ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆಯ ಹಾವನು ಕೆರೆಗೆ ಚೆಲ್ಲಿದ ಲಾಲ್ ಬಾಗ್...

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 5: ಲಾಲ್ ಬಾಗ್ ಕೆರೆಯ ಬಳಿ ಮಂಗಳವಾರ (ಸೆಪ್ಟೆಂಬರ್ 5) ಮಾಮೂಲಿನಂತೆ ಜನ ಓಡಾಡಿಕೊಂಡಿದ್ದರು. ಹತ್ತಾರು ಹಾವುಗಳು ಕಾಣಿಸಿಕೊಂಡಿದ್ದ ಜಾಗ ಅದೇನಾ ಎಂದು ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ನ ಕೇಳಿದರೆ ಹೌದು, ನಿನ್ನೆ-ಇವತ್ತು ಎಲ್ಲ ಸೇರಿ ಎಪ್ಪತ್ತು ಹಾವುಗಳನ್ನು ಇಲ್ಲಿಂದ ಹಿಡಿದುಕೊಂಡು ಹೋಗಿ, ದೂರದಲ್ಲೇ ಬಿಟ್ಟಿದ್ದಾರೆ ಎಂದು ಹೇಳಿದರು.

ಅಯ್ಯಯ್ಯೋ, ಇಲ್ನೋಡಿ, ಲಾಲ್ ಬಾಗ್ ಕೆರೆ ತುಂಬ ಹಾವೋ ಹಾವು!ಅಯ್ಯಯ್ಯೋ, ಇಲ್ನೋಡಿ, ಲಾಲ್ ಬಾಗ್ ಕೆರೆ ತುಂಬ ಹಾವೋ ಹಾವು!

ಇದೇನು ದಿವಸ ಕಾಗೆ-ಗುಬ್ಬಚ್ಚಿ ನೋಡಿದ ಹಾಗೆ ಹಾವುಗಳನ್ನು ನೋಡಿದೆ ಅಂತಿದ್ದಾರಲ್ಲಾ ಈ ಮನುಷ್ಯ ಅಂತಂದುಕೊಂಡರೆ, ಅಲ್ಲೇ ಪಕ್ಕದಲ್ಲಿ ಚುರುಮುರಿ ಮಾರುತ್ತಿದ್ದ ಮಹಿಳೆಯೂ ಕೂಡ, "ಬೆಳಗ್ಗೆ ನೀವು ಬರಬೇಕಿತ್ತು. ಅದೆಷ್ಟು ಹಾವುಗಳನ್ನು ಹಿಡಿದುಕೊಂಡು ಹೋಗಿಬಿಟ್ಟರು ಅನ್ನೋದನ್ನು ನೋಡಬಹುದಿತ್ತು" ಎಂದು ಸೇರಿಸಿದರು.

ಅಲ್ಲಿಗೆ ಖಾತ್ರಿಯಾಯಿತು. ಹಾವುಗಳ ಬಗ್ಗೆ ಅಲ್ಲಿರುವವರಿಗೆ ಯಾವುದೇ ಭಯವೂ ಇಲ್ಲ, ಜತೆಗೆ ಎರಡು ದಿನದ ಹಿಂದೆ ಇದ್ದಷ್ಟು ಗಾಬರಿಯೂ ಇಲ್ಲ. ಪತ್ರಕರ್ತರೋ? ಅದೇನು ಟಿವಿಯವರೋ, ಪೇಪರ್ ನವರೋ ಎಂಬ ಪ್ರಶ್ನೆ ಬಿಸಾಡಿ, ಉತ್ತರಕ್ಕೂ ಕಾಯದೇ ಪಟಪಟ ಮಾತನಾಡುತ್ತಿದ್ದ ಅಲ್ಲೇ ನಾನಾ ಕೆಲಸ, ವ್ಯಾಪಾರ ಮಾಡುವವರ ಮಾತಲ್ಲಿ ಅಚ್ಚರಿಯ ಲವಲೇಶವೂ ಇಣುಕುತ್ತಿರಲಿಲ್ಲ.

ಹದಿಮೂರು ವರ್ಷದ ನಂತರ ಕೋಡಿ ಬಿದ್ದ ಕೆರೆ

ಹದಿಮೂರು ವರ್ಷದ ನಂತರ ಕೋಡಿ ಬಿದ್ದ ಕೆರೆ

ಆಗ ಮಾತಿಗೆ ಸಿಕ್ಕವರು ಸೂಪರ್ ವೈಸರ್ ಎಸ್.ಆನಂದ್. "ಹದಿಮೂರು ವರ್ಷ ಆಗಿತ್ತು ಲಾಲ್ ಬಾಗ್ ಕೆರೆ ಕೋಡಿ ಬಿದ್ದು, ಮೊನ್ನೆಮೊನ್ನೆಯಷ್ಟೇ ಕೆರೆಗೆ ಪೂಜೆ ಮಾಡಿದ್ದಿವಿ. ಇಲ್ಲಿ ಹಾವುಗಳು ಯಾವಾಗಿನಿಂದಲೋ ಇವೆ. ಈಗೇನೂ ಹೊಸತಲ್ಲ" ಅವರದು ಮತ್ತದೇ ಮಾತು ಅಂದುಕೊಂಡಿದ್ದಾಯಿತು.

