ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಕಣ ಸೂರ್ಯ ಗ್ರಹಣ: ಮನೆಯಿಂದ ಹೊರ ಬರದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26: ಸೂರ್ಯ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ನಾಯಕರ ಭೇಟಿಯನ್ನೂ ಕೂಡ ನಿರಾಕರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಮೊನ್ನೆಯಷ್ಟೇ ಗ್ರಹಣಕ್ಕೂ ಮುನ್ನ ಕೇರಳದ ದೇವಸ್ಥಾನಕ್ಕೆ ಹೋಗಿ ಬಿಎಸ್​ವೈ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದರು.ಗ್ರಹಣ ಸಂದರ್ಭದಲ್ಲಿ ಯಾವುದೇ ಕೆಲಸ ಕೈಗೆತ್ತಿಕೊಂಡರು ಶುಭವಾಗುವುದಿಲ್ಲ ಎಂಬುದು ವಾಡಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಹಣ ಗೋಚರಿಸುವ ವೇಳೆ ದೇವಸ್ಥಾನದ ಬಾಗಿಲುಗಳನ್ನು ತೆರೆಯುವುದಾಗಲಿ, ಪೂಜೆ ಸಲ್ಲಿಸುವುದಾಗಲಿ ಮಾಡುವುದಿಲ್ಲ. ದೇವರಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವ ಸಿಎಂ ಬಿಎಸ್​ವೈ ಅವರು ಗ್ರಹಣ ಮುಗಿಯೋವರೆಗೂ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಡಾಲರ್ಸ್​ ಕಾಲೋನಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ.

Solar Eclipse Yediyurappa Not Leaving Home

ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿಯೋವರೆಗೂ ಮನೆಯಿಂದ ಹೊರಬರದಿರಲು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ನಿರ್ಧರಿಸಿದ್ದು, ದಿನನಿತ್ಯದ ವಾಕಿಂಗ್​ಗೂ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ ಗ್ರಹಣ ಮುಗಿಯೋವರೆಗೂ ಯಾರ ಭೇಟಿಗೂ ಸಿಎಂ ಬಿಎಸ್​ವೈ ಅವಕಾಶ ಮಾಡಿಕೊಟ್ಟಿಲ್ಲ. ಸಿಎಂ ಭೇಟಿಗೆ ಅವಕಾಶ ಇಲ್ಲದೆ ಇರುವುದರಿಂದದ ಸದ್ಯ ಸಿಎಂ ಮನೆಯ ಬಳಿ ಯಾವ ನಾಯಕರೂ ತೆರಳಿಲ್ಲ.

9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ವಿಜ್ಞಾನಿಗಳು ಹಾಗೂ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಂಗಳೂರು ನೆಹರು ಪ್ಲಾನಿಟೋರಿಯಂನಲ್ಲಿ ಸೂರ್ಯಗ್ರಹಣ ವೀಕ್ಷಣೆ ಮಾಡಲಾಗುತ್ತಿದೆ. 5 ಟೆಲಿಸ್ಕೋಪ್ ಇರಿಸಲಾಗಿದೆ. ಸಿಲೋಸ್ಟಾಟ್ ನ ಮೂಲಕ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ.

ಸಿಲೋಸ್ಟಾಟ್ ಮೂಲಕ ಸೂರ್ಯನ ಚಲನೆ ನೋಡಬಹುದಾಗಿದೆ. ಸೋಲಾರ್ ಗಾಗಲ್ಸ್​​​ ಗಳನ್ನು ನೀಡಲಾಗುತ್ತದೆ. ಸೋಲಾರ್ ಗಾಗಲ್ಸ್ ನಿಂದ ಸೂರ್ಯನನ್ನು ನೋಡಬಹುದು. ಯಾವುದೇ ಬೈನಾಕ್ಯುಲರ್, ಎಕ್ಸರೇ ಬಳಕೆ ಮಾಡುವಂತಿಲ್ಲ.

English summary
Solar Eclipse: Chief Minister B.S. Yediyurappa has decided To Not not leave home and refused even a meeting with the leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X