ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಹೆಚ್ಚುವರಿ ಶಿರಸ್ತೇದಾರ್‍

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರೆಸಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ ವಿಶೇಷ ಶಿರಸ್ತೇದಾರ್ 45 ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಕಂದಾಯ ಭವನದಲ್ಲಿ ಕರ್ತವ್ಯ ನಿರತನಾಗಿದ್ದ ಪಿ.ಎಂ.ಶ್ರೀಕಾಂತ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ವಿಶೇಷ ಶಿರಸ್ತೇದಾರ್‍‌ ಆಗಿದ್ದಾನೆ. ದೂರುದಾರ ಯಶವಂತಪುರದ ಕೊಡಿಗೆಹಳ್ಳಿಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನ ಮಾಡಿಕೊಂಡಿದ್ದ ಜಮೀನಿಗೆ ಪರಿಹಾರಕ್ಕಾಗಿ ಸಿಂಧುತ್ವ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು.

ಈ ಪ್ರಮಾಣಪತ್ರ ನೀಡಲು 14 ಲಕ್ಷಕ್ಕೆ ಶ್ರೀಕಾಂತ್ ಬೇಡಿಕೆಯಿಟ್ಟಿದ್ದರು. ಮಾತುಕತೆ ಅಂತಿಮವಾದ ಬಳಿಕ ಪ್ರಾಥಮಿಕ ಹಂತದ ಹಣವನ್ನಾಗಿ 45 ಸಾವಿರ‌ ರೂಪಾಯಿ ನೀಡುವುದಾಗಿ ದೂರುದಾರರು ತಿಳಿಸಿದ್ದರು.

Special officer Srikanth fell into the trap of Lokayukta police while accepting bribe

ಲಂಚದ ಬೇಡಿಕೆ ಬಗ್ಗೆ ಲೋಕಾಯುಕ್ತಕ್ಕೆ ದೂರು
ತಮ್ಮ ಕೆಲಸವನ್ನು ಮಾಡಿಕೊಡಲು ಲಂಚವನ್ನು ಕೇಳುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರುದಾರ ದೂರನ್ನು ನೀಡಿದ್ದರು.ಆ ಬಳಿಕ ಈ ದೂರುದಾರರಿಂದ ಶ್ರೀಕಾಂತ್ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಶ್ರೀಕಾಂತ್‌ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು ಜಿಲ್ಲಾಧಿಕಾರಿಗಿದ್ದ ಮಂಜುನಾಥ್‌ ಲಾಕ್ ಆಗಿದ್ದರು
ಎಸಿಬಿ ಸಹ ಕಂದಾಯ ಭವನದ ಲಂಚಗುಳಿತನಕ್ಕೆ ಟ್ರ್ಯಾಪ್ ಮಾಡಿದ್ದರು. ಜಿಲ್ಲಾಧಿಕಾರಿಯ ಬಳಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಲಂಚವನ್ನು ಪಡೆದು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಇದೇ ಕೇಸ್‌ ನಲ್ಲಿ ಜಿಲ್ಲಾಧಿಕಾರಿ ಜೈಲು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು. ಎಸಿಬಿಗೆ ಹೈಕೋರ್ಟ್ ಮೊಳೆ ಹೊಡೆದ ಬಳಿಕ ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಮಾಡಿದ್ದಾರೆ.

Special officer Srikanth fell into the trap of Lokayukta police while accepting bribe

ಸದ್ಯ ಲೋಕಾಯುಕ್ತ ಅಧಿಕಾರಿಗಳು ವಿಶೇಷ ಶಿರಸ್ತೇದಾರ್‍ ಪಿ.ಎಂ.ಶ್ರೀಕಾಂತ್ ರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಲಂಚಗಳಿತನದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಪ್ರಕರಣದ ಕೇಂದ್ರ ಬಿಂದು ಶ್ರೀಕಾಂತ್‌ ಆಗಿದ್ದರು ಫೈಲ್ ಮುಂದುವರೆಯಲು ಹಲವು ಟೇಬಲ್‌ಗಳಿಗೆ ಲಂಚವನ್ನು ಇವರೇ ನೀಡುತ್ತಿದ್ದರೇ ಪಾಲುದಾರರು ಯಾರು ಅನ್ನೋದು ತಿಳಿಯಬೇಕಿದೆ.

English summary
The Lokayukta police, who continued their fight against corrupt officials in Bengaluru, were caught red-handed while receiving a bribe of Rs 45,000 from the complainant. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X