ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಒಳಿತಿಗೆ ಶ್ರಮಿಸಿದ ಆರು ಸಾಧಕರಿಗೆ 'ನಮ್ಮ ಬೆಂಗಳೂರು ಪ್ರಶಸ್ತಿ'

|
Google Oneindia Kannada News

ಬೆಂಗಳೂರು, ಮಾರ್ಚ್ 26: ಬೆಂಗಳೂರು ನಗರವನ್ನು ಉತ್ತಮವಾಗಿಸಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ವಿವಿಧ ಕ್ಷೇತ್ರಗಳ ಆರು ಸಾಧಕರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನ 9ನೇ ಆವೃತ್ತಿಯ ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಗರದ ಎನ್.ಎಂ.ಕೆ.ಆರ್ ವಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಜಾರಾಗ್ ಸಂಘಟನೆಯ ಸಂಜೀವ್ ದ್ಯಾಮಣ್ಣನವರ್ ಅವರಿಗೆ ವರ್ಷದ ನಾಗರಿಕ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಾಗರಿಕ ವಿಷಯಗಳ ಸಂಪಾದಕ ರಶೀದ್ ಕಪ್ಪನ್ ಅವರಿಗೆ ವರ್ಷದ ಮಾಧ್ಯಮ ವ್ಯಕ್ತಿ, ಬೆಂಗಳೂರು ನಗರ ವಿಭಾಗದ ಡಿಸಿಎಫ್ ದೀಪಿಕಾ ಬಾಜಪೇಯಿ ಅವರಿಗೆ ವರ್ಷದ ಸರ್ಕಾರಿ ಉದ್ಯೋಗಿ, ನಯೋನಿಕಾ ಐ ಕೇರ್ ಚಾರಿಟಬಲ್ ಟ್ರಸ್ಟ್ ನ ಪ್ರಶಾಂತ್ ಎಸ್.ಬಿ. ಅವರಿಗೆ ವರ್ಷದ ಸಾಮಾಜಿಕ ಉದ್ಯಮಿ, ವಿಷಮ್ ಎಂಪವರ್ ಸಂಸ್ಥೆ ಸಹ ಸಂಸ್ಥಾಪಕಿ ವಿದ್ಯಾ ವೈ ಅವರಿಗೆ ಉದಯೋನ್ಮುಖ ತಾರೆ ಹಾಗೂ ನಗರದ ನಿವಾಸಿ ರುಕ್ಮಿಣಿ ಕೃಷ್ಣಸ್ವಾಮಿ ಅವರಿಗೆ ನಮ್ಮ ಬೆಂಗಳೂರಿಗರು ಪ್ರಶಸ್ತಿ ನೀಡಿ ಗೌರವಿಸಿತು.

ನಮ್ಮ ಬೆಂಗಳೂರು ಪ್ರಶಸ್ತಿ ಸ್ವೀಕರಿಸಲು ರೂಪಾ ನಿರಾಕರಣೆ ನಮ್ಮ ಬೆಂಗಳೂರು ಪ್ರಶಸ್ತಿ ಸ್ವೀಕರಿಸಲು ರೂಪಾ ನಿರಾಕರಣೆ

ಪ್ರತಿಷ್ಠಾನವು ಬೆಂಗಳೂರು ನಗರದ ಪುನರುಜ್ಜೀವನಕ್ಕಾಗಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದೆ. ನಿವೃತ್ತ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ಸಾಧಕರಿಗೆ ಎರಡು ಲಕ್ಷ ರೂ ನಗದು ಹಾಗೂ ಫಲಕ ನೀಡಿ ಗೌರವಿಸಿದರು.

ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ ಪ್ರಶಸ್ತಿ ನಾಮಾಂಕಿತರ ಅನುಚಿತ ವರ್ತನೆ, 'ನಮ್ಮ ಬೆಂಗಳೂರು' ಸ್ಪಷ್ಟನೆ

ವಿವಿಧ ವಿಭಾಗಗಳಲ್ಲಿ ಒಟ್ಟಾರೆ 41 ಮಂದಿಯ ಹೆಸರು ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿತ್ತು. ಅಂತಿಮವಾಗಿ 5ಮಂದಿಯನ್ನು ಆಯ್ಕೆ ಮಾಡಲಾಗಿದೆ. ಮೈಕ್ರೋ ಕ್ಯಾಂಡ್ ನ ಸ್ಥಾಪಕ ಅಧ್ಯಕ್ಷ ಪ್ರದೀಪ್ ಕರ್ ನೇತೃತ್ವದ ವಿವಿಧ ಕ್ಷೇತ್ರಗಳ 23ತಜ್ಞರ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

 ಸಂಜೀವ್ ದ್ಯಾಮಣ್ಣನವರ್ ಅವರು ವರ್ಷದ ನಾಗರಿಕ ಪ್ರಶಸ್ತಿ

ಸಂಜೀವ್ ದ್ಯಾಮಣ್ಣನವರ್ ಅವರು ವರ್ಷದ ನಾಗರಿಕ ಪ್ರಶಸ್ತಿ

ರ್ಷದ ನಾಗರೀಕ ವಿಭಾಗದಲ್ಲಿ ಪ್ರಜಾರಾಗ್ ನ ಸದಸ್ಯರಾಗಿರುವ ಸಂಜೀವ್ ದ್ಯಾಮಣ್ಣವರ್ ರವರು 2018ರ ನಮ್ಮ ಬೆಂಗಳೂರು ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರಿನ ಸಕ್ರಿಯ ನಾಗರಿಕರಾಗಿರುವ ಸಂಜೀವ ದ್ಯಾಮಣ್ಣವರ್ ನಗರದ ಅಸಂಖ್ಯಾತ ವಿಷಯಗಳ ಕುರಿತು ಮಾಹಿತಿಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸುತ್ತಾರೆ. ವೆಬ್ ತಂತ್ರಜ್ಞಾನದಲ್ಲಿ ತಮಗಿರುವ ಕೌಶಲ್ಯವನ್ನು ಬಳಸಿಕೊಂಡು ನಾಗರಿಕ ಸೇವಾ ಸಂಸ್ಥೆಗಳ ಅಧಿಕಾರಿಗಳು ಮತ್ತು ನಾಗರಿಕರ ನಡುವೆ ಸಮನ್ವಯತೆಗೆ ಪ್ರಯತ್ನಿಸುತಿದ್ದಾರೆ.

ಬೆಂಗಳೂರಿಗೆ ಪ್ರಯಾಣಿಕ ರೈಲು ಬೇಕು ಎಂದು ಕಳೆದ 10 ವರ್ಷಗಳಿಂದ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸಾರ್ವಜನಿಕ ಸಾರಿಗೆ, ಮೆಟ್ರೋ, ಬಿಎಂಟಿಸಿ, ಸ್ಕೈವಾಕ್ ಸೇರಿದಂತೆ ಪಾದಚಾರಿ ಸೌಲಭ್ಯಗಳಿಗಾಗಿ ಹೋರಾಟ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸಾರ್ವಜನಿಕ ಬಹುಸಾರಿಗೆ ಮಾದರಿಗಾಗಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಮೆಜೆಸ್ಟಿಕ್ನ ಬಸ್ ನಿಲ್ದಾಣದ ಸ್ಕೈವಾಕ್ ನವೀಕರಣ ಮತ್ತು ಮೇಲ್ಛಾವಣಿ ನಿರ್ಮಾಣಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದಾರೆ.
 ಬೆಂಗಳೂರು ಅವಾರ್ಡ್ಸ್: ವರ್ಷದ ಮಾಧ್ಯಮ ವ್ಯಕ್ತಿ

ಬೆಂಗಳೂರು ಅವಾರ್ಡ್ಸ್: ವರ್ಷದ ಮಾಧ್ಯಮ ವ್ಯಕ್ತಿ

ವರ್ಷದ ಮಾಧ್ಯಮ ವ್ಯಕ್ತಿ ವಿಭಾಗದಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಾಗರಿಕ ವಿಷಯಗಳ ಸಂಪಾದಕರಾದ ರಶೀದ್ ಕಪ್ಪನ್ ರವರು 2018ರ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಪಡೆದಿದ್ದಾರೆ.

