ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ ಪಿಐಗೆ ಆಗ್ನೇಯ ಏಷ್ಯಾದ ಪ್ರತಿಷ್ಠಿತ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಅ.21: ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಎಸ್ ಪಿಐ ಸಂಸ್ಥೆಗೆ ಪ್ರತಿಷ್ಠಿತ ಅಸ್ಪಾಕ್ ಆಗ್ನೇಯ ಏಷ್ಯಾದ ಬಿಜಿನೆಸ್‌ ಪ್ರಶಸ್ತಿ ದೊರೆತಿದೆ. ಆಗ್ನೇಯ ಏಷ್ಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ ಎಂದು ಎಸ್‌ಪಿಐ ಗುರುತಿಸಿಕೊಂಡಿದೆ.

ಎಸ್ ಪಿಐಗೆ ಇದು ಮೂರನೇ ಪ್ರಶಸ್ತಿಯಾಗಿದ್ದು ಈ ಹಿಂದೆ 2008 ಮತ್ತು 2009ರಲ್ಲಿ ಸಂಸ್ಥೆ ಪ್ರಶಸ್ತಿ ಗಳಿಸಿತ್ತು. ಭಾರತ ಸರ್ಕಾರದಿಂದಲೂ ಸಂಸ್ಥೆ ಗುರುತಿಸಲ್ಪಟ್ಟಿದ್ದು ಉತ್ತಮ ಪ್ರಗತಿ ಸಾಧಿಸಿರುವುದು ದಾಖಲಾಗಿದೆ.[ಮೈಸೂರುː ದಣಿದವರಿಗೆ ನೀರು ಕೊಟ್ಟ ಧನ್ಯತೆ]

spi

ಯುಪಿಎಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಪಿಐ ಸಂಸ್ಥೆಯ ಸಿಇಒ ಮತ್ತು ಸಂಸ್ಥಾಪಕ ಸಿದ್ ಮುಖರ್ಜಿ ಪ್ರಶಸ್ತಿ ಸ್ವೀಕರಿಸಿದರು. ನಂತರ ಮಾತನಾಡಿದ ಅವರು ಈ ಬಾರಿ ನಮ್ಮ ಕಂಪನಿಗೆ 20 ವರ್ಷ ತುಂಬಲಿದ್ದು ಈ ಪ್ರಶಸ್ತಿ ಮತ್ತಷ್ಟು ಶಕ್ತಿ ತುಂಬಿದೆ. ಗ್ರಾಹಕರಿಗೆ ನೀವು ನೀಡುತ್ತಿರುವ ಸೇವೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ದಸರಾದಲ್ಲಿ ನೀರು ನೀಡಿದ್ದ ಎಸ್ ಪಿಐ
ದಸರಾ ಜಂಬೂಸವಾರಿ ಉದ್ದಕ್ಕೂ ಎಸ್ ಪಿಐ ಸಂಸ್ಥೆಯ ಉದ್ಯೋಗಿಗಳು ನಿರಂತರವಾಗಿ ಪೊಲೀಸರು ಮತ್ತು ಕಲಾವಿದರಿಗೆ ಕುಡಿಯುವ ನೀರು ಒದಗಿಸಿದ್ದರು. ಕೆಆರ್ ವೃತ್ತ ಮತ್ತು ಬನ್ನಿ ಮಂಟಪದ ನಡುವೆ ಹತ್ತು ಕಡೆ ನೀರಿನ ಚಾವಡಿ ನಿರ್ಮಿಸಲಾಗಿತ್ತು. ಬನ್ನಿ ಮಂಟಪದ ಒಳಗಡೆಯೂ ಕರ್ತವ್ಯ ನಿರತ ಪೊಲೀಸರಿಗೆ ನಿರಂತರವಾಗಿ ನೀರು ಒದಗಿಸಲಾಗಿತ್ತು.

English summary
SPI has been selected as the recipient of the prestigious USPAACC Southeast Asian American Business Awards for its exceptional growth as one of the fastest growing businesses in Southeast Asia. SPI is the third time recipient of the coveted honor, the earlier being in 2008 and 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X