ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚು!

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಬೆಂಗಳೂರಿನಲ್ಲಿ ನಡೆದ 5ನೇ ದಕ್ಷಿಣ ಎಚ್.ಒ.ಜಿ Rallyಯಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಸವಾರರು ಪಾಲ್ಗೊಂಡಿದ್ದರು. ಇದರಲ್ಲಿ 22 ಹಾರ್ಲೆ ಮಾಲೀಕರ ತಂಡಗಳು ಭಾಗವಹಿಸಿದ್ದವು. ಇದರ ವಿಶೇಷವೆಂದರೆ ಕೆಲವರು ದೂರದ ಲಕ್ನೋ ಮತ್ತು ದೆಹಲಿಯಿಂದ ಬೈಕ್ ರೈಡ್ ಮಾಡಿಕೊಂಡು ಬಂದು ತಮ್ಮ ಕೌತುಕದ ಅನುಭವಗಳನ್ನು ಹಂಚಿಕೊಂಡರು.

ಈ ಬೈಕ್ ಮೆರವಣಿಗೆಯ ಪ್ರಮುಖ ಉದ್ದೇಶವೆಂದರೆ, ಹ್ಯಾರ್ಲೆ ಮಾಲೀಕರ ತಂಡಗಳಲ್ಲಿ ಕಸ್ಟಮ್ ಕಾಂಟೆಸ್ಟ್ ಅನ್ನು ಜನಪ್ರಿಯಗೊಳಿಸುವುದಾಗಿತ್ತು. ಈ ಮೂಲಕ ಬೈಕ್ ಮಾಲೀಕರು ತಮ್ಮ ಮೋಟರ್‍ಸೈಕಲ್‍ಗಳ ಮೂಲಕ ಕಲಾತ್ಮಕತೆಯನ್ನು ಜಗತ್ತಿಗೆ ಸಾರುವ ಅವಕಾಶ ಒದಗಿಸಲಾಗಿತ್ತು.[ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?]

ಗ್ರಾಹಕೀಕರಣ ಮತ್ತು ವೈಯಕ್ತೀಕರಣದ ಮೂಲಕ ಹ್ಯಾರ್ಲೆ ಮಾಲೀಕತ್ವದ ಅನುಭವವನ್ನು ಒರೆಗೆ ಹಚ್ಚುವುದು ಮತ್ತು ಈ ಮೋಟರ್ಸ್ ಬೈಕ್ ಗಳ ಬಗ್ಗೆ ತಮ್ಮ ಅನುಭವಗಳನ್ನು ತೋರಿಸುವುದು ಇದರ ಮತ್ತೊಂದು ಉದ್ದೇಶವಾಗಿತ್ತು. ತಿರುಮಲ ಗೋವಿಂದರಾಜ್ ಅವರು ತಮ್ಮ ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ಪ್ರಶಸ್ತಿಗೆ ಪಾತ್ರರಾದರು. [ಯುವ ಪೀಳಿಗೆಯ ಕನಸಿನ ಹೋಂಡಾ ಸಿಬಿ ಹಾರ್ನೆಟ್ 160ಆರ್]

1000 Harley Owners gather at Bengaluru

ಈ ಮೆರವಣಿಗೆ (Rally)ಯಲ್ಲಿ ಹಾರ್ಲೆ ಮಾಲೀಕರ ತಂಡಗಳ 370 ಸವಾರರು ಸಾವಿರಾರು ಕಿಲೋಮೀಟರ್ ಗಳನ್ನು ಕ್ರಮಿಸಿದರು. ಈ ಮೆರವಣಿಗೆ ಯಲ್ಲಿ ದೇಶಾದ್ಯಂತ ಸಾವಿರಾರು ಕಿಲೋಮೀಟರ್ ಕ್ರಮಿಸುವ ಮೂಲಕ ರೈಡರ್ ಗಳು ತಮ್ಮಲ್ಲಿರುವ ಬೈಕ್ ರೈಡ್ ನ ಉತ್ಸಾಹ ಮತ್ತು ಆತ್ಮಸ್ಥೈರ್ಯವನ್ನು ಪ್ರದರ್ಶನ ಮಾಡಿದರು. ಪ್ರತಿವರ್ಷ ನಡೆಯುವ ಪ್ರತಿಯೊಂದು ವಲಯಗಳ Rallyಗಳಲ್ಲಿ ಮತ್ತು ಎಚ್.ಒ.ಜಿ Rallyಯಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸಲಾಗುತ್ತದೆ. [ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

ಟಸ್ಕರ್ ಹಾರ್ಲೆ ಡೇವಿಡ್ಸನ್ ನ ಪ್ರಿನ್ಸಿಪಾಲ್ ಡೀಲರ್ ಆಗಿರುವ ಶ್ರೀನಿವಾಸ ರೆಡ್ಡಿ ಅವರು ಈ ಸಂದರ್ಭದಲ್ಲಿ ಮಾತನಾಡಿ, 'ನಮ್ಮ ಟಸ್ಕರ್ ಚಾಪ್ಟರ್ ನಗರದಲ್ಲೇ 5 ನೇ ಎಚ್.ಒ.ಜಿ ರ್ಯಾಲಿಯನ್ನು ಆಯೋಜಿಸುವ ಮೂಲಕ ಭ್ರಾತೃತ್ವವನ್ನು ಮೆರೆದಂತಾಗಿದೆ. ಇದು ನಮಗೆ ಹೆಮ್ಮೆ ಎನಿಸಿದೆ. [ಎನ್ ಫೀಲ್ಡ್ ಬೈಕ್ ಬಾಡಿಗೆ ಪಡೆದು ನಗರ ಸುತ್ತಾಡಿ]