ನಗರ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡು ಬರೆಯುವ ರಶೀದ್ ಕಪ್ಪನ್ ಅವರು ನಗರದ ಮೇಲೆ ಪರಿಣಾಮ ಬೀರುವ ಹಲವು ಸಮಸ್ಯೆಗಳನ್ನು ಬೆಳಕಿಗೆ ತಂದಿದ್ದಾರೆ. ಮಹಾತ್ಮ ಗಾಂಧಿ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಇಂಟೆಗ್ರೇಟೆಡ್ ಸ್ಕೈವಾಕ್ ಯೋಜನೆಯ ಕುರಿತು ಅವರು ಮಾಡಿದ ಮುಖಪುಟ ವರದಿಯಿಂದಾಗಿ ಯೋಜನೆ ಈ ರಸ್ತೆಯ ಸೌಂಧರ್ಯವನ್ನು ಹೇಗೆ ನಾಶಮಾಡಬಲ್ಲದು ಎನ್ನುವುದು ಬೆಳಕಿಗೆ ಬಂದಿತ್ತು. ಯೋಜನೆಯ ಕುರಿತು ಅವರು ಬರೆದ ಸರಣಿ ವರದಿಗಳಿಂದಾಗಿ ಯೋಜನೆಯನ್ನು ಕೈಬಿಡುವಂತಾಯಿತು. ಕೆರೆಗಳ ಒತ್ತುವರಿ, ಮಾಲಿನ್ಯ, ಉಪನಗರ ರೈಲು ಯೋಜನೆ, ಉಕ್ಕಿನ ಸೇತುವೆ ಇತ್ಯಾದಿಗಳ ಕುರಿತು ಅವರ ವಿಶ್ಲೇಷಣಾತ್ಮಕ ವರದಿಗಳು ಸಮಸ್ಯೆಗಳ ಗಂಭೀರತೆಯನ್ನು ಪರಿಚಯಿಸಿದ್ದವು
 ದೀಪಿಕಾ ಬಾಜಪೇಯಿ ವರ್ಷದ ಸರ್ಕಾರಿ ಉದ್ಯೋಗಿ

ದೀಪಿಕಾ ಬಾಜಪೇಯಿ ವರ್ಷದ ಸರ್ಕಾರಿ ಉದ್ಯೋಗಿ

ವರ್ಷದ ಸರ್ಕಾರಿ ಅಧಿಕಾರಿ ವಿಭಾಗದಲ್ಲಿ 2018ರ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಯಾಗಿರುವ ದೀಪಿಕಾ ಬಾಜಪೇಯಿರವರು ಪಡೆದಿದ್ದಾರೆ.

ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿರುವ ದೀಪಿಕಾ ಬಾಜಪೇಯಿ ಅವರು ಸಾಮೂಹಿಕ ಅರಣ್ಯ ಬೆಳೆಯುವಲ್ಲಿ ನಾಗರಿಕರನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬೆಳೆದ ಅರಣ್ಯದ ಒಡೆತನದ ಭಾವವನ್ನು ಜನರಲ್ಲಿ ಮೂಡಿಸುತ್ತಿದ್ದಾರೆ. ಒತ್ತುವರಿಯಾಗಿದ್ದ ಜೆಬಿ ಕಾವಲ್, ಬುಟ್ಟನಹಳ್ಳಿ, ಕಗ್ಗಲೀಪುರ, ಯಲಹಂಕ, ಸುಂಕದಕಟ್ಟೆ, ಮೈಲಸಂದ್ರ ಮತ್ತು ತುರಹಳ್ಳಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಿ 149 ಎಕರೆ ಮತ್ತು 13 ಗುಂಟೆ ಅರಣ್ಯ ಸ್ಥಳವನ್ನು ಮರುವಶ ಮಾಡಿಕೊಳ್ಳಲು ಅವರು ಯಶಸ್ವಿಯಾಗಿದ್ದಾರೆ
 ನಯೋನಿಕಾ ಐ ಕೇರ್ ಚಾರಿಟಬಲ್ ಟ್ರಸ್ಟ್ ನ ಪ್ರಶಾಂತ್ ಸಾಮಾಜಿಕ ಉದ್ಯಮಿ,

