ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಗರೇಟು ಸೇದ್ತೀರಾ? ಸೇದಲ್ಲವಾ? ಏನಾದರೂ ನೀವಿದನ್ನು ಓದಲೇಬೇಕು

|
Google Oneindia Kannada News

ಸಿಗರೇಟು ಸೇದುವುದರ ದುಷ್ಪರಿಣಾಮದ ಬಗ್ಗೆ ಎಷ್ಟೇ ಬೊಂಬಡಾ ಬಜಾಯಿಸಿದರೂ ಪರಿಣಾಮ ಆಗಿಲ್ಲ ಎಂದು ಅಂದುಕೊಳ್ಳುತ್ತಿರುವವರಿಗೆ ಈ ವರದಿ ಉತ್ತರವಾಗಿದೆ. ಕಳೆದ ಎರಡು ವರ್ಷಗಳ ಅವಧಿಯ ಅಕ್ಟೋಬರ್/ನವೆಂಬರ್ ನಲ್ಲಿ ಮಾಡಿದ ಎರಡು ಹಂತದ ಸಮೀಕ್ಷೆ ಬಹಳ ಆಸಕ್ತಿಕರ ಸಂಗತಿಗಳನ್ನು ಹೊರಕ್ಕೆ ಹಾಕಿದೆ.

ಬೆಂಗಳೂರು ನಗರದ ಎಂಟು ವಲಯದ‌, ಮೂವತ್ತು ವಿಭಾಗದಲ್ಲಿ ಒಂಬತ್ತು ಬಗೆಯ ಸಾರ್ವಜನಿಕ ಸ್ಥಳಗಳಲ್ಲಿ ದತ್ತಾಂಶ ಕಲೆ ಹಾಕಲಾಗಿದೆ. ಹ್ಞಾಂ, ಒಂದು ಮಾತು ಸಮೀಕ್ಷೆಗಾಗಿ ಪರಿಶೀಲನೆ, ಪ್ರಶ್ನೋತ್ತರ ಮಾದರಿ ಅನುಸರಿಸಲಾಗಿದೆ. ಮೊದಲ ಸುತ್ತಿನಲ್ಲಿ 1358 ಹಾಗೂ ಎರಡನೇ ಸುತ್ತಿನಲ್ಲಿ 1382 ಮಂದಿ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಕ್ಲಬ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ ಕರ್ನಾಟಕದಲ್ಲಿ ಕ್ಲಬ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ

ಈ ಸಮೀಕ್ಷೆಯಲ್ಲಿ ಬಯಲಾದ ಸಂಗತಿಗಳು ಹೀಗಿವೆ:

* ಒಂದು ವರ್ಷದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಪ್ರಮಾಣ ಶೇ 7.85ರಷ್ಟು ಕಡಿಮೆಯಾಗಿದೆ.

* ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂದು ಫಲಕ ಹಾಕುವುದು ಶೇ 21ರಷ್ಟು ಹೆಚ್ಚಾಗಿದೆ.

* ದಾಸರಹಳ್ಳಿ, ದಕ್ಷಿಣ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ ನಿಯಮ ಪಾಲನೆ ಹೆಚ್ಚಳದ ಪ್ರಮಾಣ 2017 5ರಿಂದ19% ಹಾಗೂ ಕಳೆದ ವರ್ಷ 56ರಿಂದ 67%ಗೆ ಏರಿಕೆ ಆಗಿದೆ.

Smoke Free Bengaluru sees 21 percent progress in compliance

* ಪೂರ್ವ, ಪಶ್ಚಿಮ, ಮಹದೇವಪುರ ಮತ್ತು ಯಲಹಂಕ ವಲಯದಲ್ಲಿ ಯಾವುದೇ ಬದಲಾವಣೆಯಿಲ್ಲ.

* ಎಲ್ಲಿ ಸಿಗರೇಟು ಮಾರಾಟ ಮಾಡುತ್ತಾರೋ ಅಲ್ಲಿ 70.5% ಮಂದಿ ಧೂಮಪಾನ ಮಾಡುತ್ತಾರೆ. ಇದರಿಂದ ಕೋಟ್ಪಾ ಕಾಯ್ದೆ ಅತಿ ಹೆಚ್ಚು ಉಲ್ಲಂಘನೆ ಆಗುತ್ತದೆ. ಇನ್ನು ಎಲ್ಲಿ ಬೋರ್ಡ್ ಹಾಕಲಾಗಿರುತ್ತದೋ ಅಲ್ಲೇ ಧೂಮಪಾನ ಮಾಡುವ ಪ್ರಮಾಣ 49.8%.

ಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆಇ-ಸಿಗರೇಟ್, ಇ-ಹುಕ್ಕಾ ನಿಷೇಧಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳಿಗೆ ಸೂಚನೆ

ಸಾರ್ವಜನಿಕ ಸ್ಥಳಗಳು ಎಂದು ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ಸಂಚಾರಿ ವಾಹನಗಳು, ಹೋಟೆಲ್- ರೆಸ್ಟೋರೆಂಟ್ ಗಳು, ಸಿನಿಮಾ ಮಂದಿರ, ಆಡಿಟೋರಿಯಂ, ಕಚೇರಿ/ಕೆಲಸದ ಸ್ಥಳ, ವಾಣಿಜ್ಯ ಪ್ರದೇಶ, ಸಿಗರೇಟು ಮಾರಾಟದ ಸ್ಥಳವನ್ನು ಪರಿಗಣಿಸಲಾಗಿದೆ. ಹೋಟೆಲ್-ದರ್ಶಿನಿ, ರೆಸ್ಟೋರೆಂಟ್ ಗಳು ಹಾಗೂ ಶೈಕ್ಷಣಿಕ ಕೇಂದ್ರಗಳ ಬಳಿ ಹೆಚ್ಚು ನಿಯಮ ಉಲ್ಲಂಘನೆ ಆಗುತ್ತಿರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಈ ಸಮೀಕ್ಷೆಯನ್ನು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಬಿಡುಗಡೆ ಮಾಡಿದ್ದಾರೆ. ಧೂಮಪಾನದಿಂದ ಆಗುವ ಪರೋಕ್ಷ ಪ್ರಭಾವಗಳನ್ನು ಕೂಡ ವಿವರಿಸಲಾಗಿದೆ. ಈ ವರದಿಯನ್ನು ಓದುವಾಗ ನಿಮ್ಮ ಕೈಲೇನಾದರೂ ಸಿಗರೇಟ್ ಇದೆಯಾ? ಹಾಗಿದ್ದರೆ ಯೋಚಿಸಿ, ನಿಮ್ಮ ಆರೋಗ್ಯ, ಮತ್ತೊಬ್ಬರ ಆರೋಗ್ಯ, ಬೆಂಗಳೂರಿನ ಸೌಂದರ್ಯ, ಗೌರವ, ಕಾನೂನು ಎಲ್ಲವನ್ನೂ ಮಣ್ಣು ಪಾಲು ಮಾಡುತ್ತಿದ್ದೀರಿ.

Smoke Free Bengaluru sees 21 percent progress in compliance

ಕರ್ನಾಟಕದಲ್ಲಿ ಎರಡು ಕೋಟಿ ಮಂದಿ ಒಂದಲ್ಲ ಒಂದು ಬಗೆಯಲ್ಲಿ ತಂಬಾಕು ಸೇವನೆ ಮಾಡುತ್ತಾರೆ. ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸಮೀಕ್ಷೆ ಹಾಗೂ ಗ್ಲೋಬಲ್ ಯೂಥ್ ಟೊಬ್ಯಾಕೋ ಸಮೀಕ್ಷೆ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ 37% ವಯಸ್ಕರರು, 22% ಯುವ ಸಮುದಾಯದವರು ಸಾರ್ವಜನಿಕ ಸ್ಥಳಗಳಲ್ಲಿ ಸೆಕೆಂಡ್ ಹ್ಯಾಂಡ್ ಸ್ಮೋಕ್ ಗೆ ಗುರಿಯಾಗುತ್ತಾರೆ. ಇದರಿಂದ ಕ್ಯಾನ್ಸರ್, ಹೃದಯ ರೋಗ, ಲಕ್ವ, ಶ್ವಾಸಕೋಶ ರೋಗ ಅನುಭವಿಸುತ್ತಾರೆ.

ಹೋಟೆಲ್, ಬಾರ್‌ನಲ್ಲಿ ಧಮ್ ಹೊಡೆಯಂಗಿಲ್ಲ: ಸ್ಮೋಕ್ ಝೋನ್ ಕಡ್ಡಾಯಹೋಟೆಲ್, ಬಾರ್‌ನಲ್ಲಿ ಧಮ್ ಹೊಡೆಯಂಗಿಲ್ಲ: ಸ್ಮೋಕ್ ಝೋನ್ ಕಡ್ಡಾಯ

ಇಡೀ ಕರ್ನಾಟಕದ ಜನಸಂಖ್ಯೆಯಲ್ಲಿ ಹದಿನಾರು ಪರ್ಸೆಂಟ್ ನಷ್ಟಿರುವ ಬೆಂಗಳೂರು ಜನಸಂಖ್ಯೆ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಏಕೆಂದರೆ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವನೆಯಿಂದ ಧೂಮಪಾನಿಗೆ ಮಾತ್ರವಲ್ಲ, ಅವರ ಅಕ್ಕಪಕ್ಕದವರಿಗೂ ತೊಂದರೆ. ಅಂದಹಾಗೆ ಬಿಬಿಎಂಪಿಯಿಂದ ತಂಬಾಕುಮುಕ್ತ ಬೆಂಗಳೂರು ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ.

English summary
In the last one year, Bengaluru city has seen 21% increase in the compliance to display of "No Smoking Signage” in public places with South Zone being the best jurisdiction when it comes to implementation of tobacco control related laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X