ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏ.7ರಂದು ಕೋರಮಂಗಲದಲ್ಲಿ ನಿವಾಸಿಗಳಿಂದ 'ಜಲ ಉತ್ಸವ'

|
Google Oneindia Kannada News

ಬೆಂಗಳೂರು, ಏಪ್ರಿಲ್ 04: ನೀರಿನ ಲಭ್ಯತೆ ಹಾಗೂ ಅದರ ಮಿತವಾದ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಏ.7ರಂದು ಜಲ ಉತ್ಸವವನ್ನು ಹಮ್ಮಿಕೊಂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಕೋರಮಂಗಲ 1,3ಹಾಗೂ 6ನೇ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವಾಟರ್ ವಾರಿಯರ್ಸ್ ಗ್ರೂಪ್ ನೇತೃತ್ವದಲ್ಲಿ ಜಲ ಉತ್ವವನ್ನು ಆಯೋಜಿಸಿದ್ದು, ನೀರಿನ ಮಿತ ಬಳಕೆ, ಬಳಸಿದ ನೀರನ್ನು ಪುನರ್ ಬಳಸುವ ವಿಧಾನ, ಮಳೆ ನೀರು ಕೊಯ್ಲು ಅಳವಡಿಕೆ, ಬಾವಿಗಳನ್ನು ಪುನಶ್ಚೇತನಗೊಳಿಸುವುದು ಇವುಗಳ ಬಗ್ಗೆ ಉತ್ಸವದಲ್ಲಿ, ಪ್ರಾತ್ಯಕ್ಷಿಕೆ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ನೀರಿನ ಅಭಾವ: ಬೆಂಗಳೂರಿಗರು ಎಚ್ಚೆತ್ತುಕೊಳ್ಳುವುದು ಯಾವಾಗ? ನೀರಿನ ಅಭಾವ: ಬೆಂಗಳೂರಿಗರು ಎಚ್ಚೆತ್ತುಕೊಳ್ಳುವುದು ಯಾವಾಗ?

ನಿವಾಸಿಗಳ ಸಂಘವು ಪ್ರತಿ ಮನೆ, ಅಪಾರ್ಟ್ ಮೆಂಟ್ ಗಳಲ್ಲಿ ನಲ್ಲಿಗಳಲ್ಲಿ ಏರೇಟರ್ಸ್ ಬಳಕೆ ನಿಟ್ಟಿನಲ್ಲಿ ಮನವಿಲಿಸುತ್ತಿದೆ. ಮನೆಯಲ್ಲಿ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮತ್ತಿತರೆ ಸಂದರ್ಭಗಳಲ್ಲಿ ನಲ್ಲಿ ನೀರು ಬಿಟ್ಟ ಕೂಡಲೇ ರಭಸವಾಗಿ ಬರುತ್ತದೆ. ಹೀಗೆ ಬಂದ ನೀರಿನಲ್ಲಿ ಶೇ.30ಕ್ಕೂ ಅಧಿಕ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಇದನ್ನು ತಡೆಯಲು ವಾಟರ್ ಏರೇಟರ್ಸ್ ಅಳವಡಿಸುವುದು ಉತ್ತಮ ಮಾರ್ಗವಾಗಿದೆ.

Special campaign for sustainable water usage

ನೀರಿನ ಮಿತ ಬಳಕೆ , ಸಂರಕ್ಚಣೆ ಕುರಿತು ಜಾಗೇರಿ ಮೂಡಿಸಲು ಬೆಂಗಳೂರು ವಾಟರ್ ವಾರಿಯರ್ಸ್ ಗ್ರೂಪ್ ಕಳೆದ ವರ್ಷದ ಅವಧಿಯಲ್ಲಿ ನಗರದ 18 ವಾರ್ಡ್ ಗಳಲ್ಲಿ ಜಲ ಉತ್ಸವ ಆಯೋಜನೆ ಮಾಡಿತ್ತು. ಈ ಬಾರಿಯೂ ಕೂಡ ಇನ್ನಷ್ಟು ಪ್ರದೇಶಗಳಲ್ಲಿ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ.

English summary
Bengaluru has been shown in the list of global water scarcity. So local residents welfare association of Koramangala have organised special awareness campaign in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X