ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜಿನಲ್ಲಿ ವಿದ್ಯಾರ್ಥಿ ಕೊಲೆ: ಆವರಣದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ನಗರದ ಸೌಂದರ್ಯ ಕಾಲೇಜಿನಲ್ಲಿ ಹುಡುಗಿಯ ವಿಚಾರಕ್ಕೆ ಸಹಪಾಠಿಯಿಂದಲೇ ವಿದ್ಯಾರ್ಥಿಯ ಕೊಲೆ ಹಿನ್ನೆಲೆಯಲ್ಲಿ ಕಾಲೇಜಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.

ಬಾಗಲಗುಂಟೆ ಪೊಲೀಸರ ಸಲಹೆ ಮೇರೆಗೆ ಮೆಟಲ್ ಡಿಟೆಕ್ಟರ್ ಅಳವಡಿಸಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದ ವಿದ್ಯಾರ್ಥಿಗಳು ಅಪಾಯಕಾರಿ ಶಾಸ್ತ್ರಾಸ್ತ್ರಗಳನ್ನು ತಂದರೆ ಆರಂಭದಲ್ಲೇ ಪತ್ತೆ ಮಾಡಿ ಅನಾಹುತ ತಪ್ಪಿಸಲು ಸಾಧ್ಯ ಎಂಬುದು ಪೊಲೀಸರ ಅಭಿಪ್ರಾಯವಾಗಿದೆ.

ಹುಡುಗಿ ವಿಚಾರಕ್ಕೆ ಗಲಾಟೆ, ಬೆಂಗಳೂರಲ್ಲಿ ಪಿಯು ವಿದ್ಯಾರ್ಥಿ ಬರ್ಬರ ಹತ್ಯೆ ಹುಡುಗಿ ವಿಚಾರಕ್ಕೆ ಗಲಾಟೆ, ಬೆಂಗಳೂರಲ್ಲಿ ಪಿಯು ವಿದ್ಯಾರ್ಥಿ ಬರ್ಬರ ಹತ್ಯೆ

ಕಾಲೇಜಿನಲ್ಲಿ ಈ ಹಿಂದೆ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ, ಸಂಸ್ಥೆಯ ಆವರಣದಲ್ಲಿ ಒಟ್ಟು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ಆದರೆ ಕೊಲೆ ನಡೆದಿರುವ ಕಾರಣ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ತಿಳಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Soundarya College will installing metal detector case

ಆಗಾಗ ಸೌಂದರ್ಯ ಕಾಲೇಜಿಗೆ ತೆರಳಿ, ಮಾದಕವಸ್ತುಗಳ, ಅಪರಾಧ ತಡೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು, ಕಳೆದ ಆಗಸ್ಟ್ ತಿಂಗಳಿನಲ್ಲಿ ಪಿಯು ತರಗತಿಗೆ ತೆರಳಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ, ಯಾವುದೇ ಅಪರಾಧಕೃತ್ಯಗಳಲ್ಲಿ ಭಾಗವಹಿಸಬಾರದು ಎಂದು ಸೂಚನೆ ನೀಡಲಾಗಿದೆ.

ಹುಡುಗಿಯ ವಿಚಾರಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಎಂಟನೇ ಮೈಲಿ ಸಮೀಪ ಜನವರಿ 30 ರಂದು ನಡೆದಿತ್ತು.

ಎಂಟನೇ ಮೈಲಿ ಸಮೀಪವಿರುವ ಸೌಂದರ್ಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಹುಡುಗಿ ವಿಚಾರಕ್ಕೆ ಇಬ್ಬರು ಕಾಲೇಜಿನಲ್ಲೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಕ್ಷಿತ್ ಬ್ಯಾಗಿನಲ್ಲಿದ್ದ ಚಾಕು ತೆಗೆದು ದಯಾಸಾಗರ್ ಇರಿದಿದ್ದಾನೆ.

ದಯಾಸಾಗರ್ ನನ್ನು ಸಹಪಾಠಿಗಳು ಹಾಗೂ ಅಧ್ಯಾಪಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀವ್ರ ರಕ್ತಸ್ರಾವ ಉಂಟಾಗಿ ದಯಾಸಾಗರ್ ಮೃತಪಟ್ಟಿದ್ದ.

English summary
After murder incident in the college Sundarya college decided to install metal detector in the entrance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X