಗ್ ಸಹ ಮಾಡುತ್ತಿದೆ. ಸ್ಪುಟ್ನಿಕ್ V ಲಸಿಕೆಯು ಎರಡು-ಡೋಸ್​ಗಳ ಶಾಟ್ ಆಗಿದ್ದು ಇದು ಸೋಂಕನ್ನು ತಡೆಯುವಲ್ಲಿ ಶೇ. 91.6 ರಷ್ಟು ಪರಿಣಾಮಕಾರಿಯಾಗಿದೆ.

 ಮೂರನೇ ಕೊರೊನಾ ಲಸಿಕೆ

ಮೂರನೇ ಕೊರೊನಾ ಲಸಿಕೆ

ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್​ ನಂತರ ಭಾರತದಲ್ಲಿ ತುರ್ತು ಸ್ಥಿತಿಯಲ್ಲಿ ಬಳಸಲು ಅನುಮತಿ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ V ಆಗಿದೆ. ನಮ್ಮೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಎರಡು ಡೋಸ್​ಗಳ ಕಾಂಪೊನೆಂಟ್​ಗಳು ಸರಿಯಾದ ಪ್ರಮಾಣದಲ್ಲಿ ಮತ್ತು ಸೂಕ್ತವಾದ ಸಮಯದಲ್ಲಿ ದೊರಕುವುದನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಿರುವ ಸರಬರಾಜು ಏರ್ಪಾಟುಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಮ್ಮೆ ಪ್ಲಾಟ್ ಹಂತ ಕೊನೆಗೊಂಡರೆ ಲಸಿಕೆಯ ಮಾರುಕಟ್ಟೆ ಬಿಡುಗಡೆ ಕುರಿತು ಡಾ ರೆಡ್ಡೀಸ್ ಘೋಷಣೆ ಮಾಡುತ್ತದೆ ಎಂದು ಹೇಳಿಕೆ ನೀಡಿದೆ.

English summary
The local distribution partner Dr Reddy's announced in a statement on Wednesday that the project launch of Russian Covid vaccination Sputnik V has now been expanded to nine more cities, enhancing its vaccine drive. It was initially exclusively available in Hyderabad. Also, Bengaluru, Mumbai, Kolkata, Delhi, Chennai, Visakhapatnam, Baddi, Kolhapur, and Miryalagud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X