ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಗುಂಡಿ ಮೇಲೆ ಸಾಂಗ್ #SpotThePot

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 06:ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಲು ಅಣಕು ಗೀತೆಯೊಂದನ್ನು ತಂಡವೊಂದು ರಚಿಸಿದೆ. ಈ ವಿಡಿಯೋ ಸಾಂಗ್ ಫೇಸ್ ಬುಕ್ ನಲ್ಲಿ ಜನಪ್ರಿಯತೆ ಗಳಿಸುತ್ತಿದೆ.

ಬೆಂಗಳೂರಿನ ರಸ್ತೆ ಗುಂಡಿಗಳು, ಬಿಬಿಎಂಪಿ ಕೊಟ್ಟ ಲೆಕ್ಕಬೆಂಗಳೂರಿನ ರಸ್ತೆ ಗುಂಡಿಗಳು, ಬಿಬಿಎಂಪಿ ಕೊಟ್ಟ ಲೆಕ್ಕ

#spotthepot Rap ವಿಡಿಯೋ ಹಾಡು ನೋಡಿ, ಕೇಳಿ ಎಂಜಾಯ್ ಮಾಡಿ ನೀವು ಸ್ಟೆಪ್ ಹಾಕಿ ಎನ್ನುತ್ತಿದ್ದಾರೆ ಪಾಟ್ ಹೋಲ್ (Pothole Patrike) ಪತ್ರಿಕೆಯ ಪುಟದವರು.

#SpotThePot Rap song on Bengaluru road condition

ನವೆಂಬರ್ 4ರಂದು ಬಿಬಿಎಂಪಿ ನಗರದ ರಸ್ತೆಗುಂಡಿಗಳ ಅಂಕಿಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಒಟ್ಟು 696 ಗುಂಡಿಗಳಿವೆ. ಹೊಸದಾಗಿ 300 ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 152 ಗುಂಡಿಗಳನ್ನು ಮುಚ್ಚಲಾಗಿದ್ದು, 884 ಗುಂಡಿಗಳನ್ನು ಮುಚ್ಚುವ ಕಾರ್ಯ ಬಾಕಿ ಇದೆ ಎಂದು ಪಾಲಿಕೆ ಹೇಳಿದೆ.

ನಗರದಲ್ಲಿ ಇನ್ನೂ 2,648 ಗುಂಡಿ ಮುಚ್ಚಬೇಕಿದೆ!ನಗರದಲ್ಲಿ ಇನ್ನೂ 2,648 ಗುಂಡಿ ಮುಚ್ಚಬೇಕಿದೆ!

ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳಲ್ಲಿರುವ ಗುಂಡಿಗಳನ್ನು ನವೆಂಬರ್ 5ರೊಳಗೆ ಮುಚ್ಚುತ್ತೇವೆ ಎಂದು ಪಾಲಿಕೆ ಹೇಳಿತ್ತು. ನಿಮ್ಮ ಬಡಾವಣೆಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆಯೇ? ಎಂಬುದಕ್ಕೆ ಜನರೇ ಉತ್ತರ ಹೇಳಬೇಕು.

ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಕಣ್ಮುಚ್ಚಿ ಕುಳಿತ್ತಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಏನು ಮಾಡುತ್ತಿದೆ ಗೊತ್ತಿಲ್ಲ. ಅಣಕು ಗೀತೆ ಮೂಲಕ ಒಂದಷ್ಟು ಜಾಗೃತಿ ಮೂಡಿಸುವುದು ಈ ತಂಡದ ಉದ್ದೇಶ. ವಿಡಿಯೋ ನೋಡಿ ನೀವು ಅನಂದಿಸಿ...

English summary
A rap video mocking the potholes in Bengaluru has been put out by a community page on Facebook. Pothole Patrike FB page says #Enoughisenough and takes on #spotthepot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X