ನಯೋನಿಕಾ ಐ ಕೇರ್ ಚಾರಿಟಬಲ್ ಟ್ರಸ್ಟ್ ನ ಪ್ರಶಾಂತ್ ಸಾಮಾಜಿಕ ಉದ್ಯಮಿ,

ವರ್ಷದ ಸಾಮಾಜಿಕ ಉದ್ಯಮಿ ವಿಭಾಗದಲ್ಲಿ 2018ರ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ನಯೋನಿಕಾ ಐ ಕೇರ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಶಾಂತ್ ಎಸ್. ಬಿ. ಪಡೆದಿದ್ದಾರೆ.

2010ರಲ್ಲಿ ಆರಂಭವಾದ ಈ ಟ್ರಸ್ಟ್ ಅರಿವು ಕಾರ್ಯಕ್ರಮಗಳು, ಚಿಕಿತ್ಸೆ ಮತ್ತು ಮೇಲ್ವಿಚಾರಣೆಯ ಮೂಲಕ ಅತ್ಯಾಧುನಿಕ ನೇತ್ರ ಚಿಕಿತ್ಸೆಯನ್ನು ಒದಗಿಸುತ್ತಿದೆ. ಡಾ. ಸುರೇಖ ಇದರ ಅಧ್ಯಕ್ಷರು. ಪ್ರಶಾಂತ್ ಎಸ್. ಬಿ. ಇದರ ಚೇರ್ಮನ್. ಅಗತ್ಯವಿರುವ ರೋಗಿಗಳಿಗೆ ಕೈಗೆಟಕುವ ವೆಚ್ಚದಲ್ಲಿ ಅಥವಾ ಉಚಿತವಾಗಿ ಗುಣಮಟ್ಟದ ನೇತ್ರ ಚಿಕಿತ್ಸೆಯನ್ನು ಇವರು ಒದಗಿಸುತ್ತಿದ್ದಾರೆ. ತನ್ಮೂಲಕ ಜನರು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ಧ್ಯೇಯೋದ್ದೇಶಗಳತ್ತ ದೃಢವಾಗಿ ಹೆಜ್ಜೆ ಇಡುವಂತೆ ಮಾಡುತ್ತಿದ್ದಾರೆ.

 ವರ್ಷದ ಉದಯೋನ್ಮುಖ ತಾರೆ ಪ್ರಶಸ್ತಿಗೆ ಪಾತ್ರವಾದ ವಿದ್ಯಾ

ವರ್ಷದ ಉದಯೋನ್ಮುಖ ತಾರೆ ಪ್ರಶಸ್ತಿಗೆ ಪಾತ್ರವಾದ ವಿದ್ಯಾ

ವಿಷನ್ ಎಂಪವರ್ ಸಂಸ್ಥೆಯ ಸಹ ಸಂಸ್ಥಾಪಕರಾದ ಕುಮಾರಿ ವಿದ್ಯಾ ವೈ ರವರು ವರ್ಷದ ಉದಯೋನ್ನುಖ ತಾರೆ ವಿಭಾಗದಲ್ಲಿ 2018ರ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಪಡೆದಿದ್ದಾರೆ.

ವಿಷನ್ ಎಂಪವರ್ ಸಂಸ್ಥೆಯ ಸಹ ಸಂಸ್ಥಾಪಕರಾದ ವಿದ್ಯಾ ಅವರು ಈ ಸಂಸ್ಥೆಯ ಮೂಲಕ ಅಂಧರಿಗೆ ಗಣಿತ ಮತ್ತು ವಿಜ್ಞಾನ ಶಿಕ್ಷಣ ಒದಗಿಸುತ್ತಿದ್ದಾರೆ. ಅಂಧರಿಗೆ ವಿಶೇಷವಾಗಿ ಪಠ್ಯಗಳನ್ನು ಸಿದ್ಧಪಡಿಸಿ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.