ಇಂತಹ ಎಚ್.ಒ.ಜಿ.ಗಳಿಂದಾಗಿ ಅತ್ಯಂತ ಹೇರಳವಾದ ಮನೋರಂಜನೆ ಜತೆಗೆ ಹ್ಯಾರ್ಲೆ ಮಾಲೀಕತ್ವ ಹೊಂದಿರುವವರು ಒಂದೆಡೆ ಕಲೆಯಲು ವೇದಿಕೆ ಕಲ್ಪಿಸಿದಂತಾಗುತ್ತದೆ. ಇನ್ನು ನಮ್ಮ ಕುತೂಹಲವನ್ನು ತಡೆಯಲು ಸಾಧ್ಯವಿಲ್ಲ. ಈ ವರ್ಷಾಂತ್ಯದಲ್ಲಿ ಇಂದೋರ್(ಟೈಗರ್ ಚಾಪ್ಟರ್)ನಲ್ಲಿ ನಡೆಯಲಿರುವ ಪೂರ್ವ ಎಚ್.ಒ.ಜಿ. ಯನ್ನು ಕಾತುರದಿಂದ ಎದುರು ನೋಡುತ್ತಿದ್ದೇವೆ'' ಎಂದರು. [ಅರಸ್ ಬೈಕ್ ಸಾಹಸಕ್ಕೆ ಸಾಕ್ಷಿಯಾದ ಮಂಗಳೂರಿಗರು]

ಪ್ರತಿ ವರ್ಷ ನಡೆಯುವ ವಲಯವಾರು Rallyಗಳು ಹಾರ್ಲೆ ಮಾಲೀಕರಿಗೆ ಹೊಸ ಅನುಭವಗಳ ಜತೆಗೆ ಬೈಕ್ ರೈಡಿಂಗ್ ನ ಹೊಸ ಹೊಸ ಅನುಭವಗಳನ್ನು ನೀಡುತ್ತವೆ. ಈ ರ್ಯಾಲಿಗಳಿಂದ ಅವಿಸ್ಮರಣೀಯ ಅನುಭವಗಳನ್ನು ಮಾಲೀಕರು ಹೊಂದಬಹುದು.

ದಕ್ಷಿಣದಲ್ಲಿ ನಡೆಯುವ ಪ್ರತಿಯೊಂದು ರ್ಯಾಲಿಗಳು ವಿಶೇಷತೆಗಳಿಂದ ಕೂಡಿರುತ್ತವೆ. ಈ ಹಿಂದೆ ಕೊಚ್ಚಿ, ಹೈದ್ರಾಬಾದ್, ಚೆನ್ನೈ ಮತ್ತು ಹಂಪಿಯಲ್ಲಿ ನಡೆದಿದ್ದ Rallyಗಳಲ್ಲಿ ದೇಶದ ವಿವಿಧ ಭಾಗಗಳ ಎಚ್.ಒ.ಜಿ ಗಳ ಸದಸ್ಯರು ಹೆಚ್ಚು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.

1000 Harley Owners gather at Bengaluru

ಹಾರ್ಲೆ ಡೇವಿಡ್ಸನ್ ಭಾರತ: ಆಗಸ್ಟ್ 2009ರಲ್ಲಿ ಆರಂಭವಾದ ಭಾರತದ ಘಟಕ 2010ರ ಜುಲೈನಲ್ಲಿ ಮೊದಲ ಡೀಲರ್ ಶಿಪ್ ಪಡೆದುಕೊಂಡಿತು. ಭಾರತದಲ್ಲಿ ಸುಮಾರು 13 ಮಾಡೆಲ್ ಗಳು ಲಭ್ಯವಿದ್ದು, ಗುರ್ ಗಾಂವ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ. [ಓಲಾ, ಊಬರ್ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ?]

ನವದೆಹಲಿ, ಗುರ್ ಗಾಂವ್, ಚಂಡೀಗಢ, ಮುಂಬೈ, ಹೈದರಾಬಾದ್, ಬೆಂಗಳೂರು(ಎರಡು ಕಡೆ), ಚೆನ್ನೈ, ಕೊಚ್ಚಿ, ಕೋಲ್ಕತ್ತಾ, ಅಹಮದಾಬಾದ್, ಇಂದೋರ್, ಗೋವಾ ಜೈಪುರ ಸೇರಿದಂತೆ 21 ಡೀಲರ್ ಶಿಪ್ ಕೇಂದ್ರಗಳು ದೇಶದೆಲ್ಲೆಡೆ ಇವೆ. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಿ.

English summary
More than 1000 Harley-Davidson riders rumbledinto Bengaluru as the city played host to the 5th Southern H.O.G. Rally 2016.The Harley owners were from 22 H.O.G. (Harley Owners’ ‘Group) Chapters – some having ridden from as far as Lucknow and Delhi – to gather for a remarkable experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X