ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ನ ಅತೃಪ್ತ ಶಾಸಕರ ವಿಚಾರಣೆ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್

|
Google Oneindia Kannada News

Recommended Video

ಕಾಂಗ್ರೆಸ್‌ನ ಅತೃಪ್ತ ಶಾಸಕರ ವಿಚಾರಣೆ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್ | Oneindia Kannada

ಬೆಂಗಳೂರು, ಮಾರ್ಚ್ 12: ನಾಲ್ಕು ಶಾಸಕರು ಪಕ್ಷಾಂತರ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕುರಿತು ಕಾಂಗ್ರೆಸ್ ನೀಡಿದ್ದ ದೂರಿನ ವಿಚಾರಣೆಯನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಶಾಸಕರನ್ನು ಕರೆದು ಮಾತನಾಡಲು ಸಾಧ್ಯವಿಲ್ಲ ಹಾಗಾಗಿ ಮುಂದೂಡಿದ್ದಾರೆ.

ಕಾಂಗ್ರೆಸ್‌ ಅತೃಪ್ತರಿಗೆ ಮಾರ್ಚ್ 12ರಂದು ಬುಲಾವ್, ಅನರ್ಹತೆಯ ಭಯ ಕಾಂಗ್ರೆಸ್‌ ಅತೃಪ್ತರಿಗೆ ಮಾರ್ಚ್ 12ರಂದು ಬುಲಾವ್, ಅನರ್ಹತೆಯ ಭಯ

ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಬೇಕಿತ್ತು.ಕಾಂಗ್ರೆಸ್‌ನ ಅತೃಪ್ತ ಶಾಸಕರು ಇಂದು ಖುದ್ದು ಆಗಮಿಸಿ ತಮ್ಮ ವಿರುದ್ಧ ಪಕ್ಷಾಂತರ ಕಾಯ್ದೆ ಉಲ್ಲಂಘಟನೆ ಕುರಿತು ಮಾಹಿತಿ ನೀಡಬೇಕಿತ್ತು. ಅನರ್ಹಹೊಳಿಸುವ ಭಯವೂ ಇತ್ತು. ಸಧ್ಯಕ್ಕೆ ಶಾಸಕರು ನಿರಾಳರಾಗಿದ್ದಾರೆ.

speaker postpones hearing on Dissident MLAs due to Election

ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಶಾಸಕ ಉಮೇಶ್ ಜಾಧವ್ ಸೇರಿದಂತೆ ನಾಲ್ಕು ಮಂದಿ ಬಂಡಾಯ ಕಾಂಗ್ರೆಸ್ ಶಾಸಕರಿಗೆ ಮಾರ್ಚ್ 12 ರಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಲು ತಿಳಿಸಲಾಗಿತ್ತು.

ಹೀಗಾಗಿ ರಾಜೀನಾಮೆ ನೀಡಿ ಅರ್ಹತೆಯಿಂದ ಪಾರಾಗುವ ಉಮೇಶ್ ಜಾಧವ್‌ಗೆ ಭಯ ಆರಂಭವಾಗಿತ್ತು. ನಾಲ್ಕು ಮಂದಿ ಶಾಸಕರಿಗೆ ಪತ್ರ ಬರೆದಿದ್ದು, ಶುಕ್ರವಾರ ಖುದ್ದಾಗಿ ಆಗಮಿಸಿ ವಿವರಣೆ ನೀಡುವಂತೆ ಸೂಚಿಸಿರುವುದಾಗಿ ರಮೇಶ್ ಕುಮಾರ್ ತಿಳಿಸಿದ್ದರು.

ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ನಾಲ್ಕು ಮಂದಿ ಶಾಸಕರ ವಿರುದ್ಧ ದೂರು ನೀಡಿದ್ದರು. ದೂರಿನ ಸಂಬಂಧ ಶಾಸಕರು ಸ್ಪಷ್ಟೀಕರಣ ನೀಡಿದ್ದರು. ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ಬಯಸಿ ಮತ್ತೊಂದು ನೋಟಿಸ್ ನೀಡಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದರು.

English summary
Speaker Ramesh Kumar postpones hearing on Congress complaint against Dissident MLAs due to the Model Code of Conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X