ದೃಷ್ಟಿದೋಷದಿಂದಾಗಿ ಅಂಧರಿಗೆ ಸವಾಲೆನಿಸುವ ವಿಷಯಗಳನ್ನೇ ಬೋಧಿಸಲು ಇವರು ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೇ ವಿದ್ಯಾ ಅವರು ಪ್ರೇರಣಾತ್ಮಕ ಉಪನ್ಯಾಸಗಳನ್ನೂ ನೀಡುತ್ತಿದ್ದಾರೆ. ಅವರ ಕೌನ್ಸೆಲಿಂಗ್ ನಿಂದ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಆನ್ಲೈನ್ ರೇಡಿಯೋ ಕಾರ್ಯಕ್ರಮವನ್ನೂ (35 ಕಂತುಗಳ ಒಂದು ಗಂಟೆಯ ಕಾರ್ಯಕ್ರಮ) ಅವರು ನಡೆಸಿಕೊಟ್ಟಿದ್ದಾರೆ. ವಿಶ್ವಾದ್ಯಂತ 5000 ವಿದ್ಯಾರ್ಥಿಗಳು ಇದನ್ನು ಆಲಿಸಿದ್ದಾರೆ.

 ನಮ್ಮ ಬೆಂಗಳೂರಿಗರು ಪ್ರಶಸ್ತಿ ಪಡೆದ ರುಕ್ಮಿಣಿ ಕೃಷ್ಣಸ್ವಾಮಿ

ನಮ್ಮ ಬೆಂಗಳೂರಿಗರು ಪ್ರಶಸ್ತಿ ಪಡೆದ ರುಕ್ಮಿಣಿ ಕೃಷ್ಣಸ್ವಾಮಿ

ಕರ್ನಾಟಕ ಸ್ಪಾಸ್ಟಿಕ್ಸ್ ಸೊಸೈಟಿಯ ನಿರ್ದೇಶಕರಾಗಿರುವ ರುಕ್ಮಿಣಿ ಕೃಷ್ಣಸ್ವಾಮಿ ಅವರು 2018ರ ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಸ್ತುತ ಕರ್ನಾಟಕ ಸ್ಪಾಸ್ಟಿಕ್ಸ್ ಸೊಸೈಟಿಯ ನಿರ್ದೇಶಕರಾಗಿರುವ ರುಕ್ಮಿಣಿ ಕೃಷ್ಣಸ್ವಾಮಿ ಅವರು 1) ವಿಕಲ ಚೇತನ ಮಕ್ಕಳ ವಿಶೇಷ ಶಿಕ್ಷಣ, 2) ಅಂಥ ಮಕ್ಕಳ ಪೋಷಕರ ತರಬೇತಿ ಮತ್ತು 3) ಅಂಥ ಮಕ್ಕಳ ಶಿಕ್ಷಕರ ತರಬೇತಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಇದುವರೆಗೆ ಅವರು 70 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ನೆರವಾಗಿದ್ದಾರೆ. ಕರ್ನಾಟಕದಾದ್ಯಂತ ಇಂದು 3,500ಕ್ಕೂ ಹೆಚ್ಚು ಮಕ್ಕಳು ಸೊಸೈಟಿಯ ಆಶ್ರಯ ಪಡೆದಿದ್ದಾರೆ. ಪುನರ್ವಸತಿ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ.

English summary
Rukhmini Krishnaswamy , director of spastic society of Karnataka, has won the Namma Bengalurean of the year award given by the Namma Bengaluru Foundation, which is founded by Rajeev Chandrasekhar.Sanjeev V Dyamannanavar, Rasheed kappan, Deepika Bajpai, Prashant SB, Y Vidya as rising start of the year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X