ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸ್ಥಳದ ಕೊರತೆ

|
Google Oneindia Kannada News

ಬೆಂಗಳೂರು ಮೇ 30: ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಸ್ಥಳಾವಕಾಶವೇ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಬೆಸ್ಕಾಂ ನಗರದಾದ್ಯಂತ ಇರುವ ತನ್ನ ಕಚೇರಿಗಳಲ್ಲೇ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಅಲ್ಲದೇ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಒದಗಿಸಲು ಹಾಗೂ ಚಾರ್ಜಿಂಗ್ ಸ್ಟೇಷನ್ ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ದೆಹಲಿ: ಮಂಗಳವಾರದಿಂದ 3 ದಿನ 150 ಎಲೆಕ್ಟ್ರಿಕ್ ಬಸ್‌ಗಳಲ್ಲಿ ಉಚಿತ ಪ್ರಯಾಣ ದೆಹಲಿ: ಮಂಗಳವಾರದಿಂದ 3 ದಿನ 150 ಎಲೆಕ್ಟ್ರಿಕ್ ಬಸ್‌ಗಳಲ್ಲಿ ಉಚಿತ ಪ್ರಯಾಣ

ನೋಡಲ್ ಏಜೆನ್ಸಿಯಾಗಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಎಲೆಕ್ಟ್ರಿಕ್ ವಾಹಗಳಿಗೆ ಚಾರ್ಜಿಂಗ್ ಸ್ಟೇಷನ್ ಗಳನ್ನು ಅಳವಡಿಸಲು ಮುಂದಾಗಿದೆ.

ದೆಹಲಿಯಲ್ಲಿ ಇವಿ ಬಸ್: ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ದೆಹಲಿಯಲ್ಲಿ ಇವಿ ಬಸ್: ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ

ಬೆಸ್ಕಾಂ ಇವಿ ವಿಭಾಗವು ಇಲ್ಲಿಯವರೆಗೆ 136 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಈ ಪೈಕಿ 126 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಾರಿಗೆ ಇಲಾಖೆಯ ಸಹಕಾರದಲ್ಲಿ ಅಳವಡಿಸಿದೆ.

ಜಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅಡ್ಡಿ

ಜಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅಡ್ಡಿ

ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಲ್ಲಿ ಒಂದು ಅಥವಾ ಎರಡು ನಿಮಿಷದಲ್ಲಿ ಫುಲ್ ಟ್ಯಾಂಕ್ ಇಂಧನ ತುಂಬಿಸಬಹುದು. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಯ ಗಾತ್ರಕ್ಕೆ ಅನುಗುಣವಾಗಿ ಒಮ್ಮೆ ಪೂರ್ತಿ ಚಾರ್ಜ್ ಆಗಲು 45 ನಿಮಿಷಗಳಿಂದ 6 ಗಂಟೆ ವರೆಗೆ ಸಮಯ ಬೇಕಾಗುತ್ತದೆ. ಸ್ಥಳಾವಕಾಶದ ಕೊರತೆಯು ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಪ್ರಮುಖ ಆಡಚಣೆಯಾಗಿದೆ.

ಹೆಚ್ಚುವರಿ 300 ಜಾರ್ಜಿಂಗ್ ಕೇಂದ್ರಗಳು

ಹೆಚ್ಚುವರಿ 300 ಜಾರ್ಜಿಂಗ್ ಕೇಂದ್ರಗಳು

"ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಜಾರ್ಜಿಂಗ್ ಕೇಂದ್ರಗಳಿಗೆ ಬೇಡಿಕೆ ಹೆಚ್ಚಲಿದೆ. ನಗರದಲ್ಲಿ ಒಂದು ಚದರ ಅಡಿ ಜಾಗಕ್ಕೆ ಸಾವಿರಾರು ರುಪಾಯಿ ಇದೆ. ನಗರದಲ್ಲಿ ಜಾರ್ಜಿಂಗ್ ಕೇಂದ್ರಗಳಿಗೆ ಜಾಗ ಸಿಗದೇ ಪರದಾಡುತ್ತಿದ್ದೇವೆ. ಈಗಿರುವ 136 ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 300 ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿರತವಾಗಿದೆ,'' ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ

ಇದೇ ವೇಳೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬೇಡಿಕೆಗೆ ಅನುಗಣವಾಗಿ ರಾಜ್ಯದ ಹಲವು ಭಾಗಗಳಲ್ಲಿ 1000 ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಬೆಸ್ಕಾಂ ಮುಂದಾಗಿದೆ. ಪ್ರತಿ ನಿಲ್ದಾಣದಲ್ಲಿ ಒಂದು ಫಾಸ್ಟ್ ಚಾರ್ಜರ್ ಮತ್ತು ಎರಡು ಸ್ಲೋ ಚಾರ್ಜರ್ ಗಳನ್ನು ಅಳವಡಿಸಲಾಗುವುದು. ಪ್ರಮುಖ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೆದ್ದಾರಿಗಳಲ್ಲಿ ಖಾಲಿ ನಿವೇಶನಗಳ ಮಾಲೀಕರು ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ಬೆಸ್ಕಾಂ ಅಧಿಕಾರಿ ಆಶಯ ವ್ಯಕ್ತಪಡಿಸಿದರು.

ಜಾರ್ಜಿಂಗ್ ಕೇಂದ್ರ ಸ್ಥಾಪಿಸಲು 60,000 ರೂ. ವೆಚ್ಚ

ಜಾರ್ಜಿಂಗ್ ಕೇಂದ್ರ ಸ್ಥಾಪಿಸಲು 60,000 ರೂ. ವೆಚ್ಚ

2019 ಆಗಸ್ಟ್‌ಗೂ ಮೊದಲು ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಿಗೆ ಜಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಾವಕಾಶ ನೀಡುವಂತೆ ಬೆಸ್ಕಾಂ ಮನವೊಲಿಸಲು ಯೋಜಿಸಿದೆ. "ಅಪಾರ್ಟ್‌ಮೆಂಟ್‌ಗಳಲ್ಲಿ ಜಾರ್ಜಿಂಗ್ ಕೇಂದ್ರ ಸ್ಥಾಪಿಸಲು ವೈರಿಂಗ್‌ನ ಉದ್ದವನ್ನು ಪರಿಗಣಿಸಿ ಸುಮಾರು 50,000 ದಿಂದ 60,000 ರು. ವೆಚ್ಚವಾಗುತ್ತದೆ. ಕೊರೊನಾ ಕಾರಣದಿಂದ ಈ ಯೋಜನೆ ಜಾರಿಗೆ ವಿಳಂಬವಾಗಿದೆ,'' ಎಂದು ಅಧಿಕಾರಿ ಹೇಳಿದರು.

ಸುರಕ್ಷತೆಗೆ ಒತ್ತು ನೀಡಲು ಮನವಿ

ಸುರಕ್ಷತೆಗೆ ಒತ್ತು ನೀಡಲು ಮನವಿ

"ಜಾರ್ಜಿಂಗ್ ಕೇಂದ್ರಗಳನ್ನು ಅಳವಡಿಸುವ ವಿಷಯದಲ್ಲಿ ಖಾಸಗಿ ಕಂಪನಿಗಳು ಬೆಸ್ಕಾಂಗಿಂತ ಮುಂದಿವೆ. ಅವು ಕಟ್ಟಡದ ನೆಲಮಾಳಿಗೆಯಲ್ಲಿ 10 ಅಥವಾ 11 ಜಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸುತ್ತಿವೆ ಹಾಗೂ ಜಾರ್ಜಿಂಗ್‌ಗೆ ಕನಿಷ್ಠ ಶುಲ್ಕುವನ್ನು ಪಡೆಯುತ್ತಿವೆ. ವೈರಿಂಗ್ ಗುಣಮಟ್ಟದ ಕೊರತೆಯು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಹಾಗಾಗಿ ಗುಣಮಟ್ಟದ ವಿಷಯದಲ್ಲಿ ರಾಜೀ ಆಗಬಾರದು. ಅಲ್ಲದೇ ನಾವು ದೇಶದ ಹಲವು ಕಡೆಗಳಲ್ಲಿ ಬ್ಯಾಟರಿ ಸ್ಫೋಟವನ್ನು ಗಮನಿಸಿದ್ದೇವೆ. ಉಪಕರಣಗಳು ಮತ್ತು ವೈರಿಂಗ್ ಗುಣಮಟ್ಟವನ್ನು ಬೆಸ್ಕಾಂ ನಿಗದಿಪಡಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಗಮನ ಹರಿಸಬೇಕಾಗಿದೆ,'' ಎಂದು ನಾಗಸಂದ್ರ ಅಪಾರ್ಟ್‌ಮೆಂಟ್ ಒಂದರ ನಿವಾಸಿ ಹರೀಶ್ ಜಿ. ಮನವಿ ಮಾಡಿದ್ದಾರೆ.

English summary
Space remains the biggest constraint to establish charging stations in the city, which has prompted Bescom to zero in on its own office buildings across the city .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X