ರಾಕೇಶ್ ಅಸ್ವಸ್ಥ, ಕರ್ನಾಟಕ 'ಸಿಎಂ' ಟ್ವೀಟ್ ಬಗ್ಗೆ ಆಕ್ಷೇಪ
ಬೆಂಗಳೂರು, ಜುಲೈ 27: ಬೆಲ್ಜಿಯಂನಲ್ಲಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅಸ್ವಸ್ಥರಾಗಿರುವ ಸುದ್ದಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು ಈಗ ಚರ್ಚೆಯ ವಿಷಯವಾಗಿದೆ.[ಕರಳು ಬೇನೆ ಕಾಯಿಲೆಗೆ ಬಲಿಯಾದ ರಾಕೇಶ್ ಸಿದ್ದರಾಮಯ್ಯ]
ಸಿಎಂ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ನೆರವು ಕೋರಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿದ್ದು, ಈ ಬಗ್ಗೆ ಸುಷ್ಮಾ ಅವರು ನೆರವು ನೀಡಿದ್ದರ ಬಗ್ಗೆ ಯಾವುದೇ ತಗಾದೆ ಇಲ್ಲ. [ಮಗನನ್ನು ನೋಡಲು ಬೆಲ್ಜಿಯಂಗೆ ಹೊರಟ ಸಿದ್ದರಾಮಯ್ಯ]
ಆದರೆ, ಸಿಎಂ ಅವರ ಮಗ ರಾಕೇಶ್ ಅವರು ಬೆಲ್ಜಿಯಂನಲ್ಲಿ ಅಸ್ವಸ್ಥರಾಗಿರುವ ಸುದ್ದಿಯನ್ನು ಅಧಿಕೃತ ಟ್ವಿಟ್ಟರ್ ಖಾತೆ(@CMofKarnataka) ಯಿಂದ ಟ್ವೀಟ್ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಎದುರಾಗಿದೆ.
@CMofKarnataka ಸ್ವಾಮಿ, ವೈಯಕ್ತಿಕ ವಿಷಯವನ್ನು ಯಾಕೆ ಟ್ವೀಟ್ ಮಾಡುತ್ತೀರಿ?
— ಜೀಬಿ (@gansh83) July 27, 2016
ಬ್ರೆಲ್ಜಿಯಂನ ಬ್ರುಸೆಲ್ಸ್ ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥ ಮಗನನ್ನು ನೋಡಲು ಬ್ರುಸೆಲ್ಸ್ ಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ.
@CMofKarnataka @OfficeOfRG What an important news to be shared by CM. Don't tweet such trivial things from official IDs
— Kumar Kollipara (@kumarkollipara1) July 27, 2016
ಸದ್ಯ ಬೆಲ್ಜಿಯಂನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅಮೆರಿಕ ಅಥವಾ ಸಿಂಗಾಪುರದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಿಎಂ ಕುಟುಂಬ ಮುಂದಾಗಿದೆ. ಆದರೆ, ರಾಕೇಶ್ ಅವರ ಅನಾರೋಗ್ಯಕ್ಕೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
Let him get well soon @CMofKarnataka BTW why personal news is part of official account?
— Suresha Posavalike (@sposavalike) July 27, 2016
ಆದರೆ, ವಿದೇಶಾಂಗ ಸಚಿವಾಲಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಕೇಶ್ ಹಾಗೂ ನಾಲ್ವರು ಗೆಳೆಯರು ಫ್ರಾನ್ಸ್ ಹಾಗೂ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದರು. ಮಂಗಳವಾರ ರಾತ್ರಿ ಅವರಿಗೆ ಪ್ಯಾಂಕ್ರಿಯಾಟೈಟಿಸ್ ತೊಂದರೆ ಹೆಚ್ಚಾಗಿ ಅಸ್ವಸ್ಥರಾಗಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.