ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ದರ 5 ಪಟ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಬೆಂಗಳೂರು ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ದರವನ್ನು 5 ಪಟ್ಟು ಹೆಚ್ಚಳ ಮಾಡಲಾಗಿದೆ.

ಕೊರೊನಾ ಸೋಂಕು ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ದೇಶದ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ.

ಕೇಂದ್ರ ವಲಯದಲ್ಲಿ ಮುಂಬೈ (ಸಿಎಸ್‌ಟಿ), ಭೂಸಾವಲ್, ನಾಗ್ಪುರ, ಸೋಲಾಪುರ, ಪುಣೆ - ಐದು ವಿಭಾಗಗಳನ್ನು ಒಳಗೊಂಡ - ಎಲ್ಲಾ ನಿಲ್ದಾಣಗಳಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ದಕ್ಷಿಣ ರೈಲ್ವೆ ವಲಯದಲ್ಲಿ, ಚೆನ್ನೈನಲ್ಲಿ ಮಾತ್ರ ಪ್ಲಾಟ್‌ಫಾರ್ಮ್ ಟಿಕೆಟ್‌ನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Train

ಕೆಎಸ್ ಆರ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 10 ರಿಂದ 50 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ದರ ಏರಿಕೆ ಇಂದಿನಿಂದ ಜಾರಿಗೆ ಬಂದಿದ್ದು, ಇದು ತಾತ್ಕಾಲಿಕ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರೇ ದಯವಿಟ್ಟು ಗಮನಿಸಿಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರೇ ದಯವಿಟ್ಟು ಗಮನಿಸಿ

Recommended Video

ಅಯ್ಯೋ ಪಾಪ, ಕೋರ್ಟ್ ಮುಂದೆ ನಡೆಯಲಿಲ್ಲ Ragini ಆಟ..! | oneindia Kannada

ಪಶ್ಚಿಮ ರೈಲ್ವೆ ವಲಯದ ಆರು ವಿಭಾಗಗಳಾದ ಮುಂಬೈ, ವಡೋದರಾ, ಅಹಮದಾಬಾದ್, ರತ್ನಂ, ರಾಜ್ಕೋಟ್, ಭಾವನಗರ ಸೇರಿದಂತೆ ದೇಶದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಈ ಶುಲ್ಕ ಇಂದಿನಿಂದ ಅನ್ವಯವಾಗಲಿ.

English summary
The South Western Railway has increased the price of the platform tickets by 400 per cent, taking the present price of Rs 10 to Rs 50 in what is being called as a temporary measure to stop crowding in the station area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X