ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬ್ಬನ್‌ಪಾರ್ಕ್‌ನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭ

|
Google Oneindia Kannada News

ಬೆಂಗಳೂರು, ಜನವರಿ 18: ಕಬ್ಬನ್‌ಪಾರ್ಕ್‌ನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭಗೊಂಡಿದೆ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಬ್ಬನ್‌ ಉದ್ಯಾನದಲ್ಲಿ ಪಾದಚಾರಿ ಮಾರ್ಗ ಮತ್ತು ಜಾಗಿಂಗ್ ಪಾಥ್ ನವೀಕರಣ ಕಾಮಗಾರಿ ಶುರುವಾಗಿದೆ.

ಕಬ್ಬನ್ ಉದ್ಯಾನದ ಅಭಿವೃದ್ಧಿಗಾಗಿ ಎರಡು ಹಂತಗಳಲ್ಲಿ ವಿವಿಧ ಯೋಜನೆಗಳನ್ನು ರೂಪಸಿಲಾಗಿದೆ. ಮೊದಲ ಹಂತದಲ್ಲಿ 17 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉದ್ಯಾನವನ್ನು ಮತ್ತಷ್ಟು ಸುಂದರಗೊಳಿಸಲು ಸಾರ್ವಜನಿಕರು, ಪಾದಚಾರಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

2 ಹಂತದಲ್ಲಿ ಕಾಮಗಾರಿ ನಡೆಯಲಿದೆ

2 ಹಂತದಲ್ಲಿ ಕಾಮಗಾರಿ ನಡೆಯಲಿದೆ

ಕಬ್ಬನ್ ಉದ್ಯಾನದ ಕಾಮಗಾರಿಗಳನ್ನು ಎ ಮತ್ತು ಬಿ ಎಂಬುದಾಗಿ ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿಕಬ್ಬನ್ ಉದ್ಯಾನದ ರಕ್ಷಣೆ, ಜತೆಗೆ 4 ಕಿ.ಮೀ ಉದ್ದದ ಫೂಟ್‌ಪಾತ್‌ಗಳ ಮರು ಅಭಿವೃದ್ಧಿ, ಹಾಳಾದ ಕಲ್ಲುಗಳನ್ನು ತೆಗೆದುಹಾಕುವುದು, ನಾಲ್ಕು ಕಿ.ಮೀ ನಷ್ಟು ಜಾಗಿಂಗ್ ಪಾಥ್ ಅಭಿವೃದ್ಧಿಪಡಿಸುವುದು, ಲೋಟಸ್ ಪಾಂಡ್‌ನ ಆಧುನೀಕರಣಗೊಳಿಸುವ ಕಾಮಗಾರಿಯನ್ನು ಪಟ್ಟಿ ಮಾಡಲಾಗಿದೆ.
ಇದಕ್ಕೆ 17.55 ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡನೇ ಹಂತದಲ್ಲಿ 'ಕರಗ'ದ ಕುಂಟೆ ಅಭಿವೃದ್ಧಿ, ಮಕ್ಕಳ ಆಟದ ಉದ್ಯಾನ,ಉದ್ಯಾನದ ಆಯ್ದ ಸ್ಥಳಗಳಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ, ಆಯುರ್ವೇದ ಗಾರ್ಡನ್, ಡಸ್ಟ್‌ಬಿನ್‌ಗಳ ಅಳವಡಿಕೆ, ಸೈಕಲ್ ಸ್ಟ್ಯಾಂಡ್‌ಗಳು ಸೇರಿವೆ.

ಕಾಮಗಾರಿಯ ವಿವಿರ

ಕಾಮಗಾರಿಯ ವಿವಿರ

ಉದ್ಯಾನದಲ್ಲಿ ಸದ್ಯ 4 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳ ಕಾಮಗಾರಿ ಆರಂಭಿಸಲಾಗಿದೆ. ಜತೆಗೆ ತ್ಯಾಜ್ಯ ಮತ್ತು ಪಾಚಿ ತುಂಬಿಕೊಂಡಿದ್ದ ತಾವರೆಕೊಳದ ನವೀಕರಣ ಕಾರ್ಯವನ್ನು ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಹಲವು ಕಾಮಗಾರಿಗಳು ನಡೆಯುತ್ತಿವೆ ಎಂದು ರಾಜ್ಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಜೆ ಗುಣವಂತ ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲೇ ಕಾಮಗಾರಿ ಆರಂಭವಾಗಿತ್ತು

ಕಳೆದ ಮಾರ್ಚ್‌ನಲ್ಲೇ ಕಾಮಗಾರಿ ಆರಂಭವಾಗಿತ್ತು

ಕಳೆದ ಮಾರ್ಚ್‌ನಲ್ಲೇ ಕಾಮಗಾರಿಗಳು ಆರಂಭವಾಗಿದ್ದವು. ಈ ವೇಳೆಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಮೊದಲ ಹಂತದ ಕಾಮಗಾರಿಗಳು ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ.

Recommended Video

karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada
ಖಾಲಿ ಇರುವ ಜಾಗದಲ್ಲಿ ಆಕರ್ಷಕ ಗಿಡಗಳು

ಖಾಲಿ ಇರುವ ಜಾಗದಲ್ಲಿ ಆಕರ್ಷಕ ಗಿಡಗಳು

ಮೊದಲ ಹಂತದಲ್ಲಿ ವಾಯುವಿಹಾರಿಗಳಿಗಾಗಿ ಪಾದಚಾರಿ ಮಾರ್ಗ, ಜಾಗಿಂಗ್ ಪಥಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಜತೆಗೆ ಉದ್ಯಾನದಲ್ಲಿ ಖಾಲಿ ಇರುವ ಭಾಗಗಳಲ್ಲಿ ವಿವಿಧ ಆಕರ್ಷಕ ಗಿಡಗಳನ್ನು ನೆಟ್ಟು ಹಸಿರೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ.

English summary
Smart City Project Works Begins At Cubbon Park In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X