ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಹಿಕೆ ಬದಲಾಯಿಸಿದ ಸಾಮಾಜಿಕ ತಾಣ: ಎಂಎನ್ ರೆಡ್ಡಿ

|
Google Oneindia Kannada News

ಬೆಂಗಳೂರು, ಜು. 10: ಜನರಿಗೆ ಪೊಲೀಸರ ಮೇಲಿದ್ದ ದೃಷ್ಟಿಕೋನ, ಗ್ರಹಿಕೆ ಬದಲಾಗಿದೆ. ಅದಕ್ಕೆ ಕಾರಣ ಸಾಮಾಜಿಕ ತಾಣಗಳು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ ಹೇಳಿದರು.

ತಕ್ಷಶಿಲಾ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ 'ಸೊಶಿಯಲ್ ಮೀಡಿಯಾ ಆನ್ ಕಮ್ಯೂನಿಟಿ ಪಾಲಿಸಿ ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ತಾಣಗಳು ಅಪರಾಧ ತಡೆಗೆ ಯಾವ ರೀತಿ ನೆರವಾಗುತ್ತಿದೆ? ಜನರು ಬೆಂಗಳೂರು ಪೊಲೀಸರ ತಾಣಗಳೊಂದಿಗೆ ಹೇಗೆ ಸಂಪರ್ಕ ಇರಿಸಿಕೊಳ್ಳಬೇಕು? ಮಾಹಿತಿ ಅಥವಾ ದೂರನ್ನು ದಾಖಲು ಮಾಡುವುದು ಹೇಗೆ? ಎಂಬ ಹಲವಾರು ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.[ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣಗಳ ಸಂಪೂರ್ಣ ಮಾಹಿತಿ]

ಬೆಂಗಳೂರು ಪೊಲೀಸ್ ಟ್ವಿಟ್ಟರ್ ಅಕೌಂಟ್ ಅತಿ ಶೀಘ್ರವಾಗಿ 60 ಸಾವಿರ ಫಾಲೋವರ್ ಗಳನ್ನು ಹೊಂದಿದೆ. ದಿನೇ ದಿನೇ ಬೆಳವಣಿಗೆ ಹೊಂದುತ್ತಿದ್ದು ನಾಗರಿಕರಿಂದ ವ್ಯಾಪಕ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಕಲ್ಪನೆಗೆ ಸಾಮಾಜಿಕ ತಾಣಗಳು ಹೇಗೆ ಪೂರಕವಾಗಬಲ್ಲದು. ಅಪರಾಧ ತಡೆ ನಿಟ್ಟಿನಲ್ಲಿ ನಾಗರಿಕರು ಏನು ಮಾಡಬಹುದು? ದಿನ ಪತ್ರಿಕೆ ಓದುತ್ತಿದ್ದವರ ಕೈಗೆ ಸ್ಮಾರ್ಟ್ ಫೋನ್ ಬಂದಿದೆ. ಇದನ್ನು ಬಳಕೆ ಮಾಡಿಕೊಂಡೆ ಸುರಕ್ಷಿತ ಸಮಾಜ ನಿರ್ಮಾಣ ಹೇಗೆ ಎಂಬ ವಿಚಾರಗಳನ್ನು ರೆಡ್ಡಿ ತಿಳಿಸಿಕೊಟ್ಟರು.

ಸದ್ಯದಲ್ಲೇ ಎರಡು ಸ್ವತಂತ್ರ ದೂರು ದಾಖಲು ಕೇಂದ್ರಗಳನ್ನು ತೆರೆಯಲಾಗುವುದು. 9480801000 ಗೆ ಕರೆ ಮಾಡಿ ಯಾವ ಅಡಚಣೆಯಿಲ್ಲದೇ ದೂರು ದಾಖಲಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ರೆಡ್ಡಿ ತಿಳಿಸಿದರು. ಇದೇ ವೇಳೆ ತಕ್ಷಶಿಲಾ ಸಂಸ್ಥೆಯ ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಚಾಲನೆ ನೀಡಿದರು. ರೆಡ್ಡಿ ಅವರು ಬಿಚ್ಚಿಟ್ಟ ವಿವರಗಳನ್ನು ಮುಂದೆ ವಿವರಿಸಲಾಗಿದೆ.

