ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 3ನೇ ಅಲೆ ಎದುರಿಸಲು ನೈಋತ್ಯ ರೈಲ್ವೆ ಸಿದ್ಧತೆಗಳು

|
Google Oneindia Kannada News

ಬೆಂಗಳೂರು, ಜನವರಿ 18; ಕೋವಿಡ್ 3ನೇ ಅಲೆ ಅಬ್ಬರ ಹೆಚ್ಚಾಗತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರ ಕೋವಿಡ್ ಸೋಂಕು ಹರಡುವಿಕೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ರೈಲು ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಕೋವಿಡ್ 19ರ ಹೊಸ ಅಲೆಯ ಸವಾಲುಗಳನ್ನು ಎದುರಿಸಲು ನೈಋತ್ಯ ರೈಲ್ವೆ ಮೂರು ವಿಭಾಗದಲ್ಲಿಯೂ ಸಿದ್ಧತೆಗಳನ್ನು ಮಾಡಿಕೊಂಡಿದೆ.

ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ ತಿರುವನಂತಪುರಂ-ಕಾಸರಗೋಡು ರೈಲು ಯೋಜನೆ ಡಿಪಿಆರ್ ಬಿಡುಗಡೆ

ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಕೋವಿಡ್ ಶುಶ್ರೂಷ ಕೇಂದ್ರಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ ಕೇಂದ್ರಿಯ ರೈಲ್ವೆ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ.

ರೈಲು ನಿಲ್ದಾಣದ ಪ್ಲಾಟ್ ಫಾರಂ ದರ ಮತ್ತೆ ಹೆಚ್ಚಳ ರೈಲು ನಿಲ್ದಾಣದ ಪ್ಲಾಟ್ ಫಾರಂ ದರ ಮತ್ತೆ ಹೆಚ್ಚಳ

South Western Railway Preparations To Face Covid 3rd Wave

ಬೆಂಗಳೂರಿನಲ್ಲಿ 149, ಮೈಸೂರಿನಲ್ಲಿ 74 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಈ ಮೂರು ಆಸ್ಪತ್ರೆಗಳಲ್ಲಿ ಫೀವರ್ ಕ್ಲಿನಿಕ್ ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ಶಂಕಿತ ಪ್ರಕರಣಗಳ ಆರ್‌ಎಟಿ ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ ಬಜೆಟ್; ರೈಲ್ವೆ ಇಲಾಖೆಯಡಿಯ 6 ಸಂಸ್ಥೆಗಳ ವಿಲೀನ

ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲದ ರೋಗಿಗಳಿಗೆ ಫೀವರ್ ಕ್ಲಿನಿಕ್‌ಗಳಲ್ಲಿ ಅಗತ್ಯವಾದ ಔಷಧಗಳನ್ನು ವಿತರಣೆ ಮಾಡಲಾಗುತ್ತಿದೆ. ಎಲ್ಲಾ ಐಸಿಯುಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.

ನೈಋತ್ಯ ರೈಲ್ವೆಯಲ್ಲಿ ಸದ್ಯ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 300. ಇವುಗಳಲ್ಲಿ ರೈಲ್ವೆಯ ಸಿಬ್ಬಂದಿ, ಅವರ ಕುಟುಂಬದ ಅರ್ಹ ಸದಸ್ಯರು, ನಿವೃತ್ತ ಉದ್ಯೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಸೇರಿದ್ದಾರೆ.

ಆಕ್ಸಿಜನ್ ಸೌಲಭ್ಯ; ನೈಋತ್ಯ ರೈಲ್ವೆ ಮೂರು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ವ್ಯವಸ್ಥೆ ಮಾಡಿದೆ. ಮೂರು ಆಸ್ಪತ್ರೆಯಲ್ಲಿ 500 ಎಲ್‌ಪಿಎಂ ಪಿಎಸ್‌ಎ ಆಮ್ಲಜನಕ ಉತ್ಪದನಾ ಘಟಕಗಳು ಲಭ್ಯವಿದೆ. ಹಾಸಿಗೆಗಳಿಗೆ ಕೊಳವೆ ಮೂಲಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ವಿಭಾಗೀಯ ರೈಲು ಆಸ್ಪತ್ರೆಯಲ್ಲಿ 1 ಕೀ. ಲೀ. ಸಾರ್ಮರ್ಥ್ಯದ 2 ಆಮ್ಲಜನಕದ ಟ್ಯಾಂಕ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಹುಬ್ಬಳ್ಳಿ ಕೇಂದ್ರಿಯ ರೈಲ್ವೆ ಆಸ್ಪತ್ರೆಯಲ್ಲಿ 2022ರ ಜನವರಿ ಅಂತ್ಯಕ್ಕೆ 5 ಕೀ. ಲೀ. ಸಾರ್ಮರ್ಥ್ಯದ ಒಂದು ಆಮ್ಲಜನಕ ಘಟಕ ಸ್ಥಾಪನೆಯಾಗಲಿದೆ.

