• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫ್ರೀಡಂ ಪಾರ್ಕ್‍ನಲ್ಲಿ ಆಗಸ್ಟ್ 15ರಿಂದ ‘ಬೆಂಗಳೂರು ಮಹಾ ಉತ್ಸವ’

|

ಬೆಂಗಳೂರು, ಆಗಸ್ಟ್ 13: ಪ್ರಾಚೀನ ಭಾರತೀಯಜೀವನ ಸಂಸ್ಕೃತಿಯ ಮೇಲಣ ಬೆಳಕು ಚೆಲ್ಲುವ ವಿಶಿಷ್ಟ ಪ್ರಯೋಗವೊಂದು ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ನಗರದ ಹೃದಯಭಾಗದಲ್ಲಿರುವ ಸ್ವಾತಂತ್ರ್ಯಉದ್ಯಾನವನ (ಫ್ರೀಡಂ ಪಾರ್ಕ್) ಆಗಸ್ಟ್ 15 ರಿಂದ ಸೆಪ್ಟೆಂಬರ್ 3ರವರೆಗೆ ಒಂದು ವಿಶಿಷ್ಟ ಮಹಾ ಉತ್ಸವಕ್ಕೆ ಸಾಕ್ಷಿಯಾಗುತ್ತಿದೆ.

ಆಧ್ಯಾತ್ಮ, ಆಯುರ್ವೇದ, ಸಂಸ್ಕೃತ, ಸಂಸ್ಕೃತಿ, ಜತೆಗೆ ಒಂದಿಷ್ಟು ಭಾರತೀಯ ಸಾಂಪ್ರದಾಯಿಕ ಮನರಂಜನೆಯ ಸಂಭ್ರಮಕ್ಕೆ ಉದ್ಯಾನವನ ಸಜ್ಜಾಗಿದೆ. ತಮ್ಮ ಗುಣಮಟ್ಟದ ಆಧ್ಯಾತ್ಮ, ಆಯುರ್ವೇದ, ಅಡುಗೆ, ಆರೋಗ್ಯ, ಆಯುರಾರೋಗ್ಯ ಕಾರ್ಯಕ್ರಮಗಳಿಂದ ಜನಮನಗೆದ್ದಿರುವ ಶ್ರೀಶಂಕರ ಹಾಗೂ ಆಯುಷ್ ಟಿ.ವಿ.ವಾಹಿನಿಗಳು ಫ್ರೀಡಂ ಪಾರ್ಕ್‍ನಲ್ಲಿ 'ಬೆಂಗಳೂರು ಮಹಾಉತ್ಸವ' ಹಮ್ಮಿಕೊಂಡಿವೆ.

ಹೋಮ ಹವನಾದಿಗಳಿಂದ ಹಿಡಿದು, ಆಧ್ಯಾತ್ಮ, ಆರೋಗ್ಯ, ವೈವಾಹಿಕ ಕುರಿತ ಚರ್ಚೆಗಳವರೆಗೆ ಇಲ್ಲಿ ಎಲ್ಲವೂ ಒಂದೇ ಸೂರಿನಡಿ ನಡೆಯಲಿವೆ. 21 ಅಡಿ ಎತ್ತರದ ಮಹಾವಿಷ್ಣು, ಪವಿತ್ರ ರುದ್ರಾಕ್ಷಿಯಿಂದ ನಿರ್ಮಿಸಲಾದ 21 ಅಡಿ ಎತ್ತರದ ಶಿವಲಿಂಗ, ದ್ವಾದಶ ಜ್ಯೋರ್ತಿಲಿಂಗ ದರ್ಶನದಿಂದಿಡಿದು, ಶ್ರೀ ಶಿರ್ಡಿ ಸಾಯಿಬಾಬಾ ಪಾದುಕೆವರೆಗೆ, ಗುಂಪು ಚರ್ಚೆ, ಯೋಗ, ಆಯುರ್ವೇದ, ವೈವಾಹಿಕ ಹೀಗೆ ಬದುಕಿನ ಎಲ್ಲಾ ಅವಶ್ಯಕತೆಗಳ ಕುರಿತ ಮಾರ್ಗದರ್ಶನ, ಪರಿಹಾರ ಇಲ್ಲಿ ದೊರೆಯಲಿವೆ. ಸಾಂಪ್ರದಾಯಿಕ ಫ್ಯಾಷನ್ ಶೋ, ಕಿಟ್ಟಿಗ್ರೂಪ್ ಮಹಿಳೆಯರಿಗಾಗಿ ವಿಶೇಷ ಗೇಮ್ ಶೋ, ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ವೈವಿಧ್ಯಮಯ ಆಹಾರಮೇಳ ಈ ಉತ್ಸವದ ವಿಶೇಷ.

