ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ಮೆಮು ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಮಾರ್ಚ್ ವೇಳೆಗೆ ಸಂಚಾರ ನಡೆಸಬಹುದಾಗಿದೆ. ನಗರದ ವಿವಿಧ ಪ್ರದೇಶಗಳಿಂದ ಮೆಮು ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ.

ವಿಮಾನ ನಿಲ್ದಾಣ ಸಮೀಪದ ರೈಲು ನಿಲ್ದಾಣ ಮತ್ತು ನಗರವನ್ನು ಸಂಪರ್ಕಿಸುವ ರೈಲು ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಮಾರ್ಚ್‌ ವೇಳೆಗೆ ಅದು ಪೂರ್ಣಗೊಳ್ಳಲಿದೆ. ಆಗ ವಿಶೇಷ ರೈಲುಗಳು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತವೆ.

ಬೆಂಗಳೂರಿಗೆ ರೈಲ್ವೆಯ ಕೊಡುಗೆ; ಕೇಂದ್ರ ಸಚಿವರ ಟ್ವೀಟ್ಬೆಂಗಳೂರಿಗೆ ರೈಲ್ವೆಯ ಕೊಡುಗೆ; ಕೇಂದ್ರ ಸಚಿವರ ಟ್ವೀಟ್

ಮುಂದಿನ ಕೆಲವೇ ವಾರಗಳಲ್ಲಿ ಸಾಮಾನ್ಯ ರೈಲುಗಳು ಸಂಚಾರ ನಡೆಸಲು ಮಾರ್ಗ ಸಿದ್ಧವಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಪ್ರಯಾಣಣಿಕರಿಗೆ ಮತ್ತು ನಿಲ್ದಾಣದ ಸುಮಾರು 28 ಸಾವಿರ ಉದ್ಯೋಗಿಗಳಿಗೆ ಸಹಾಯಕವಾಗಲಿದೆ.

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ.ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ.

ಮೆಮು ರೈಲುಗಳ ಸಂಚಾರ ಆರಂಭವಾದರೆ ನಗರ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ಮೆಮು ರೈಲುಗಳು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲಿವೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಮೆಮು ರೈಲುಗಳನ್ನು ಓಡಿಸಲಿದೆ.

 ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ

ಬಿಐಎಲ್‌ನಿಂದ ಅಭಿವೃದ್ಧಿ

ಬಿಐಎಲ್‌ನಿಂದ ಅಭಿವೃದ್ಧಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರೈಲ್ವೆ ನಿಲ್ದಾಣವನ್ನು ಬಿಐಎಎಲ್ ನಿರ್ಮಾಣ ಮಾಡಿದೆ. ಕೊನೆಯ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಕೆಲವೇ ವಾರಗಳಲ್ಲಿ ಸಾಮಾನ್ಯ ರೈಲುಗಳ ಸಂಚಾರ ಆರಂಭವಾಗಲಿದೆ. ಆದರೆ, ಮೆಮು ರೈಲುಗಳ ಸಂಚಾರಕ್ಕೆ ಮಾರ್ಗದ ವಿದ್ಯುದೀಕರಣ ಪೂರ್ಣವಾಗಬೇಕು.

ಮೆಮು ರೈಲುಗಳ ಸಂಚಾರ

ಮೆಮು ರೈಲುಗಳ ಸಂಚಾರ

ವಿಮಾನ ನಿಲ್ದಾಣಕ್ಕೆ ಕೆಂಗೇರಿ, ಹೊಸೂರು, ವೈಟ್‌ಫೀಲ್ಡ್‌, ಬೈಯಪ್ಪನಹಳ್ಳಿ, ತುಮಕೂರು ಮುಂತಾದ ಕಡೆಗಳಿಂದ ವಿಶೇಷ ಮೆಮು ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ. ಇದಕ್ಕಾಗಿ 26 ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಳ್ಳಬೇಕು.

ಎಸಿ ಬೋಗಿಗಳ ಸಂಚಾರ

ಎಸಿ ಬೋಗಿಗಳ ಸಂಚಾರ

ಸಾಮಾನ್ಯ ರೈಲುಗಳ ಸಂಚಾರ ಆರಂಭವಾದರೆ ಬಿಐಎಎಲ್ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಓಡಿಸಲಿದೆ. ಮೆಮು ರೈಲು ಸಂಚಾರ ಆರಂಭವಾದ ಬಳಿಕ ಮೂರು ಅಥವ ನಾಲ್ಕು ಬೋಗಿಗಳ ಎಸಿ ಬೋಗಿಗಳನ್ನು ಹೊಂದಿರುವ ರೈಲುಗಳನ್ನು ಓಡಿಸಲಾಗುತ್ತದೆ.

ಸಂಚಾರ ಸಮಸ್ಯೆಯಿಂದ ಮುಕ್ತಿ

ಸಂಚಾರ ಸಮಸ್ಯೆಯಿಂದ ಮುಕ್ತಿ

"ಈ ರೈಲು ನಿಲ್ದಾಣದಿಂದಾಗಿ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಲಿದೆ. ಜನರು ಸುಲಭವಾಗಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಬಹುದಾಗಿದೆ" ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಟ್ವೀಟ್ ಮಾಡಿದ್ದರು.

English summary
Kempegowda International Airport passengers can travel in MEMU trains from various parts of the Bengaluru city by March 2021. Process for the electrification may complete by March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X