ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಮಾರ್ಚ್ 30 : ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ಹೌರಾ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೆ ಈ ರೈಲನ್ನು ಓಡಿಸಲಾಗುತ್ತಿದೆ.

ರೈಲು ನಂಬರ್ 00603/00604 ರೈಲು ವಾರದಲ್ಲಿ ಎರಡು ಬಾರಿ ಯಶವಂತಪುರ-ಹೌರಾ ನಡುವೆ ಸಂಚಾರ ನಡೆಸಲಿದೆ. ಏಪ್ರಿಲ್ 1ರಿಂದ ಈ ವಿಶೇಷ ರೈಲಿನ ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಪೀಡಿತರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೂ ಮಾರ್ಗಸೂಚಿ! ಕೊರೊನಾ ಪೀಡಿತರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೂ ಮಾರ್ಗಸೂಚಿ!

ಯಶವಂತಪುರದಿಂದ ಬುಧವಾರ ಮತ್ತು ಶನಿವಾರ 11 ಗಂಟೆಗೆ ಹೊರಡುವ ರೈಲು ಮರುದಿನ 9 ಗಂಟೆಗೆ ಹೌರಾಗೆ ತಲುಪಲಿದೆ. 11/4/2020ರ ತನಕ ರೈಲು ಸಂಚಾರ ನಡೆಸಲಿದ್ದು, ಒಟ್ಟು 4 ಟ್ರಿಪ್ ಸಂಚಾರ ಮಾಡಲಿದೆ.

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ? ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

Special Parcel Trail By South Western Railway

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಚೆನ್ನೈ ಮೂಲಕ ಹೌರಾ ತಲುಪಲಿದೆ. ರೈಲಿನಲ್ಲಿ 5 ಪಾರ್ಸೆಲ್ ವ್ಯಾನ್, 2 ಕೂರುವ ಮತ್ತು ಲಗೇಜ್ ವ್ಯಾನ್ ಇರಲಿದೆ. ವಿಶೇಷ ಸಂದರ್ಭಕ್ಕಾಗಿ ನಿಗದಿತ ವೇಳಾಪಟ್ಟಿ ಜೊತೆಗೆ ಈ ರೈಲು ಸಂಚಾರ ನಡೆಸುತ್ತಿದೆ.

ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ನೈಋತ್ಯ ರೈಲ್ವೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲು ಪಾಯಿಂಟ್ ಟು ಪಾಯಿಂಟ್ ಮಾದರಿಯಲ್ಲಿ ವಿಶೇಷ ರೈಲನ್ನು ಓಡಿಸಲಿದೆ. ಬೆಂಗಳೂರಿನಿಂದ ಬೇರೆ ಪಾಯಿಂಟ್‌ಗಳಿಗೆ ಈ ರೈಲು ವಸ್ತುಗಳನ್ನು ಸಾಗಣೆ ಮಾಡಲಿದೆ.

ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ದೇಶಾದ್ಯಂತ ರದ್ದುಗೊಳಿಸಿದೆ. ಆದರೆ, ಗೂಡ್ಸ್ ರೈಲುಗಳ ಮೂಲಕ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ.

English summary
South Western Railway will run Yesvantpur – Howrah - Yesvantpur bi weekly parcel specials with essential commodities in view of COVID-19.The first service of the train from Yesvantpur starts on 1st April 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X