ಶ್ರೀ ಶಂಕರ ಹಾಗೂ ಆಯುಷ್ ವಾಹಿನಿ ಆಯೋಜನೆ

ಶ್ರೀ ಶಂಕರ ಹಾಗೂ ಆಯುಷ್ ವಾಹಿನಿ ಆಯೋಜನೆ

ಬೆಂಗಳೂರು ಈಗ ಮೆಟ್ರೋಪಾಲಿಟನ್ ನಗರವಾಗಿ ತನ್ನ ಚಹರೆ ಬದಲಿಸಿಕೊಂಡಿದೆ. ಇಲ್ಲಿ ದೇಶದ ಎಲ್ಲಾ ಭಾಗದ ಜನರಿದ್ದಾರೆ. ವೈವಿಧ್ಯಮಯ ಸಂಸ್ಕೃತಿ, ಆಚರಣೆಗಳು ನಗರ ಬದುಕಿನ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು, ಶ್ರೀ ಶಂಕರ ಹಾಗೂ ಆಯುಷ್ ವಾಹಿನಿಗಳು ಈ ಕಾರ್ಯಕ್ರಮ ಹಮ್ಮಿಕೊಂಡಿವೆ.

ವೈಶಿಷ್ಟ್ಯಪೂರ್ಣ ಗಣೇಶದ ವಿಗ್ರಹ, ಪುಣ್ಯಪ್ರದದ್ವಾದಶಜ್ಯೋರ್ತಿಲಿಂಗ, ಶಿರ್ಡಿ ಶ್ರೀ ಸಾಯಿ ಬಾಬಾ ಪಾದುಕೆ, ಅಬೋಲ ನರಸಿಂಹ ದರ್ಶನದಿಂದಿಡಿದು, ಭಾರತೀಯ ಸಾಂಪ್ರದಾಯಿಕ ಆಯುರ್ವೇದ, ಅಡುಗೆಅರಮನೆ, ಗುಂಪು ಚರ್ಚೆಗಳು, ಸಾಂಪ್ರದಾಯಿಕ ಫ್ಯಾಷನ್ ಶೋ ಹೀಗೆ ನಾನಾ ಕಾರ್ಯಕ್ರಮಗಳನ್ನು ಪ್ರತಿ ನಿತ್ಯ ಹಮ್ಮಿಕೊಳ್ಳಲಾಗಿದೆ

ಹೋಮ ಹವನ, ಆಧ್ಯಾತ್ಮ ಲೋಕದ ದಿಗ್ಗಜ ಉಪಸ್ಥಿತಿ

ಹೋಮ ಹವನ, ಆಧ್ಯಾತ್ಮ ಲೋಕದ ದಿಗ್ಗಜ ಉಪಸ್ಥಿತಿ

ವಿವಿಧ ಹೋಮ-ಹವನಗಳು :ಇದೇ ಮೊದಲ ಬಾರಿಗೆ ನಗರದಲ್ಲಿ ಒಂದೇ ಸ್ಥಳದಲ್ಲಿ 17 ಹೋಮ-ಹವನಗಳು 21 ದಿನ ನಿರಂತರವಾಗಿ ನಡೆಯಲಿವೆ. ಇವೆಲ್ಲದರ ಜತೆಗೆ ಆಧ್ಯಾತ್ಮಿಕ ಸಲಹೆ, ಪೂಜೆ, ಹೀಗೆ ನಾನಾ ಕಾರ್ಯಕ್ರಮಗಳನ್ನು ಈ ಬೆಂಗಳೂರು ಮಹಾ ಉತ್ಸವದ ಭಾಗವಾಗಿ ಹಮ್ಮಿಕೊಳ್ಳಲಾಗಿದೆ.

