ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಜ. 24ರಿಂದ ಕೆಲವು ರೈಲುಗಳ ಸಂಚಾರ ರದ್ದು, ಪಟ್ಟಿ

|
Google Oneindia Kannada News

ಬೆಂಗಳೂರು, ಜನವರಿ 21: ಸುರಕ್ಷತಾ ಕಾಮಗಾರಿಗಳ ನಿರ್ವಹಣೆ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.

ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿಗಳ ನಿರ್ವಹಣೆ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಸಂಚಾರ ನಡೆಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜನವರಿ 24 ರಿಂದ 27ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ: 11 ಖಾಲಿ ಟ್ರಿಪ್,ನಷ್ಟ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ: 11 ಖಾಲಿ ಟ್ರಿಪ್,ನಷ್ಟ

ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು, ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಗೋವಾ-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.

ತಾಳಗುಪ್ಪ-ಮೈಸೂರು ಇಂಟರ್ ಸಿಟಿ ರೈಲು ಆರಂಭ; ವೇಳಾಪಟ್ಟಿ ತಾಳಗುಪ್ಪ-ಮೈಸೂರು ಇಂಟರ್ ಸಿಟಿ ರೈಲು ಆರಂಭ; ವೇಳಾಪಟ್ಟಿ

South Western Cancelled Diverted Train Routes

ಯಾವ-ಯಾವ ರೈಲು

* ಕೆಎಸ್ಆರ್‌-ಬೆಂಗಳೂರು ಎಕ್ಸ್‌ಪ್ರೆಸ್ 06202 ಜನವರಿ 24 ರಿಂದ 27ರ ತನಕ ಸ್ಥಗಿತ

ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಸಾಧ್ಯತೆ

* ಯಶವಂತಪುರ-ಅರಸೀಕೆರೆ ಡೆಮು ವಿಶೇಷ ರೈಲು (06275) ಸಂಚಾರ ಜ.25, 26, 27 ಭಾಗಶಃ ಸ್ಥಗಿತ. ರೈಲು ತುಮಕೂರು-ಯಶವಂತಪುರ ನಡುವೆ ಸಂಚಾರ ನಡೆಸಲಿದೆ.

* ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (02726) ಜ. 24ರಿಂದ 27ರ ತನಕ ಧಾರವಾಡ-ಅರಸೀಕೆರೆ ನಡುವೆ ಸಂಚಾರ.

* ಅರಸೀಕೆರೆ-ಯಶವಂತಪುರ ಡೆಮು ರೈಲು 06276 ಜನವರಿ 25 ರಿಂದ 29ರ ತನಕ ತುಮಕೂರು ತನಕ ಹೋಗಿ ವಾಪಸ್ ಬರಲಿದೆ.

* ಗೋವಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು 07340 ಜನವರಿ 28ರಿಂದ ಅರಸೀಕೆರೆ ತನಕ ಸಂಚಾರ ನಡೆಸಿ ಜ.29ರಂದು ವಾಪಸ್ ಗೋವಾ ಕಡೆ ಸಂಚಾರ ನಡೆಸಲಿದೆ.

Recommended Video

Corona Vaccine‌ ತಯಾರಿಕಾ ಸಂಸ್ಥೆ Serum Institute‌ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ! | Oneindia Kannada

* ಯಶವಂತಪು-ಬಿಕನೇರ್ (06587), ಯಶವಂತಪುರ-ಬಾರ್ಮರ್ (04805), ಯಶವಂತಪುರ-ಹಜರತ್ ನಿಜಾಮುದ್ದೀನ್ (06249), ಮೈಸೂರು-ವಾರಣಾಸಿ (06229) ರೈಲುಗಳು ಯಶವಂತಪುರ, ಚಿಕ್ಕಬಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚಾರ ನಡೆಸಲಿವೆ.

English summary
Due to work South western railway cancelled/ diverted following trains from January 24 to 27, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X