ಅಂತರ್ಜಾಲವೇ ಎಲ್ಲ

ಅಂತರ್ಜಾಲವೇ ಎಲ್ಲ

ಕಾರ್ಪೋರೇಟ್ ಲೋಕ ಸಹ ಅಂತರ್ಜಾದೊಂದಿಗೆ ಬೆರೆತುಕೊಂಡಿದೆ. ಪತ್ರಿಕೆಯಲ್ಲಿ ಬರುವ ಜಾಹೀರಾತನ್ನು ನೋಡಿದರೆ ಸಾಕು ಅಂತರ್ಜಾಲದ ಮಹತ್ವ ಅರಿವಿಗೆ ಬರುತ್ತದೆ. ದಿನಪತ್ರಿಕೆ ಓದದವರು ಮೊಬೈಲ್ ನೋಡುತ್ತಾರೆ.

ಟ್ರಾಫಿಕ್ ಸಮಸ್ಯೆ ತಡೆ ಕಷ್ಟ

ಟ್ರಾಫಿಕ್ ಸಮಸ್ಯೆ ತಡೆ ಕಷ್ಟ

ಟ್ರಾಫಿಕ್ ಸಮಸ್ಯೆ ತಡೆಯಲು ಇಲಾಖೆ ದಿನೇ ದಿನೇ ಹೊಸ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವೈಟ್ ಫೀಲ್ಡ್ ನಲ್ಲಿ ಏಕಮುಖ ಸಂಚಾರದ ಪ್ರಯೋಗ ನಾಗರಿಕರಿಗೆ ನಿಜಕ್ಕೂ ನೆರವಾಗಿದೆ.

 ಬದಲಾದ ಪರಿಸ್ಥಿತಿ

ಬದಲಾದ ಪರಿಸ್ಥಿತಿ

ನಾನು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಕಾಲಕ್ಕೆ ಹೋಲಿಸಿದರೆ ಪರಿಸ್ಥಿತಿ ಬದಲಾಗಿದೆ. ಪೊಲೀಸರು ಮತ್ತು ಜನರ ನಡುವಿನ ಬಾಂಧವ್ಯ ವೃದ್ಧಿಯಾಗಿದೆ. ನಮ್ಮ ಕಚೇರಿಗಳಲ್ಲಿ ದಿನದ 24 ಗಂಟೆ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾಗುವ ಮಾಹಿತಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಮೆಚ್ಚುಗೆಗೆ ಪಾತ್ರವಾದ ಬಿಎಲ್ ಆರ್ ಟ್ವಿಟ್ಟರ್

ಮೆಚ್ಚುಗೆಗೆ ಪಾತ್ರವಾದ ಬಿಎಲ್ ಆರ್ ಟ್ವಿಟ್ಟರ್

ನಾನು ಪೊಲೀಸ್ ಇಲಾಖೆ ಟ್ವಿಟ್ಟರ್ ಖಾತೆ ಆರಂಭ ಮಾಡಿದ್ದಾಗ ಪರ-ವಿರೋಧದ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಎಲ್ಲ ಅಡೆತಡೆಗಳನ್ನು ಮೀರಿ ಮುಂದಕ್ಕೆ ಸಾಗಲಾಗಿದೆ. ಕೇಂದ್ರ ಸರ್ಕಾರವೇ ಖುದ್ದು ಅಭಿನಂದನೆ ಸಲ್ಲಿಸಿದೆ. ಮೈಸೂರಿನಲ್ಲೂ ಪೊಲೀಸ್ ಇಲಾಖೆ ಟ್ಟಿಟ್ಟರ್ ಮತ್ತು ವಾಟ್ಸಪ್ ಸೇವೆ ಆರಂಭಿಸಿದೆ.

