ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಹಿ ಸುದ್ದಿ; ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ನೈಋತ್ಯ ರೈಲ್ವೆ ಬೆಂಗಳೂರು ನಗರ ಸೇರಿದಂತೆ ವಿವಿಧ ರೈಲು ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗಳನ್ನು ಶುಕ್ರವಾರದಿಂದ ಆರಂಭಿಸಿದೆ. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಕೌಂಟರ್‌ಗಳು ತೆರೆದಿವೆ.

ಬೆಂಗಳೂರಿನ ವಿವಿಧ ರೈಲು ನಿಲ್ದಾಣದಲ್ಲಿನ ಪ್ಯಾಸೆಂಜರ್ ರಿಸರ್ವವೇಶನ್ ಸೆಂಟರ್‌ಗಳನ್ನು ಶುಕ್ರವಾರದಿಂದ ತೆರೆಯಲಾಗಿದೆ. ಈಗ ಜನರು ಕೌಂಟರ್‌ಗೆ ಭೇಟಿ ನೀಡಿ ಮುಂಗಡೆ ಟಿಕೆಟ್ ಕಾಯ್ದಿರಿಸಬಹುದು.

ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

ಲಾಕ್ ಡೌನ್ ಅವಧಿಗೂ ಮೊದಲು ಇದ್ದಂತೆ ಮುಂಗಡ ಟಿಕೆಟ್ ಕೌಂಟರ್‌ಗಳು ಕಾರ್ಯ ನಿರ್ವಹಣೆ ಮಾಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಷ್ಟು ದಿನ ಆನ್‌ಲೈನ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳುರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

South Western Railway Opens 12 PRCS

ಮಲ್ಲೇಶ್ವರ, ಚಿಕ್ಕಬಣಾವರ, ಬಾಣಸವಾಡಿ, ಬೆಂಗಳೂರು ಪೂರ್ವ, ವೈಟ್‌ ಫೀಲ್ಡ್, ಕುಪ್ಪಂ, ಪೆನುಕೊಂಡ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಗೌರಿ ಬಿದನೂರು, ಮದ್ದೂರು ನಿಲ್ದಾಣದಲ್ಲಿನ ಕೌಂಟರ್ ಶುಕ್ರವಾರ ಆರಂಭವಾಗಿದೆ.

ಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚುಹಬ್ಬಕ್ಕಾಗಿ 392 ವಿಶೇಷ ರೈಲು, ಟಿಕೆಟ್ ದರವೂ ಹೆಚ್ಚು

ಭಾರತೀಯ ರೈಲ್ವೆ ಅಕ್ಟೋಬರ್ 20 ರಿಂದ 30ರ ತನಕ ಹಬ್ಬಗಳ ಅಂಗವಾಗಿ ವಿಶೇಷ ರೈಲು ಓಡಿಸಲಿದೆ. ಈ ರೈಲಿಗೆ ಬೇಡಿಕೆ ಇರುವುದರಿಂದ ಮುಂಗಡ ಟಿಕೆಟ್ ಕೌಂಟರ್‌ಗಳನ್ನು ಆರಂಭಿಸಲಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಕಂಟೋನ್ಮೆಂಟ್, ಕೆ. ಆರ್. ಪುರಂ ಸೇರಿದಂತೆ 15 ಮುಂಗಡ ಟಿಕೆಟ್ ಕೌಂಟರ್‌ಗಳು ಈಗಾಗಲೇ ಕಾರ್ಯವನ್ನು ನಿರ್ವಹಣೆ ಮಾಡುತ್ತಿವೆ. ಇದರ ಜೊತೆಗೆ 12 ಹೆಚ್ಚುವರಿ ಕೌಂಟರ್ ತೆರೆಯಲಾಗಿದೆ.

ಮುಂಗಡ ಟಿಕೆಟ್ ಬುಕ್ ಮಾಡಲು ಬರುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಡಪಾಡಬೇಕು. ನಿಲ್ದಾಣಗಳಲ್ಲಿ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

English summary
South western railway open the computerized Passengers Reservation Centres (PRCs) at several areas from October 16. Now people can book tickets in reserved counter in railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X