• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

9 ವರ್ಷಗಳಿಂದ ಬಿಡಿಎ ಹಾಗೂ ರೈತರ ಮಧ್ಯೆ ಇದ್ದ ಸಮಸ್ಯೆ ಬಗೆಹರೀತು,ಅಂಥದ್ದೇನು ನಡೀತು?

|

ಬೆಂಗಳೂರು,ಜನವರಿ 22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಕೆಲವು ರೈತರು ಮುಂದಾಗಿದ್ದಾರೆ.

ರೈತರ ಬೇಡಿಕೆಯನ್ನು ಪೂರೈಸಲು ಬಿಡಿಎ ಒಪ್ಪಿದ ಹಿನ್ನೆಲೆಯಲ್ಲಿ ರೈತರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಬಿಡಿಎ ಹಾಗೂ ರೈತರ ನಡುವೆ ನಡೆದ ಸಭೆಯಲ್ಲಿ 50ಕ್ಕೂ ಹೆಚ್ಚು ರೈತರು ಪಾಳ್ಗೊಂಡಿದ್ದರು. ಯಾವುದೇ ಪರಿಹಾರ ನೀಡದೆ ಅವರ ಜಮೀನನ್ನು ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ಬಿಡಿಎ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿತ್ತು. ಅಥವಾ ಅವರಿಗೆ ಪರ್ಯಾಯವಾಗಿ ಬೇರೆ ಜಾಗವನ್ನೂ ನೀಡಿರಲಿಲ್ಲ.

ಬೆಂಗಳೂರು: ಬಿಡಿಎ ಅಪಾರ್ಟ್‌ಮೆಂಟ್‌ಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್

ಕಳೆದ ಒಂಬತ್ತು ವರ್ಷಗಳಿಂದ ಕೆಲವು ಅಧಿಕಾರಿಗಳ ಅಧಕ್ಷತೆಯಿಂದಾಗಿ ಈ ಸಮಸ್ಯೆ ಹಾಗೆಯೇ ಉಳಿದಿದೆ ಕೆಲವೇ ದಿನಗಳಲ್ಲಿ ರೈತರ ಸಮಸ್ಯೆ ಬಗೆಹರಿಯಲಿದೆ ಎಂದು ಬಿಡಿಎ ಅಧ್ಯಕ್ಷ ಎಸ್‌ಆರ್ ವಿಶ್ವನಾಥ್ ತಿಳಿಸಿದ್ದಾರೆ.

ರೈತರಿಂದ ವಶಪಡಿಸಿಕೊಂಡ ಜಾಗ ಈಗ ಖಾಲಿ ಇಲ್ಲ ಹಾಗಾಗಿ ಬೇರೆ ಕಡೆ ಅವರಿಗೆ ಪ್ಲಾಟ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುವ ಬಡಾವಣೆಗೆ ಭೂಮಿ ಬಿಟ್ಟು ಕೊಡುವ ರೈತರಿಗೆ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಶೇ. 40 ರಷ್ಟು ಭೂಮಿ ರೈತರಿಗೆ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ. ಭೂ ಸ್ವಾಧೀನಕ್ಕೆ ಒಳಪಡುವ ರೈತರಿಗೆ ಮೊದಲು ಭೂಮಿ ನೀಡಿದ ಬಳಿಕವಷ್ಟೇ ಬಿಡಿಎ ಅರ್ಜಿದಾರರಿಗೆ ನಿವೇಶನ ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದರು.

ವಿಶ್ವದ ಅಗ್ರಮಾಣ್ಯ ಪ್ರಗತಿ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ತಾಂತ್ರಿಕ ನೆಲೆಯಲ್ಲಿ ಬೆಂಗಳೂರು ಅಗ್ರಗಣ್ಯ ನಗರ. ಈ ಜಾಗತಿಕ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಸಮಗ್ರ ಅಭಿವೃದ್ಧಿ ಬಗ್ಗೆ ನೀಡಿರುವ ಸಲಹೆ ಮಾರ್ಗದರ್ಶನದಂತೆ ಬೆಂಗಳೂರು ಅಭಿವೃದ್ಧಿ- 2020 ಯೋಜನೆ ರೂಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು.

   ಸಿದ್ದು ನರಿ ಬುದ್ದಿ ನೋಡಿ ರಾಹುಲ್ ಶಾಕ್!! | Oneindia Kannada

   ಬಿಡಿಎ ಅಭಿವೃದ್ಧಿ ಪಡಿಸುವ ಬಡಾವಣೆಗೆ ಭೂಮಿ ನೀಡುವ ರೈತರಿಗೆ ಶೇ. 40 ರಷ್ಟು ಅಭಿವೃದ್ಧಿ ಪಡಿಸಿದ ಜಾಗ ನೀಡಲು ತೀರ್ಮಾನಿಸಲಾಗಿದೆ. ರೈತರು ಬಯಸುವ ಕಡೆಯಲ್ಲಿ ಭೂಮಿ ನೀಡಲಾಗುವುದು.

   ಈಗಾಗಲೇ ಬಿಡಿಎಗೆ ಭೂಮಿ ರೈತರು ನಿವೇಶನಕ್ಕಾಗಿ ಅಲೆಯುತ್ತಿದ್ದಾರೆ. ಅಂತವರಿಗೆ ಮೊದಲ ಆದ್ಯತೆ ಅನುಸಾರ ನಿವೇಶನ ನೀಡಲು ಆಯುಕ್ತರಿಗೆ ಸೂಚಿಸಿದ್ದೇನೆ. ರೈತರು ಯಾರೂ ಭೂ ಪರಿಹಾರ ಅರ್ಜಿ ಹಿಡಿದು ಬಿಡಿಎಗೆ ಅಲೆಯಬಾರದು ಎಂದು ಸೂಚಿಸಿದ್ದೇನೆ ಎಂದು ಹೇಳಿದ್ದರು. ಇದೀಗ ಬಿಡಿಎ ಅಧ್ಯಕ್ಷರೂ ಕೂಡ ಇಂಥದ್ದೇ ಮಾತನಾಡಿದ್ದಾರೆ.

   English summary
   There seems to be a some hope for Kempegowda Layout as the BDA has agreed to most of the demands put forth by the farmers who had earlier refused to part with their land.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X