ಸಾವಿರಾರಲ್ಲ, ನೂರೋ ನೂರಿಪ್ಪತ್ತೋ ಇರಬಹುದು

ಸಾವಿರಾರಲ್ಲ, ನೂರೋ ನೂರಿಪ್ಪತ್ತೋ ಇರಬಹುದು

ಕೆರೆ ಕೋಡಿ ಬಿದ್ದಾಗ ಹಾವುಗಳೆಲ್ಲ ಹರಿದುಕೊಂಡು ಬಂದಿದ್ದವು. ಆಗ ಮೀನುಗಳು ಕೂಡ ಹೆಚ್ಚಾಗುತ್ತವೆ. ಆದರೆ ಪತ್ರಿಕೆಗಳಲ್ಲಿ ಬರೆದ ಹಾಗೆ, ಟಿವಿಗಳಲ್ಲಿ ತೋರಿಸಿದ ಹಾಗೆ ಸಾವಿರಾರು ಹಾವೇನೂ ಇರಲಿಲ್ಲ. ನೂರರ ಒಳಗೆ ಇರಬಹುದು. ನಿನ್ನೆಯೇ ಎಪ್ಪತ್ತರಷ್ಟು ಹಾವನ್ನು ಹಿಡಿದು ದೂರ ಬಿಟ್ಟಿದ್ದೀವಿ ಎಂದರು ಆನಂದ್.

ಮೂರು ದಿನದಿಂದ ಹಾವು ಹಿಡಿಯುವುದೇ ಕೆಲಸ

ಮೂರು ದಿನದಿಂದ ಹಾವು ಹಿಡಿಯುವುದೇ ಕೆಲಸ

ಎರಡು ದಿನದಿಂದ ಬರೀ ಹಾವು ಹಿಡಿಯುವ ಕೆಲಸವನ್ನೇ ಮಾಡಿದ್ದೀವಿ. ಹಾವುಗಳನ್ನು ಹಿಡಿದು, ಒಂದು ಡ್ರಮ್ ನಲ್ಲಿ ಹಾಕಿಕೊಂಡು ಹೋಗಿ ದೂರ ಬಿಟ್ಟು ಬಂದಿದ್ದೀವಿ. ಇಲ್ಲಿ ಈವರೆಗೆ ಹಾವುಗಳೂ ಜನರಿಗೆ ತೊಂದರೆ ಕೊಟ್ಟಿಲ್ಲ. ಜನರೂ ಹಾವುಗಳಿಗೆ ಯಾವುದೇ ಸಮಸ್ಯೆ ಮಾಡಿಲ್ಲ ಎಂದರು.

ಅವರು ಮುನಿಕೃಷ್ಣ

ಅವರು ಮುನಿಕೃಷ್ಣ

ಲಾಲ್ ಬಾಗ್ ನಲ್ಲೇ ಕೆಲಸ ಮಾಡುವ ಮುನಿಕೃಷ್ಣ ಅವರಿಗೆ ಹಾವು ಹಿಡಿಯುವುದೆಂದರೆ ಜಿರಲೆ ಹಿಡಿದಷ್ಟೇ ಸಲೀಸು. ಜಯನಗರದ ಸಿದ್ದಾಪುರದಲ್ಲಿ ವಾಸವಿರುವ ಅವರಿಗೆ ಈಗ ಐವತ್ತೇಳು ವರ್ಷ ವಯಸ್ಸು. ಇನ್ನು ಮೂರು ವರ್ಷ ಸೇವಾವಧಿ ಇದೆ. ಲಾಲ್ ಬಾಗ್ ನಲ್ಲಿ ಕಾಣಿಸಿಕೊಂಡ ಹಾವುಗಳ ಪೈಕಿ ಬಹುತೇಕ ಹಿಡಿದವರು ಅವರೇ.

ಬುಳುಬುಳು ಹರಿದುಹೋಗುತ್ತಿರುವ ಹಾವುಗಳು

ಬುಳುಬುಳು ಹರಿದುಹೋಗುತ್ತಿರುವ ಹಾವುಗಳು

ಹಾವುಗಳನ್ನು ಹಿಡಿದಿರುವುದೇನೋ ಸರಿ. ಆದರೆ ಅವುಗಳನ್ನೆಲ್ಲ ಡ್ರಮ್ ನಲ್ಲಿ ಹಾಕಿಕೊಂಡು ಹೋಗಿ, ಮತ್ತೆ ಕೆರೆಗೆ ಬಿಡುತ್ತಿರುವ ವಿಡಿಯೋ ನೋಡಬೇಕು. ಬುಳುಬುಳು ಅಂತ ಹತ್ತಾರು ಹಾವುಗಳು ಕೆರೆಗೆ ಸರಿದು ಹೋಗುವ ದೃಶ್ಯ ನೋಡಿದರೆ ಮೈ ಜುಮ್ ಅನಿಸುತ್ತದೆ.

English summary
Snakes catched during Lal bagh lake over flow, were released back to lake on September 3rd and 4th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X