ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಯಾನ ಯಶಸ್ವಿ ರೂವಾರಿ ವಿಜ್ಞಾನಿ ಡಾ. ಎಸ್‌ಕೆ ಶಿವಕುಮಾರ್ ನಿಧನ

|
Google Oneindia Kannada News

ಬೆಂಗಳೂರು, ಏ.13: ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿದ್ದ, ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿಜ್ಞಾನಿ ಡಾ. ಎಸ್‌ಕೆ ಶಿವಕುಮಾರ್ ಇಂದು(ಏ.13) ವಿಧಿವಶರಾಗಿದ್ದಾರೆ.

ಮೈಸೂರು ಮೂಲದವರಾದ ಶಿವಕುಮಾರ್​ ಚಂದ್ರಯಾನ-1ಗೆ ಟೆಲಿಮೆಟ್ರಿ ಸಿಸ್ಟಮ್​ ಅಭಿವೃದ್ಧಿಪಡಿಸಿದ ತಂಡದ ಭಾಗವಾಗಿದ್ದರು.2015ರಲ್ಲಿ ಶಿವಕುಮಾರ್​ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

Space scientist sk shivakumar is no more

ಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರಯಶಸ್ವಿ ಉಪಗ್ರಹ ಉಡಾವಣೆ: ಇಸ್ರೋಗೆ ಅಭಿನಂದನೆಗಳ ಮಹಾಪೂರ

ಮೈಸೂರು ವಿಶ್ವವಿದ್ಯಾಲಯ ಶಿವಕುಮಾರ್​ ಅವರಿಗೆ ಗೌರವ ಡಾಕ್ಟರೇಟ್​ ನೀಡಿತ್ತು. ಇಸ್ರೋ ಸ್ಯಾಟಿಲೈಟ್​ ಸೆಂಟರ್​ ಹಾಗೂ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಸೆಂಟರ್​​ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅಲ್ಲದೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಡೋಜ ಪ್ರಶಸ್ತಿಗೂ ಇವರು ಭಾಜನರಾಗಿದ್ದರು. ಇಂದು ಸಂಜೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಕರ್ನಾಟಕ ಪತ್ರಿಕೋದ್ಯಮ ಕ್ಕೆ 2012 ರಲ್ಲಿ ಕಾಲಿಟ್ಟ ಇವರು ಪಿ.ಯು.ಸಿ ಯಲ್ಲಿ ಓದುವಾಗಲೇ ಆಸಕ್ತಿ ಬೆಳೆಸಿ ಕೊಂಡರು.ಅನಂತರ ಮೈಸೂರು ವಿಶ್ವವಿದ್ಯಾನಿಲಯ ದಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿದರು. ಮೂಲತಃ ಚನ್ನಪಟ್ಟಣ ದವರಾದ ಇವರು ಓದಿದ್ದು ಮಂಡ್ಯದಲ್ಲಿ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ (IISc)'ಫಿಸಿಕಲ್ ಎಂಜಿನಿಯರಿಂಗ್‌'ನಲ್ಲಿ 'ಎಂ.ಟೆಕ್ ಶಿಕ್ಷಣ' ದ ಬಳಿಕ ಶಿವಕುಮಾರ್ 1976ರಲ್ಲಿ ಇಸ್ರೊಗೆ ಸೇರಿದರು.

ಲಕ್ಷಗಟ್ಟಲೆ ಕಿಲೋ ಮೀಟರ್ ದೂರವಿರುವ ಉಪಗ್ರಹಗಳ ಚಲನವಲನವನ್ನು ವೀಕ್ಷಿಸುವ ಹಾಗೂ ಅದರಿಂದ ಬರುವ ಸಂವಹನ ಸಂದೇಶಗಳನ್ನು ಸೆರೆಹಿಡಿಯುವ 32 ಮೀಟರ್ 'ಡಿಷ್ ಆಂಟೆನಾದ ಅಭಿವೃದ್ಧಿ'ಯಲ್ಲಿ ಶಿವಕುಮಾರ್ ಸಹಭಾಗಿಯಾಗಿದ್ದಾರೆ.

ಭಾರತದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-1(1) ಕ್ಕೆ ಬೇಕಾದ 'ಟೆಲಿಮೆಟ್ರಿ'ಯನ್ನು ರೂಪಿಸಿದ ವಿಜ್ಞಾನಿಗಳ ತಂಡದಲ್ಲಿ ಶಿವಕುಮಾರ್ ಪಾತ್ರ ಬಹಳ ವಿಶೇಷವಾಗಿದೆ.
ಎಸ್‌ಕೆ ಶಿವಕುಮಾರ್ ಅವರು 2012ರಿಂದ 2015ರವರೆಗೆ ಯುಆರ್‌ಎಸ್‌ಸಿಯ ನಿರ್ದೇಶಕರಾಗಿದ್ದರು.

ಅವರು ಸುಮಾರು 2500ಕ್ಕೂ ಹೆಚ್ಚು ವಿಜ್ಞಾನಿಗಳ ತಂಡವನ್ನು ಲೀಡ್ ಮಾಡಿದ್ದರು.
1998ರಿಂದ 2010ರವರೆಗೆ ಇಸ್ರೋದಲ್ಲಿ ಸೇವೆ ಸಲ್ಲಿಸಿದ್ದರು.

ಅವರಿಗೆ ಸಂದ ಪ್ರಶಸ್ತಿಗಳು
- ಪದ್ಮಶ್ರೀ ಪ್ರಶಸ್ತಿ
-ಇಂಡಿಯನ್ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಅವಾರ್ಡ್
-ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ ಸ್ಪೇಸ್ ಸಿಸ್ಟಂ ಮ್ಯಾನೇಜ್‌ಮೆಂಟ್
-ಇಸ್ರೋ ಮೆರಿಟ್ ಪ್ರಶಸ್ತಿ
- ಐಎಎ ಟೀಮ್ ಅಚೀವ್‌ಮೆಂಟ್ ಅವಾರ್ಡ್
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
-ಹಮ್ಸ ರತ್ನ ಪ್ರಶಸ್ತಿ
- ನ್ಯಾಷನಲ್ ಏರೋನಾಟಿಕಲ್ ಪ್ರೈಜ್
- ಮೈಸೂರು ವಿಶ್ವವಿದ್ಯಾಲಯದಿಂದ ಹಾನರರಿ ಡಾಕ್ಟರೇಟ್
- ನಾಡೋಜಾ ಪ್ರಶಸ್ತಿಗೆ ಭಾಜನರಾಗಿದ್ದರು.

English summary
Space scientist sk shivakumar is no more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X