ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲ್ವೆ ಪ್ರಯಾಣಿಕರಿಗೆ ಎಸ್ಎಂಎಸ್ ಅಲರ್ಟ್‌

|
Google Oneindia Kannada News

ಬೆಂಗಳೂರು, ಸೆ. 29 : ತುರಂತ್, ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಎಸ್‌ಎಂಎಸ್‌ ಕಳಿಸುವ ವ್ಯವಸ್ಥೆ ಇನ್ನು 15 ದಿನದಲ್ಲಿ ಜಾರಿಯಾಗಲಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ಭಾನುವಾರ ಬೆಂಗಳೂರು ಮತ್ತು ಕೆಂಗೇರಿ ರೈಲು ನಿಲ್ದಾಣಗಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಎಂಎಸ್‌ ವ್ಯವಸ್ಥೆ ಮೂಲಕ ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಮತ್ತೆ ನೆನಪು ಮಾಡಿ ಕೊಡಲಾಗುವುದು ಎಂದರು.(ಅಂಡರ್‌ ಗ್ರೌಂಡ್‌ ಪರಿಣಾಮ, ಮೆಟ್ರೋ ಮತ್ತಷ್ಟು ನಿಧಾನ)

sadanda gowda

ಬೆಂಗಳೂರಿನಿಂದ ತುಮಕೂರು, ರಾಮನಗರ ಮತ್ತು ಹೊಸೂರಿಗೆ ಡಿಸೆಂಬರ್‌ ವೇಳೆಗೆ ಪ್ರತ್ಯೇಕ ರೈಲು ಸಂಚಾರ ಆರಂಭವಾಲಿದೆ. ಹೊಸ ರೈಲು ಆರಂಭದಿಂದ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ ಎಂದರು.

ಬೆಂಗಳೂರು ಮುಖ್ಯ ನಿಲ್ದಾಣದಿಂದ ಕೇಂಗೇರಿವರೆಗೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿದ ಸದಾನಂದ ಗೌಡ ಸಾರ್ವಜನಿಕರ ಮತ್ತು 'ಡಿ' ದರ್ಜೆ ನೌಕರರ ಸಮಸ್ಯೆ ಆಲಿಸಿದರು.(ರೈಲಿನಲ್ಲಿ ಊಟ ಬೇಕೆ 139ಗೆ ಎಸ್‌ಎಂಎಸ್ ಮಾಡಿ)

ಜನರ ಆಕ್ರೋಶ
ಸಚಿವರಿದ್ದ ರೈಲು ಕೆಂಗೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್‌ ಫಾರ್ಮ್ ಗೆ ಬಂದು ನಿಂತಿತ್ತು. ನಾಲ್ಕನೇ ಪ್ಲಾಟ್‌ ಫಾರ್ಮ್ ಬಳಿ ರೈಲಿಗಾಗಿ ಕಾಯುತ್ತಿದ್ದವರು ಒಂದು ಕ್ಷಣ ಗಡಿಬಿಡಿಗೊಳಗಾದರು. ಸಚಿವರಿಗಾಗಿ ಹೀಗೆ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕೆಂಗೇರಿ ರೈಲು ನಿಲ್ದಾಣಕ್ಕೆ ಆಗಮಿಸುವ ರೈಲು ಒಂದನೇ ಪ್ಲಾಟ್‌ ಫಾರ್ಮ್ ನಲ್ಲಿ ನಿಲ್ಲುವುದಿಲ್ಲ. ಅವು ನಾಲ್ಕನೇ ಪ್ಲಾಟ್‌ ಫಾರ್ಮ್ ಗೆ ತೆರಳುತ್ತವೆ. ಹಿರಿಯ ನಾಗರಿಕರು ಅಲ್ಲಿಗೆ ತೆರಳಲು ಹರಸಾಹಸ ಪಡಬೇಕಾಗಿದ್ದು ಪರಿಹಾರ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದರು.

English summary
Passengers boarding the Shatabdi, Rajdhani and Duronto Express trains will soon get a wake up SMS from the railways with information on their timings and platform numbers, Railway Minister Sadananda Gowda announced on Sunday. The railway minister said the service will be extended to other trains at a later stage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X