ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಜನತಾದರ್ಶನದಲ್ಲಿ ಎಸ್ಎಂಎಸ್ ಸೌಲಭ್ಯ

|
Google Oneindia Kannada News

ಬೆಂಗಳೂರು, ಡಿ. 18 : ಸಿಎಂ ಸಿದ್ದರಾಮಯ್ಯ ಅವರ ಜನತಾದರ್ಶನ ಕಾರ್ಯಕ್ರಮ ಮತ್ತಷ್ಟು ಹೈಟೆಕ್ ಆಗಿದೆ. ಜನತಾದರ್ಶನದಲ್ಲಿ ಪರಿಹಾರ ಕೋರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಮನವಿಗಳ ಸ್ಥಿತಿಗತಿಯ ಮಾಹಿತಿ ನೀಡುವ ಎಸ್‌ಎಂಎಸ್‌ ಸೇವೆಯನ್ನು ಮಂಗಳವಾರದಿಂದ ಆರಂಭಿಸಲಾಗಿದೆ.

ಮಂಗಳವಾರ ಜನತಾದರ್ಶನ ಕಾರ್ಯಕ್ರಮ ನಡೆಸಿದ ಸಿಎಂ ಸಿದ್ದರಾಮಯ್ಯ ಎಸ್ಎಂಎಸ್ ಸೇವೆಗೂ ಚಾಲನೆ ನೀಡಿದ್ದಾರೆ. ಇನ್ನು ಮುಂದೆ ಜನತಾದರ್ಶನದಲ್ಲಿ ಮನವಿ ಸಲ್ಲಿಸುವವರ ವಿವರ ಮತ್ತು ವಿಷಯವನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. [ಜನತಾ ದರ್ಶನದ ಮಾಹಿತಿ ಆನ್ ಲೈನ್ ನಲ್ಲಿ]

Janata Darshan

ಮನವಿ ಸಲ್ಲಿಸಿದವರಿಗೆ ಒಂದು ಸಂಖ್ಯೆಯನ್ನು ನೀಡಲಾಗುತ್ತದೆ. ಮನವಿಯ ಜತೆಗೆ ಸಾರ್ವಜನಿಕರು ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಮನವಿ ಯಾವ ಹಂತದಲ್ಲಿದೆ, ಯಾವ ರೀತಿ ಪರಿಹಾರ ದೊರೆಯಲಿದೆ ಇತ್ಯಾದಿ ವಿವರಗಳು ಎಸ್‌ಎಂಎಸ್‌ ಮೂಲಕ ಅವರಿಗೆ ತಲುಪಲಿವೆ. ಇದರ ಜತೆಗೆ ಸಾರ್ವಜನಿಕರು 44554455 ಕರೆ ಉಚಿತವಾಗಿಯೂ ಮಾಹಿತಿ ಪಡೆದುಕೊಳ್ಳಬಹುದು.

ಡಿ.ಕೆ.ಸುರೇಶ್ ವಿರುದ್ಧ ದೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಂಗಳವಾರ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ದೂರು ನೀಡಲಾಗಿದೆ. ಕನಕಪುರದಲ್ಲಿ ನಮ್ಮ ಜಮೀನಿನ ಪಕ್ಕದಲ್ಲಿ ಲಿಂಗಪ್ಪ ಎನ್ನುವವರ ಹೆಸರಿ­ನಲ್ಲಿ ಡಿ.ಕೆ. ಸುರೇಶ್‌ ಕಲ್ಲು ಗಣಿಗಾರಿಕೆ ನಡೆಸುತ್ತಿ­ದ್ದಾರೆ.

ಅಲ್ಲಿ ನಡೆಸುವ ಸ್ಫೋಟದಿಂದ ನಮ್ಮ ಜಮೀನಿನಲ್ಲಿ ಕಲ್ಲುಗಳು ಬೀಳುತ್ತಿವೆ. ಗಣಿಗಾರಿಕೆಯಿಂದ ಕೃಷಿ ಚಟುವಟಿಕೆಗಳನ್ನು ನಡೆಸುವುದು ಕಷ್ಟವಾಗಿದೆ ಎಂದು ಸೇನೆಯಲ್ಲಿರುವ ಸುಬೇ­ದಾರ್‌ ನಾಗರಾಜಯ್ಯ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದರು. ಗಣಿಗಾರಿಕೆ ದೂಳಿನಿಂದ ನಮಗೆ ಬಹಳ ತೊಂದರೆಯಾಗುತ್ತಿದೆ. ಆದರೆ, ನಮಗೆ ಇದುವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

English summary
People who attend Chief Minister Siddaramaiah’s Janata Darshan programme will henceforth get SMS alerts on the status of their applications within 10 days of submitting their grievances. A decision to this effect was taken at the Janata Darshan programme held at the chief minister’s home office in Bangalore on Tuesday, December 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X