ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ವಿಶ್ವಾಸಮತಕ್ಕೆ ಸ್ಪೀಕರ್ ರಮೇಶ್ ಕುಮಾರ್ ತಯಾರಾದರೇ?

|
Google Oneindia Kannada News

Recommended Video

Karnataka Crisis : ಕೊನೆಗೂ ವಿಶ್ವಾಸಮತಕ್ಕೆ ಸ್ಪೀಕರ್ ರಮೇಶ್ ಕುಮಾರ್ ತಯಾರಾದರೇ? | K. R.Ramesh Kumar

ಬೆಂಗಳೂರು, ಜುಲೈ 22: ಇಂದು ವಿಶ್ವಾಸ ಮತ ಯಾಚನೆ ಆಗುತ್ತೋ ಇಲ್ಲವೋ ಎಂಬ ಗೊಂದಲಕ್ಕೆ ಸ್ಪೀಕರ್ ರಮೇಶ್ ಕುಮಾರ್ ತೆರೆ ಎಳೆದಿದ್ದಾರೆ.

ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಏನೇ ಆಗಲಿವಿಶ್ವಾಸಮತಕ್ಕೆ ತೆರೆ ಎಳೆಯುವುದಾಗಿ ತಿಳಿಸಿದ್ದಾರೆ. ಇಂದೇ ವಿಶ್ವಾಸಮತ ಸಾಬೀತು ಪಕ್ಕಾ ಎಂದಿದ್ದಾರೆ.

LIVE ಇಂದೇ ವಿಶ್ವಾಸಮತ ಯಾಚನೆ: ಸ್ಪೀಕರ್ ಸ್ಪಷ್ಟನೆLIVE ಇಂದೇ ವಿಶ್ವಾಸಮತ ಯಾಚನೆ: ಸ್ಪೀಕರ್ ಸ್ಪಷ್ಟನೆ

ಸುಪ್ರೀಂಕೋರ್ಟ್ ತೀರ್ಪೀನಲ್ಲಿ ಅತೃಪ್ತ ಶಾಸಕರು ಯಾರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಅವರನ್ನು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದಿದ್ದಾರೆ. ಆದರೆ ಇನ್ನೊಂದೆಡೆ ಕಲಾಪಕ್ಕೆ ಶಾಸಕರನ್ನು ಬರುವಂತೆ ತಿಳಿಸಬೇಕು ಎನ್ನುವ ಒತ್ತಡವೂ ನನ್ನ ಮೇಲಿದೆ.

Speaker Rmesh kumar assures Floor Test today

ಆದರೆ ಯಾರಿಗೂ ಅರ್ಜೆಂಟ್ ಇದೆ ಎಂದು ಕಾನೂನಿನ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ. ಗುರುವಾರ ಸದನ ನಡೆದಿದೆ, ಎರಡು ದಿನ ಕಾಲಾವಕಾಶ ಪಡೆದಿದ್ದೆ. ಇಂದು ಎಲ್ಲಾ ಅನುಮಾನಗಳೂ ಅಂತ್ಯ ಕಾಣಲಿದೆ.

ಗುರುವಾರ ಪೂರ್ತಿಯಾಗಿ ಪಾಯಿಂಟ್ ಆಫ್ ಆರ್ಡರ್ ಚರ್ಚೆಯಲ್ಲೇ ಕಳೆದು ಹೋಯಿತು. ಹಾಗಾಗಿ ಅಡ್ವೊಕೇಟ್ ಜನರಲ್ ಬಳಿ ಮಾತನಾಡಿ ನಿರ್ಧಾರಕ್ಕೆ ಬಂದಿದ್ದೇನೆ.

ಇಂದು ಕಲಾಪದಲ್ಲಿ ಎಲ್ಲವೂ ಪ್ರಸ್ತಾಪಿಸಲಾಗುತ್ತದೆ ಎಂದರು.ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ ದಿನದಿಂದಲೂ ಒಂದು ಕಡೆ ಕುಮಾರಸ್ವಾಮಿ ಇನ್ನೊಂದು ಕಡೆ ಬಿಎಸ್ ಯಡಿಯೂರಪ್ಪ ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ.

ಇಂದು ಕೂಡ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ಪೂಜೆ ನೆರವೇರಿಸಿ ಬಸವನಗುಡಿಯಲ್ಲಿರುವ ವ್ಯಾಸರಾಜರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರೆ, ಇನ್ನೊಂದೆಡೆ ಬಿಎಸ್ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿ ಬಳಿಕ ಯಲಹಂಕದ ಅಭಯ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಬಿಜೆಪಿ ಸರ್ಕಾರ ಅಂದುಕೊಂಡಂತೆ ಅಥವಾ ಸಮ್ಮಿಶ್ರ ಸರ್ಕಾರ ಅಂದುಕೊಂಡಂತೆಯೇ ನಡೆಯುತ್ತದೆ ಎನ್ನುವ ಹಾಗಿಲ್ಲ, ಶಾಸಕರನ್ನು ಹಿಡಿದಿಟ್ಟುಕೊಂಡಿದ್ದೇವೆ ಎನ್ನುವ ಖುಷಿಯಲ್ಲಿ ಬಿಜೆಪಿಯವರಿದ್ದರೆ, ಶಾಸಕರನ್ನು ಸದನಕ್ಕೆ ಕರೆದುಕೊಂಡು ಬಂದೇ ಬರುತ್ತೇವೆ ಎನ್ನುವ ವಿಶ್ವಾಸದಲ್ಲಿ ಮೈತ್ರಿ ಸರ್ಕಾರ ಕೂಡ ಇದೆ.

ಸಧ್ಯಕ್ಕೆ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಗೈರಾಗುವ ಸಾಧ್ಯತೆ ಇದೆ.

ಇನ್ನು ಶಾಸಕ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದುಕೊಂಡಿದ್ದು, ಮತ್ತೆ ಮೈತ್ರಿ ಪರ ನಿಂತಿದ್ದಾರೆ. ಇನ್ನೇನು ಯಾರ್ಯಾರ ಉಪಾಯ ತಲೆಕೆಳಗಾಗುವುದು ಎಂದು ಕಾದು ನೋಡಬೇಕಿದೆ.

English summary
After many Highdrama karnataka legislative assembly speaker Ramesh kumar assures that he will try to get Floor Test today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X