• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಕಲಾಂಗ ಮಕ್ಕಳಲ್ಲಿ ವಿಶ್ವಾಸ ಮೂಡಿಸಿದ ಕ್ರೀಡಾಕೂಟ

By Kiran B Hegde
|

ರಾಮನಗರ, ಡಿ. 3: ಅಂತಾರಾಷ್ಟ್ರೀಯ ಅಂಗವಿಕಲರ ದಿನಾಚರಣೆ ನಿಮಿತ್ತ ರಾಮನಗರದಲ್ಲಿ ಅಂಗವಿಕಲ ಮಕ್ಕಳಿಗೆ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು. ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ರಾಮನಗರದ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ಸುಮಾರು 300 ಅಂಗವಿಕಲ ಮಕ್ಕಳು ಭಾಗವಹಿಸಿದ್ದರು. ದಿನವಿಡೀ ತಮ್ಮ ಅಂಗವೈಕಲ್ಯ ಮರೆತು ಆಡಿದರು. ಶಿಕ್ಷಕರು, ಪಾಲಕರು ಹಾಗೂ ಅತಿಥಿಗಳು ಸೇರಿದಂತೆ ಇತರ ಮಕ್ಕಳು ಸುತ್ತಲೂ ನಿಂತು, ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಹುರಿದುಂಬಿಸಿದ್ದು ಹೃದಯಸ್ಪರ್ಶಿಯಾಗಿತ್ತು.

ಕ್ರೀಡಾಕೂಟದ ಅಂತ್ಯದಲ್ಲಿ ಬಹುಮಾನ ಪಡೆದ ವಿಜೇತ ಮಕ್ಕಳಲ್ಲಿ ಸಾರ್ಥಕ ಭಾವ ಮೂಡಿತ್ತು. ಈ ಮೂಲಕ ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶ ಸಫಲವಾಗಿತ್ತು.

ಸ್ಪರ್ಧೆಯ ಬಹುಮಾನವನ್ನು ಬಹುರಾಷ್ಟ್ರೀಯ ಕಂಪನಿಯಾದ ಟೊಯೊಟಾ ಬೊಶೊಕು ಆಟೊಮೋಟಿವ್ ಇಂಡಿಯಾ ಪ್ರೈ.ಲಿ. (ಟಿಬಿಎಐಪಿಎಲ್) ಕಂಪನಿಯು ಪ್ರಾಯೋಜಿಸಿತ್ತು. ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕಂಪನಿ ವತಿಯಿಂದ ಗಿಫ್ಟ್ ನೀಡಲಾಯಿತು. ಕಂಪನಿಯ ಉಪ ವ್ಯವಸ್ಥಾಪಕ ವಿವೇಕ ಕೇಲ್ಕಾರ್, ಡಿಡಿಪಿಐ ಸುಮಂಗಲಾ ದೇವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಕ್ಕಳ ಆಟದ ಪರಿಯನ್ನು ನೋಡಿ.

ತಪ್ಪದ ಗುರಿ

ತಪ್ಪದ ಗುರಿ

ಬಾಲಕ ಕಣ್ಮುಚ್ಚಿ ಹೊಡೆದರೂ ಗುರಿ ತಪ್ಪಲಿಲ್ಲ.

ನನ್ನ ಗುರಿ

ನನ್ನ ಗುರಿ

ಕಣ್ಣು ಕಟ್ಟಿಕೊಂಡು ಮಡಕೆ ಒಡೆಯಲು ಸನ್ನದ್ಧನಾದ ಬಾಲಕ.

ಎಸೆದಿದ್ದು ಎಲ್ಲೋಯ್ತು

ಎಸೆದಿದ್ದು ಎಲ್ಲೋಯ್ತು

ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕನೋರ್ವ ತೋರಿದ ಪ್ರತಿಕ್ರಿಯೆ.

ಹೋಗ್ತಿದೆ ನೋಡು

ಹೋಗ್ತಿದೆ ನೋಡು

ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕನೋರ್ವ ತೋರಿದ ಭಾವೋದ್ವೇಗ.

ಗುರಿ ಮುಟ್ತು

ಗುರಿ ಮುಟ್ತು

ಬಾಲಕನೋರ್ವ ಪ್ರದರ್ಶನ ತೋರಿದ ನಂತರ ಪ್ರಿತಿಕ್ರಿಯಿಸಿದ ರೀತಿ.

ನನ್ನ ಗುರಿ

ನನ್ನ ಗುರಿ

ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬಾಲಕ ತನ್ನ ಗುರಿ ನೋಡುತ್ತಿರುವುದು.

ನಾನೂ ಓಡ್ತೇನೆ

ನಾನೂ ಓಡ್ತೇನೆ

ಓಡುತ್ತಿರುವ ಮಕ್ಕಳನ್ನು ಹುರಿದುಂಬಿಸುತ್ತಿರುವ ವೀಕ್ಷಕರು.

ನಾವೆಲ್ಲ ಒಂದು

ನಾವೆಲ್ಲ ಒಂದು

ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಕ್ಕಳು ಕೊನೆಯಲ್ಲಿ ಒಂದಾಗಿ ಕುಳಿತು ಛಾಯಾಚಿತ್ರಕ್ಕೆ ಕೊಟ್ಟ ಫೋಜು.

English summary
Sports competitions were organised by BEO to physically disabled students of Ramanagar taluq on Wednesday in the day of International Day of Persons with Disabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X