ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣುಮಕ್ಕಳ ದಿನ ಪ್ರಯುಕ್ತ 'ಮನೆಯ ಮಾಣಿಕ್ಯ' ವೆಬಿನಾರ್ ನೀವೂ ಪಾಲ್ಗೊಳ್ಳಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ಸೋದರಿ ನಿವೇದಿತಾ ಪ್ರತಿಷ್ಠಾನವು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಿನ್ನೆಲೆಯಲ್ಲಿ ಜೂಮ್‌ ಮೀಟ್‌ನಲ್ಲಿ 'ಮನೆಯ ಮಾಣಿಕ್ಯ' ಎನ್ನುವ ವೆಬಿನಾರ್ ಆಯೋಜಿಸಿದೆ.

ಹೆಣ್ಣು ಸ್ವಸ್ಥ ಸಮಾಜದ ಕಣ್ಣು ಆಕೆ ಒಂದು ಶಕ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ದಾಪುಗಾಲಿಟ್ಟು, ಸಾಗುತ್ತಿರುವಾಕೆ. ಹೆಣ್ಣು ಹುಟ್ಟಿದಾಗ ಯಾವುದೇ ಕಾರಣಕ್ಕೂ ಬೇಸರಿಸದೆ, ಸಂಪತ್ತು ಎಂದು ಭಾವಿಸೋಣ ಎನ್ನುತ್ತಾ ಸೋದರಿ ನಿವೇದಿತಾ ಪ್ರತಿಷ್ಠಾನ ಈ ವೆಬಿನಾರ್ ಆಯೋಜನೆ ಮಾಡಿದೆ.

ವೆಬಿನಾರ್ ಅಕ್ಟೋಬರ್ 11 ರಂದು ಸಂಜೆ 5.30ಕ್ಕೆ ನಡೆಯಲಿದೆ. ಮಕ್ಕಳೇ ಮನೆಯ ಮಾಣಿಕ್ಯ, ದೇಶದ ಸಂಪತ್ತು, ಎಲ್ಲಾ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿ ತಂದೆ, ತಾಯಿ, ಶಿಕ್ಷಕ ಮತ್ತು ಸಮಾಜಕ್ಕಿದೆ. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಬೆಳಸಿಕೊಳ್ಳಲು ಸಮಾನ ಅವಕಾಶ ನೀಡಬೇಕು.

Sodari Nivedita Pratishtana Maneya Maanikya Webinar On October 11

Recommended Video

Ashwini kumar ನೇಣು ಬಿಗಿದುಕೊಂಡು ಮನೇಲಿ ಆತ್ಮಹತ್ಯೆ | Oneindia Kannada

ಮಕ್ಕಳನ್ನು ದೇಶದ ಆಸ್ತಿ ಎಂದು ಪ್ರತಿಬಿಂಬಿಸುವ ನಾವು ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು, ಮಕ್ಕಳಿಗೆ ಆಸ್ತಿ ಮಾಡುವ ಪೋಷಕರಿಗಿಂತ ಮಕ್ಕಳನ್ನು ಆಸ್ತಿಯನ್ನಾಗಿ ಬೆಳಸುವ ಪೋಷಕರ ಬಗ್ಗೆ ಹೆಮ್ಮೆ ಪಡಬೇಕು ಎಂಬುದು ಈ ವೆಬಿನಾರ್ ಆಶಯವಾಗಿದೆ. ಆಸಕ್ತರು ಈ ಲಿಂಕ್ ಮೂಲಕ ನೊಂದಾಯಿಸಿಕೊಂಡು ವೆಬಿನಾರ್ ನಲ್ಲಿ ಪಾಲ್ಗೊಳ್ಳಬಹುದು.

English summary
Sodari Nivedita Pratisthan Organising 'Maneya Maanikya' Webinar On the Occasion Of Daughters Day On October 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X