ಅಭದ್ರತೆ ಎಂದರೇನು?

ಅಭದ್ರತೆ ಎಂದರೇನು?

ವರ್ಷದಲ್ಲಿ ನೂರು ಕೊಲೆಯಾಯಿತು ಎಂದರೆ ನಗರಕ್ಕೆ ಅಭದ್ರತೆ ಕಾಡುತ್ತಿದೆ ಎಂದು ಮಾದ್ಯಮಗಳು ಕೂಗಾಡುತ್ತವೆ. 50 ಕೊಲೆಗೆ ಇಳಿದರೆ ನಗರ ಭದ್ರವಾಗಿದೆ ಎಂದು ಅರ್ಥವೇ? ಕಳೆದ ವರ್ಷ ನಗರದ ಶಾಲೆಗಳಲ್ಲಿ ಮಕ್ಕಳ ಮೇಲೆ ಕಂಡುಬಂದ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಿಜಕ್ಕೂ ಆತಂಕ ಹುಟ್ಟಿಸಿದ್ದವು. ಆದರೆ ನಂತರ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಈಗ ಅಮಥ ಪರಿಸ್ಥಿತಿ ಇಲ್ಲ.

ಅತಿ ಹೆಚ್ಚಿನ ಜನರಿಗೆ ಮಾಹಿತಿ

ಅತಿ ಹೆಚ್ಚಿನ ಜನರಿಗೆ ಮಾಹಿತಿ

ಬೆಂಗಳೂರು ಪೊಲೀಸರು ನೀಡುವ ಮಾಹಿತಿ ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪುತ್ತದೆ. ನಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಸುಲಭ ಸಂವಹನ ಸಾಧ್ಯವಾಗಿದೆ. ಹಳೆಯ ಪೊಲೀಸ್ ಬದಲಾಗಿದ್ದು ನೈಜ ಮಾಹಿತಿ ಮತ್ತು ಎಚ್ಚರಿಕೆ ವಿಚಾರಗಳು ಜನರಿಗೆ ತಕ್ಷಣ ದೊರೆಯುತ್ತವೆ.

ಚರ್ಚ್ ಸ್ಟ್ರೀಟ್ ಪ್ರಕರಣ

ಚರ್ಚ್ ಸ್ಟ್ರೀಟ್ ಪ್ರಕರಣ

ರೆಡ್ಡಿ ತಮ್ಮ ಮಾತಿನಲ್ಲಿ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣವನ್ನು ಉಲ್ಲೇಖ ಮಾಡಿದರು. ಬಾಂಬ್ ಸ್ಫೋಟದ ಮಾಹಿತಿ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಎಲ್ಲೆಡೆ ಹರಿದು ಹೋಯಿತು. ಕೆಲವರು ಚರ್ಚ್ ನಲ್ಲಿಯೇ ಬಾಂಬ್ ಇಡಲಾಗಿತ್ತು, ಇಡಲಾಗಿದೆ ಎಂದು ಬರೆದುಕೊಂಡರು. ತಕ್ಷಣ ಇಲಾಖೆ ಅದು ಚರ್ಚ್ ಸ್ಟ್ರೀಟ್ ಎಂದು ಸಾಮಾಜಿಕ ತಾಣಗಳ ಮೂಲಕ ಸ್ಪಷ್ಟನೆ ನೀಡಿತು. ಇದು ಜನರಲ್ಲಿದ್ದ ಗೊಂದಲವನ್ನು ದೂರ ಮಾಡಿತು ಎಂದು ತಿಳಿಸಿದರು.

English summary
Social media has grown leaps and bounds and it is a fact that if anyone decides to stay away from it, he or she will be left out. The Bengaluru police in particular have been extremely active on the social media and according to them they have managed to change a perception of the people thanks to this. Bengaluru City Police Commissioner, M N Reddi says that in an increasingly connected world, governance cannot be on a different level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X