ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನಮ್ಮ ಮೆಟ್ರೋಗೆ ಸೇರಲಿವೆ 7 ಹೊಸ ರೈಲು

|
Google Oneindia Kannada News

ಬೆಂಗಳೂರು, ಡಿಸೆಂಬರ್ 07; ಶಿಘ್ರದಲ್ಲಿಯೇ ನಮ್ಮ ಮೆಟ್ರೋಗೆ 7 ಹೊಸ ರೈಲುಗಳು ಸೇರ್ಪಡೆಗೊಳ್ಳಲಿವೆ. ಪ್ರಸ್ತುತ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಒಟ್ಟು 50 ರೈಲುಗಳು ಸಂಚಾರ ನಡೆಸುತ್ತಿವೆ.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಲ್) ಅತ್ಯಾಧುನಿಕ ಹೊಸ 7 ರೈಲುಗಳನ್ನು ನಿರ್ಮಾಣ ಮಾಡಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿರುವ ಆರ್‌ಡಿಎಸ್‌ಓ ಕಳೆದ ತಿಂಗಳು ಹೊರ ರೈಲಿನ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು.

ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ

7 ಹೊಸ ರೈಲುಗಳ ಸಂಚಾರಕ್ಕೆ ಆರ್‌ಡಿಎಸ್‌ಓ ಒಪ್ಪಿಗೆ ಕೊಟ್ಟಿದೆ. ಕೆಲವು ಬದಲಾವಣೆಗಳನ್ನು ಸೂಚಿಸಿದೆ. ಮುಂದಿನ ಹಂತದಲ್ಲಿ ಬಿಇಎಂಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಒಪ್ಪಿಗೆ ಪಡೆಯಬೇಕು. ಬಳಿಕ ರೈಲು ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ 3ನೇ ಹಂತದ ತಯಾರಿ ಶುರುನಮ್ಮ ಮೆಟ್ರೋ 3ನೇ ಹಂತದ ತಯಾರಿ ಶುರು

Soon 7 New Trains Will Induct For Namma Metro

ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಾರ್ಗದಲ್ಲಿ ಓಡಿಸಲು ಈ ರೈಲುಗಳನ್ನು ಖರೀದಿ ಮಾಡಿದೆ. ಈ ಮಾರ್ಗದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 2022ರ ಅಂತ್ಯಕ್ಕೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

Recommended Video

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

ನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ ಹಾಗೂ ನಿಲ್ದಾಣಗಳ ಬಗ್ಗೆ ಮಾಹಿತಿನಮ್ಮ ಮೆಟ್ರೋ 3ನೇ ಹಂತ: ವ್ಯಾಪ್ತಿ ಹಾಗೂ ನಿಲ್ದಾಣಗಳ ಬಗ್ಗೆ ಮಾಹಿತಿ

ಹೊಸ ರೈಲುಗಳು ಬಂದ ತಕ್ಷಣ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಕಾಯುವುದಿಲ್ಲ. ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಪೂರ್ವ ಪಶ್ಚಿಮ ಕಾರಿಡಾರ್‌ಗಳಲ್ಲಿ ಅವುಗಳನ್ನು ಓಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ನಗರದಲ್ಲಿ ಪರಿಶೀಲನೆ; ಲಕ್ನೋದಲ್ಲಿರುವ ಆರ್‌ಡಿಎಸ್‌ಓನ 14 ಅಧಿಕಾರಿಗಳ ತಂಡ ಅಕ್ಟೋಬರ್ 10 ರಿಂದ 27ರ ತನಕ ಬೆಂಗಳೂರಿನಲ್ಲಿ ಹೊಸ ರೈಲುಗಳ ಪರಿಶೀಲನೆ, ಪ್ರಾಯೋಗಿಕ ಸಂಚಾರ ನಡೆಸಿದೆ. ರೈಲಿನ ವೇಗ, ತುರ್ತು ಬ್ರೇಕ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ಪರಿಶೀಲನೆ ಪೂರ್ಣಗೊಳಿಸಿದೆ.

ಸಂಪಿಗೆ ರಸ್ತೆ-ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳ ನಡುವೆ ರಾತ್ರಿ 10 ರಿಂದ ಬೆಳಗ್ಗೆ 4.30ರ ತನಕ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಒಟ್ಟು 5 ದಿನ ಪ್ರಾಯೋಗಿಕ ಸಂಚಾರ ನಿಗದಿಯಾಗಿತ್ತು. ಅವಧಿಗೂ ಮೊದಲೇ ಅದು ಪೂರ್ಣಗೊಂಡಿದ್ದು, ರೈಲು ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಕಾಮಗಾರಿ; ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಮ್ಮ ಮೆಟ್ರೋ ಕಾಮಗಾರಿ ಕೋವಿಡ್ ಕಾರಣದಿಂದಾಗಿ ವಿಳಂಬವಾಗಿತ್ತು. ಆದರೆ ಈಗ ಕಾಮಗಾರಿ ವೇಗಪಡೆದುಕೊಂಡಿದೆ. 2022ರ ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಗುರಿ ಇದೆ.

ಟಿನ್ ಫ್ಯಾಕ್ಟರಿ ಬಳಿ ಮರ ಕಡಿಯಲು ಉಂಟಾದ ಅಡೆ-ತಡೆಯಿಂದಾಗಿ ಯೋಜನೆಗೆ ಭೂ ಸ್ವಾಧೀನ ವಿಳಂಬವಾಯಿತು. ಇದರಿಂದಾಗಿ 15 ಕಿ. ಮೀ. ಮಾರ್ಗದ ಕಾಮಗಾರಿ ವಿಳಂಬಗೊಂಡು ಬಿಎಂಆರ್‌ಸಿಎಲ್‌ಗೆ ಹಿನ್ನಡೆ ಉಂಟಾಯಿತು. ಆದ್ದರಿಂದ 2021ಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ.

English summary
7 New trains will induct for Namma Metro soon. Train manufactured by BEML and BMRCL purchased it for Baiyappanahalli and Whitefield route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X