ಆಧ್ಯಾತ್ಮ ಲೋಕದ ದಿಗ್ಗಜರು : ಈ ಉತ್ಸವದಇನ್ನೊಂದು ವೈಶಿಷ್ಟ್ಯತೆ ಎಂದರೆ ಮನಸ್ಸಿಗೆ ಮುದ ನೀಡುವ ಆರೋಗ್ಯಪೂರ್ಣ ಸಾಂಸ್ಕೃತಿಕ ಉತ್ಸವ. ಈ ಉತ್ಸವದಲ್ಲಿಆಧ್ಯಾತ್ಮ ಹಾಗೂ ನಾಡಿನಗಣ್ಯರಾದ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಗುರುಸೇವಾಧುರೀಣ ಡಾ. ವಿ ಆರ್ ಗೌರಿ ಶಂಕರ್, ಆದಿಚುಂಚನಗಿರಿ ಮಠದಡಾ. ನಿರ್ಮಲಾನಂದ ಸ್ವಾಮೀಜಿ, ವೆಲ್ಲೂರಿನ ಗೋಲ್ಡನ್‍ಟೆಂಪಲ್‍ನ ಶ್ರೀಪುರಂ ಸ್ವಾಮೀಜಿ, ಮನಸ್ಸೇ ರಿಲ್ಯಾಕ್ಸ್ ಖ್ಯಾತಿಯ ಶ್ರೀ ಸ್ವಾಮಿ ಸುಖಬೋಧಾನಂದ, ಮೌಂಟ್ ಅಬುವಿನ ಬ್ರಹ್ಮಕುಮಾರೀಸ್ ಖ್ಯಾತಿಯ ಬಿ.ಕೆ.ಶಿವಾನಿ,

ಗಣ್ಯಾತಿಗಣ್ಯರಿಂದ ಮಾರ್ಗದರ್ಶನ

ಗಣ್ಯಾತಿಗಣ್ಯರಿಂದ ಮಾರ್ಗದರ್ಶನ

ಆನಂದಸಿದ್ಧಿಪೀಠದ ಶ್ರೀ ಆನಂದಗುರೂಜಿ, ಖ್ಯಾತ ವೈದ್ಯರಾದಡಾ.ಬಿಎಂ ಹೆಗ್ಡೆ, ಡಾ. ಗಿರಿಧರಕಜೆ, ಶತಾವಧಾನಿ ಡಾ. ಆರ್.ಗಣೇಶ್, ಶಿಕ್ಷಣ ತಜ್ಞಡಾ.ಗುರುರಾಜಕರ್ಜಗಿ, ಖ್ಯಾತ ಚಿತ್ರನಟ ಉಪೇಂದ್ರ, ಖ್ಯಾತಗಾಯಕ ವಿಜಯ ಪ್ರಕಾಶ್, ಹಾಸ್ಯಕಲಾವಿದ, ಪ್ರಾಣೇಶ್‍ಗಂಗಾವತಿ, ಅರಳುಮಲ್ಲಿಗೆ ಪಾರ್ಥಸಾರಥಿ ಇತ್ಯಾದಿ ಸಂಸ್ಕೃತಿ, ಸಾಂಸ್ಕೃತಿಕ ಚಿಂತಕರು, ಆಧ್ಯಾತ್ಮ ಗುರುಗಳು, ವೈದ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಅಪ್ಪಟ ಭಾರತ ಸಂಸ್ಕೃತಿ ಉತ್ಸವ

ಅಪ್ಪಟ ಭಾರತ ಸಂಸ್ಕೃತಿ ಉತ್ಸವ

ವಿಶಿಷ್ಟ ಪ್ರಯತ್ನ : ಶ್ರೀ ಶಂಕರ ಹಾಗೂ ಆಯುಷ್ ವಾಹಿನಿಗಳ ವ್ಯವಸ್ಥಾಪಕ ನಿದೇಶಕ ಹರಿಕೃಷ್ಣ ಅವರ ಪ್ರಕಾರ ಬೆಂಗಳೂರು ಮಹಾ ಉತ್ಸವ, ಒಂದು ವೈಶಿಷ್ಟ್ಯ ಪೂರ್ಣ ಪ್ರಯತ್ನ. "ಪಾಶ್ಚಿಮಾತ್ಯ ಮಾದರಿಯ ಉತ್ಸವಗಳನ್ನು ನಾವು ಎಲ್ಲೆಡೆ ನೋಡುತ್ತೇವೆ. ಆದರೆಇದು ಅಚ್ಚ ಭಾರತೀಯ ಆಧ್ಯಾತ್ಮಿಕ-ಆರೋಗ್ಯಶಾಲಿ-ಆಯುರ್ವೇದ ಉತ್ಸವ. ಇಲ್ಲಿ ಭಾರತೀಯ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಯಲಿದೆ. ಆ ಮೂಲಕ ಬೆಂಗಳೂರಿನ ಕಾಸ್ಮೋಪಾಲಿಟನ್‍ಜೀವನದ ಸವಾಲುಗಳಿಗೆ ಪರಿಹಾರಕಂಡು ಕೊಳ್ಳುವ ಪ್ರಯತ್ನ ನಡೆಸಲಾಗುವುದು," ಎಂದವರು ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A unique 21 days Spiritual-cultural event organised by Sri Shankara and Ayush TV channel. The event will begin on Independence Day(August 15) at Freedom Park Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more