ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪಿನ್ ರಾವತ್ ಸಾವು ಸಂಭ್ರಮಿಸುತ್ತಿರುವ ದೇಶದ್ರೋಹಿಗಳ ಸರಣಿ ಬಂಧನ

|
Google Oneindia Kannada News

ಬೆಂಗಳೂರು, ಡಿ. 12: ವಾಯು ಸೇನೆ ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಆದರೆ ರಾವತ್ ಅವರ ಸಾವನ್ನು ಸಂಭ್ರಮಿಸಿ ಕೆಲ ವಿಕೃತರು ಸಂಭ್ರಮಿಸುತ್ತಿದ್ದಾರೆ. ಸಿಡಿಎಸ್ ರಾವತ್ ಅವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಾಕಿ ಸಂಭ್ರಮಿಸುತ್ತಿರುವ ವಿಕೃತರ ಸರಣಿ ಬಂಧನ ಕಾರ್ಯ ಕರ್ನಾಟಕದಲ್ಲಿ ಮುಂದುವರೆದಿದೆ.

ಬಿಪಿನ್ ರಾವತ್ ಸಾವಿನ ಬಗ್ಗೆ ಅವಹೇಳನಕಾರಿ ಪೋಸ್ಟ್‌ನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ವಿಕೃತಿ ಮೆರೆದಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿರುವ ಟಿ.ಕೆ. ವಸಂತ್ ಕುಮಾರ್ ಬಂಧಿತ ಅರೋಪಿ.

ಮೂಲತಃ ಮೈಸೂರುದವರಾಗಿರುವ ವಸಂತ ಕುಮಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನೀಷಿಯನ್ ಅಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಸಿಡಿಎಸ್ ರಾವತ್ ನಿಧನದ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ. ಈ ಕುರಿತು ದೂರು ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಪೊಲೀಸರು ವಸಂತ್ ಕುಮಾರ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Social media post on CDS Bipin Rawats Death; Lab technician arrested in Bengaluru

ಮಂಗಳೂರಿನಲ್ಲಿ ಅಕ್ಷೇಪಾರ್ಹ ಪೋಸ್ಟ್:
ಬಿಪಿನ್ ರಾವತ್ ಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದನ್ನು ಉಲ್ಲೇಖಿಸಿ ಕೆಲವು ವಿಕೃತರು ಮಂಗಳೂರಿನಲ್ಲಿ ಅಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ದೇಶದ ರಕ್ಷಣಾ ದಂಡ ನಾಯಕನ ದುರಂತ ಸಾವನ್ನು ಸಂಭ್ರಮಿಸುವ ವಿಕೃತರನ್ನು ಬಂಧಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದರು. ಇದರ ಬೆನ್ನಲ್ಲೇ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಮೂವರ ವಿರುದ್ಧ ಕೇಸು ದಾಖಲಿಸಲು ಸೂಚಿಸಿದ್ದರು. ಕಾರ್ಕಳ ಮೂಲದ ಒಬ್ಬ ಯುವಕ, ಬೆಂಗಳೂರು ಮೂಲದ ಯುವಕನ ವಿರುದ್ಧ ಕೇಸು ದಾಖಲಿಸಿದ್ದರು. ಮತ್ತೊಬ್ಬನಿಗಾಗಿ ಶೋಧ ನಡೆಸುತ್ತಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನೀಷಿಯನ್ ಬಂಧನಕ್ಕೆ ಒಳಗಾಗಿದ್ದಾನೆ.

Recommended Video

Virat Kohli ಜೊತೆ BCCI ನಡೆದುಕೊಂಡ ರೀತಿಗೆ ಮರುಗಿದ ಪಾಕಿಸ್ತಾನ ಆಟಗಾರರು | Oneindia Kannada

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಕೃತ ಪೋಸ್ಟ್ ಮಾಡುವ ದೇಶ ದ್ರೋಹಿಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ರಾವತ್ ಬಗ್ಗೆ ಹಾಕುವ ಪೋಸ್ಟ್‌ಗಳ ಬಗ್ಗೆ ಸೈಬರ್ ಪೊಲೀಸರು ಹದ್ದಿನ ಕಣ್ಣಿಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಆಕ್ಷೇಪಾರ್ಹ ಪೋಸ್ಟ್ ಹಾಕಿ ವಿಕೃತ ಮೆರೆದವರನ್ನು ಪತ್ತೆ ಮಾಡಿ ಜೈಲಿಗೆ ಕಳುಹಿಸಲಾಗುತ್ತಿದೆ.

Social media post on CDS Bipin Rawats Death; Lab technician arrested in Bengaluru

ತಮಿಳುನಾಡಿನ ಕೂನೂರು ಬಳಿ ವಾಯು ಸೇನೆ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಸೇರಿ ಹದಿಮೂರು ಮಂದಿ ದುರಂತಕ್ಕೀಡಾಗಿದ್ದರು. ಪೈಲಟ್ ವರುಣ್ ಸಿಂಗ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಬೆಂಗಳೂರಿನಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ವರುಣ್ ಸಿಂಗ್ ಆರೋಗ್ಯ ವಿಚಾರಿಸಲು ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದರು. ಮೃತ ರಾವತ್ ಮತ್ತು ವಾಯು ಸೇನೆ ಸಿಬ್ಬಂದಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗಿತ್ತು. ದುರಂತದಲ್ಲಿ ಮಡಿದ ವೀರ ಯೋಧರಿಗೆ ಇಡೀ ದೇಶವೇ ಕಣ್ಣೀರ ತರ್ಪಣ ಸಲ್ಲಿಸಿತ್ತು. ಇದರ ನಡುವೆಯೂ ವಿಕೃತಿ ಮೆರೆಯುತ್ತಿರುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸರಣಿ ಬಂಧನ ಕಾರ್ಯ ಮುಂದವರೆದಿದೆ. ದೇಶದಲ್ಲಿ ಈವರೆಗೂ ಅನೇಕ ಪ್ರಕರಣ ದಾಖಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ.

English summary
A series of detention in Karnataka continues with objectionable posts on CDS Rawat's social networking site know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X