ಆಮ್ಲಜನಕದ ಸಿಲಿಂಡರ್ ಮರು ಭರ್ತಿ ಮಾಡುವಿಕೆಯ ಪೂರೈಕೆಯ ಒಪ್ಪಂದಗಳು ಜಾರಿಯಲ್ಲಿದ್ದು ಇದಲ್ಲದೇ ಸಾಕಷ್ಟು ಸಂಖ್ಯೆಯಲ್ಲಿ ಆಮ್ಲಜನಕ ಸಾಂಕದ್ರಕಗಳು ಈ ಆಸ್ಪತ್ರೆಗಳಲ್ಲಿ ಲಭ್ಯವಿದೆ.

ಹೆಚ್ಚುವರಿ ಅವಶ್ಯಕತೆಗಳಿಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ರೇಡಿಯೋಗ್ರಾಫರ್‌ಗಳು, ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲಾಗಿದೆ.

ವೆಂಟಿಲೇಟರ್‌ಗಳ ಕಾರ್ಯ ವಿಧಾನ, ಪಿಎಸ್ಎ ಆಮ್ಲಜನಕ ಘಟಕಗಳು ಹಾಗೂ ದ್ರವೀಯ ಔಷಧೀಯ ಆಮ್ಲಜನಕ ಕಾರ್ಯವಿಧಾನಗಳನ್ನು ಕುರಿತು ಸಿಬ್ಬಂದಿಗಳಿಗೆ ಸರಿಯಾದ ತರಬೇತಿಯನ್ನು ನೀಡಲಾಗಿದೆ.

ಇನ್ನು ನೈಋತ್ಯ ರೈಲ್ವೆಯ ಶೇ 99.59ರಷ್ಟು ಸಿಬ್ಬಂದಿ ಕೋವಿಡ್ ವಿರುದ್ಧದ ಲಸಿಕೆಯ ಮೊದಲ ಡೋಸ್ ಮತ್ತು ಶೇ 97.04 ಸಿಬ್ಬಂದಿಗಳಿಗೆ ಎರಡನೇ ಡೋಸ್ ನೀಡಲಾಗಿದೆ.

ಮುಂಚೂಣಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು, ಚಾಲನಾ ಸಿಬ್ಬಂದಿ ಹಾಗೂ ಗಾರ್ಡ್‌ಗಳು ಹಾಗೂ ನಿರ್ವಹಣಾ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಿ ಅವರ ಆರೋಗ್ಯದ ಕುರಿತು ಸಹ ಕಾಳಜಿ ವಹಿಸಲಾಗಿದೆ.

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಮಾತನಾಡಿ, "ಡಾ. ವಿಲಾಸ್ ಗುಂಡ ಅವರ ನೇತೃತ್ವದಲ್ಲಿ ವಲಯದ ವೈದ್ಯಕೀಯ ವಿಭಾಗವು ಪ್ರಸ್ತುತ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಿದ್ಧವಾಗಿದೆ" ಎಂದು ಹೇಳಿದ್ದಾರೆ.

ಕೋವಿಡ್ ಮೊದಲ ಮತ್ತು 2ನೇ ಅಲೆಯ ಸಂದರ್ಭದಂತೆ ಈ ಬಾರಿಯೂ ಜನರ ಅನುಕೂಲಕ್ಕಾಗಿ ಯಾವುದೇ ಅಡೆ-ತಡೆ ಇಲ್ಲದೇ ಸರಕುಗಳನ್ನು ಸಾಗಿಸುವ ಗುರಿಗೆ ನೈಋತ್ಯ ರೈಲ್ವೆ ಬದ್ಧವಾಗಿದೆ. ರೈಲು ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಲಾಗಿದೆ.

English summary
South western railway preparations to face Covid 3rd wave. Railway set 149 bed in Bengaluru, 74 in Mysuru and 100 in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X